Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ವಿಕಲಚೇತನ ಮಕ್ಕಳ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸುವ ಕಾರ್ಯವಾಗಬೇಕಿದೆ : ಕೆ.ಎಸ್.ನವೀನ್

Facebook
Twitter
Telegram
WhatsApp

 

ವರದಿ ಮತ್ತು ಫೋಟೋ
 ಸುರೇಶ್ ಪಟ್ಟಣ್,                         
ಮೊ : 87220 22817

ಚಿತ್ರದುರ್ಗ,(ಡಿ.03) :  ವಿಕಲಚೇತನರಲ್ಲಿ ಇರುವ ಶಕ್ತಿಯನ್ನು ಗುರುತಿಸಿ ಅದಕ್ಕೆ ತಕ್ಕ ಪ್ರೋತ್ಸಾಹ ನೀಡಿದರೆ ಸಾಮಾನ್ಯ ವ್ಯಕ್ತಿಗಿಂತ ಹೆಚ್ಚಿನ ರೀತಿಯಲ್ಲಿ ಸಾಧನೆಯನ್ನು ಮಾಡುತ್ತಾರೆ ಅವರಲ್ಲಿನ ಪ್ರತಿಭೆಯನ್ನು ಗುರುತಿಸುವ ಕಾರ್ಯವಾಗಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ಅಭೀಪ್ರಾಯಪಟ್ಟಿದ್ದಾರೆ.

ಜಿಲ್ಲಾಡಳಿತ, ಜಿ.ಪಂ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ವಿಕಲಚೇತನರ ಕ್ಷೇತ್ರದಲ್ಲಿ ಶ್ರಮಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು, ವಿವಿದೋದ್ದೇಶ/ನಗರ/ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಇವರ ಸಹಯೋಗದೊಂದಿಗೆ ನಗರದ ಕರುವಿನಕಟ್ಟೆ ಸರ್ಕಲ್ ಬಳಿಯ ಸದ್ಗುರು ಕಬೀರಾನಂದಾಶ್ರಮ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ  ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ನಿಮ್ಮಲ್ಲಿನ ದೇಹದ ನ್ಯೂನತೆಯನ್ನು ಮೀರಿ ಇಲ್ಲಿ ಪ್ರತಿಭೆಯನ್ನು ಪ್ರದರ್ಶನ ಮಾಡಲಾಗಿದೆ. ನಿಮಗೆ ದೇವರು ದೈಹಿಕವಾಗಿ ನೂನ್ಯತೆಯನ್ನು ನೀಡಿದರೂ ಸಹಾ ಮಾನಸಿಕವಾಗಿ ಬೇರೊಂದು ಪ್ರತಿಭೆಯನ್ನು ನೀಡಿರುತ್ತಾನೆ. ನಿಮ್ಮ ನೂನ್ಯತೆಯಿಂದ ನೀವುಗಳು ಹಿಂದೆ ಸರಿಯದೇ ಛಲದಿಂದ ಪ್ರದರ್ಶನವನ್ನು ಮಾಡಬೇಕಿದೆ. ಮಕ್ಕಳು ತಮಗೆ ಈ ರೀತಿ ಆಗಿದೆ ಎಂದು ಉತ್ಸಾಹವನ್ನು ಕಳೆದುಕೊಳ್ಳದೆ ಶಕ್ತಿವಂತರಾಗಿರಬೇಕಿದೆ. ದಿವ್ಯ ಚೇತನರ ಶಕ್ತಿ ಮನಸ್ಸಿನಿಂದಲೇ ಮುನ್ನುಗ್ಗುವ ಚೈತನ್ನವನ್ನು ಸಮಾಜ ಮತ್ತು ಸರ್ಕಾರ ನೀಡುತ್ತಿದೆ. ಇದನ್ನು ಬಳಸಿಕೊಂಡು ಮುನ್ನುಗ್ಗಬೇಕಿದೆ ಎಂದು ವಿಕಲಚೇತನರಿಗೆ ಕರೆ ನೀಡಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ಪರವಾಗಿ ಕೆಲಸವನ್ನು ಮಾಡುತ್ತಿವೆ. ವಿವಿಧ ರೀತಿಯಬ ಯೋಜನೆಯನ್ನು ಅನುಷ್ಠಾನ ಮಾಡುವುದರ ಮೂಲಕ ಎಲ್ಲರಂತೆ ನೀವುಗಳು ಸಹಾ ಸಮಾಜದಲ್ಲಿ ಮುಖ್ಯವಾಹಿನಿಗೆ ಬರುವಂತಾಗಲಿ ಎಂದು ಆಶಿಸುತ್ತಿದೆ. ದೈಹಿಕವಾಗಿ ನೂನ್ಯತೆಯನ್ನು ಹೊಂದಿದ ಹಲವಾರು ಜನತೆ ವಿವಿಧ ರೀತಿಯ ಸಾಧನೆಯನ್ನು ಮಾಡಿದ್ದಾರೆ ಅವುಗಳು ನಿಮಗೆ ಸ್ಪೂರ್ತಿಯಾಗಬೇಕಿದೆ ಪೋಷಕರು ತಮ್ಮ ವಿಕಲಚೇತನ ಮಕ್ಕಳಲ್ಲಿ ಇರುವಂತ ವಿಶೇಷವಾದ ಪ್ರತಿಭೆಯನ್ನು ಗುರುತಿಸುವ ಅದನ್ನು ಪ್ರೋತ್ಸಾಹಿಸುವ ಕಾರ್ಯವನ್ನು ಮಾಡಬೇಕಿದೆ ಆಗ ಮಾತ್ರ ಮಕ್ಕಳ ಪ್ರತಿಭೆ ಹೂರ ಬರಲು ಸಾಧ್ಯವಿದೆ ಎಂದು ನವೀನ್ ತಿಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಂ.ಎಸ್.ದಿವಾಕರ್ ಮಾತನಾಡಿ, ಈ ರೀತಿಯಾದ ಮಕ್ಕಳಲ್ಲಿನ ವಿಶೇಷವಾದ ಚೈತನ್ಯವನ್ನು ಗುರುತಿಸುವುದು ನಮ್ಮ ಕರ್ತವ್ಯವಾಗಿದೆ. ಸರ್ಕಾರವೂ ಸಹಾ ಆರ್ಥೀಕವಾಗಿ ಮತ್ತು ಭೌತಿಕವಾಗಿ ವಿವಿಧ ರೀತಿಯ ಸಹಕಾರವನ್ನು ನೀಡುತ್ತಿದೆ.ವಿಕಲ ಚೇತನರಲ್ಲಿ ವಿಶೇಷವಾದ ಚೈತನ್ಯ ಇದೆ. ಮಾನಸಿಕವಾಗಿ ದುರ್ಬಲರಾಗಿದ್ದರೂ ಅವರು ಮಾನಸಿಕವಾಗಿ ವಿಶÉೀಷವಾದ ಶಕ್ತಿಯನ್ನು ಹೊಂದಿರುತ್ತಾರೆ, ಅದನ್ನು ಗುರುತಿಸುವ ಕಾರ್ಯವಾಗಬೇಕಿದೆ. ನಮ್ಮಲ್ಲಿ ಎಲ್ಲಾ ಚನ್ನಾಗಿ ಇದ್ದೂರು ಸಹಾ ನಾವುಗಳು ಏನನ್ನು ಸಾಧನೆ ಮಾಡಲು ಆಗುತ್ತಿಲ್ಲ ಅದರೆ ವಿಕಲಚೇತನರಾಗಿದ್ದರೂ ಸಹಾ ಏನನ್ನಾದರೂ ಸಾಧನೆಯನ್ನು ಮಾಡಿ ತೋರಿಸುತ್ತಿದ್ದಾರೆ ಎಂದರು.

ವಿಕಲಚೇತನರಲ್ಲಿ ಇರುವ ವಿಶೇಷವಾದ ಚೈತನ್ಯ ದೇವರು ನೀಡಿದ ವರವಾಗಿದೆ. ಯಾರೂ ಸಹಾ ನಾವು ವಿಕಲಚೇತನರು ಎಂಬ ಭಾವನೆಯನ್ನು ಹೊಂದದೆ ಆತ್ಮಸ್ಥರ್ಯವನ್ನು ಕುಂದದೆ ಸರ್ಕಾರ ಎಲ್ಲಾ ರೀತಿಯ ಸಹಾಯವನ್ನು ಮಾಡಲು ಸಿದ್ದವಿದೆ. ದೈಹಿಕವಾಗಿ ನೀವುಗಳು ದುರ್ಬಲರಾಗಿದ್ದರೂ ಸಹಾ ಮಾನಸಿಕವಾಗಿ ಶಕ್ತಿಯನ್ನು ಹೊಂದಿರುತ್ತೀರಾ, ನಿಮ್ಮನ್ನು ನೋಡಿ ಇತರರು ಕಲಿಯಬೇಕಿದೆ ಈ ರೀತಿಯಾಗಿ ಕೇವಲ ಒಂದು ದಿನ ಮಾತ್ರ ಸೀಮೀತವಾಗಿರದೇ ದಿನ ನಿತ್ಯ ಇಂತಹ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರ ಮೂಲಕ ಸಾಮಾನ್ಯರಂತೆ ನಾವು ಸಹಾ ಎಂಬ ಭಾವನೆ ಬರಬೇಕಿದೆ ಎಂದು ದಿವಾಕರ ತಿಳಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೆಶಕರಾದ ರವಿಶಂಕರ್ ರೆಡ್ಡಿ ಮಾತನಾಡಿ, ವಿಕಲಚೇತನರು ಸಹಾ ಸಮಾಜ ಮುಖಿಯಾಗಿ ಸ್ವಾವಲಂಬಿಗಳಾಗಬೇಕಿದೆ. ಇದು ಸಮಾಜದ ಮತ್ತು ಸರ್ಕಾರ ಚಿಂತನೆಯಾಗಿದೆ. ನೀವುಗಳುನ ಯಾರೂ ಸಹಾ ಧೃತಿಗೆಡಭಾರದು, ಜೀವನವನ್ನು ಸವಾಲ್ ಆಗಿ ಸ್ವೀಕಾರ ಮಾಡಬೇಕಿದೆ ಸಮಾಜಕ್ಕೆ ಒಳ್ಳೆಯೆ ಕೆಲಸವನ್ನು ಮಾಡಬೇಕಿದೆ. ವಿಕಲಚೇತನರಿಗೆ ವಿಶೇಷವಾದ ಕಾಳಜಿಯನ್ನು ವಹಿಸಬೇಕಿದೆ. ಇಂತಹ ಮಕ್ಕಳಿಗೆ ಜನ್ಮ ನೀಡಿದ್ದೇವೆ ಎಂದು ತಾಯಂದಿರು ನೋಂದಕೊಳ್ಳಭಾರದು ಅಧಿಕಾರಿಗಳು ನಿಮ್ಮ ಸೇವೆಯನ್ನು ಮಾಡಲು ಸದಾ ಸಿದ್ದರಿದ್ದಾರೆ ಎಂದರು.

ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ. ವೈಶಾಲಿ ಪ್ರಸ್ತಾವಿಕವಾಗಿ ಮಾತನಾಡಿ, ಸರ್ಕಾರ ವಿಕಲಚೇತನರಿಗಾಗಿ ವಿವಿಧ ರೀತಿಯ ಸೌಲಭ್ಯವನ್ನು ನೀಡುತ್ತಿದೆ. ಇದರಲ್ಲಿ ವಿಶಿಷ್ಟ ಗುರುತಿನ ಚೀಟಿ, ಮಾಸಿಕ ನಿರ್ವಹಣಾ ಭತ್ಯೆ, ವಿದ್ಯಾರ್ಥಿ ವೇತನ, ಪ್ರತಿಭಾವಂತರಿಗೆ ಪ್ರೋತ್ಸಾಹ ಧನ, ಉನ್ನತ ಶಿಕ್ಷಣ ಪಡೆಯುವವರಿಗೆ ಶುಲ್ಕ ಮರು ಪಾವತಿ, ವಿವಿಧ ವಿಕಲಚೇತನರಿಗೆ ಸಾಧನೆ ಸಲಕರಣೆ ವಿತರಣೆ, ಸ್ವಯಂ ಉದ್ಯೋಗ ಮಾಡಲು ಸಹಾಯ, ಅಂಧ ವಿದ್ಯಾರ್ಥಿಗಳಿಗೆ ಬ್ರ್ಯೆಲ್ ಕಿಟ್ ಯೋಜನೆ, ವಿಕಲಚೇತನರನ್ನು ವಿವಾಹವಾದ ಸಾಮಾನ್ಯ ವ್ಯಕ್ತಿಗೆ ಪ್ರೋತ್ಸಾಹ ಧನ, ಅಂಧ ಮಹಿಳೆಯರಿಗೆ ಜನಿಸುವ ಮಕ್ಕಳಿಗೆ ಶಿಶು ಪಾಲನಾ ಭತ್ಯೆ, ಉದ್ಯೋಗದಲ್ಲಿ ಮೀಸಲಾತಿ, ವಿಕಲಚೇತನ ಸರ್ಕಾರಿ ನೌಕರರಿಗೆ ವಾಹನ ಭತ್ಯೆ, ನಿರುದ್ಯೋಗಿ ವಿಕಲಚೇತನರಿಗೆ ನಿರುದ್ಯೋಗ ಭತ್ಯೆ ಸೇರಿದಂತೆ ವಿವಿಧ ರೀತಿಯ ಸೌಲಭ್ಯವನ್ನು ನೀಡಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಶ್ರೀಮತಿ ಭಾರತಿ ಬಣಕಾರ್. ಜಿಲ್ಲಾ ಸಂಪರ್ಕಧಿಕಾರಿ ಕೆಂಪ ಹನುಮಯ್ಯ, ದೈಹಿಕ ಶಿಕ್ಷಕರಾದ ನೀಲಕಂಠಚಾರ್ ಭಾಗವಹಿಸಿದ್ದರು. ನಿವೃತ್ತ ದೈಹಿಕ ನಿರ್ದೇಶಕರಾದ ಜಯ್ಯಣ್ಣ ಕಾರ್ಯಕ್ರಮ ನಿರೂಪಿಸಿದರು.

 

ವಿಕಲ ಚೇತನರ ದಿನಾಚರಣೆಯಲ್ಲಿ ಸಾಮಾನ್ಯ ವ್ಯಕ್ತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಉತ್ತಮವಾದ ಪ್ರದರ್ಶನವನ್ನು ನೀಡಿದ ಪ್ರಸಂಗ ನಡೆದಿದೆ.

ದಿನಾಚರಣೆಯ ಅಂಗವಾಗಿ ಇಲಾಖೆಯವತಿಯಿಂದ ವಿವಿಧ ರೀತಿಯ ಕ್ರೀಡೆಗಳನ್ನು ನಡೆಸಲಾಯಿತು ಇದರಲ್ಲಿ ಜಯಗಳಿಸಿದವರಿಗೆ ಬಹುಮಾನವನ್ನು ಸಹಾ ವಿತರಣೆ ಮಾಡಲಾಯಿತು.

ಇದೇ ಸಂದರ್ಭದಲ್ಲಿ 2021-22ನೇ ಸಾಲಿನಲ್ಲಿ ಅಂಗವಿಕಲ ಚೇತನರನ್ನು ವಿವಾಹವಾದ ಇಬ್ಬರಿಗೆ ತಲಾ 50 ಸಾವಿರೂಗಳ ಬಾಂಡ್‍ನ್ನು ವಿತರಣೆ ಮಾಡಲಾಯಿತು.ಪ್ರಥಮ ಪಿಯುಸಿ, ಪ್ರಥಮ ಬಿಎಸ್ಸಿ ಮತ್ತು ಎಂಬಿಬಿಎಸ್ ಓದುತ್ತಿರುವ ಮೂರು ಜನ ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್ ಟಾಪ್‍ನ್ನು ವಿತರಣೆ ಮಾಡಲಾಯಿತು.

ಕ್ರೀಡಾ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿದ ಪ್ರಸನ್ನ ಕುಮಾರ್ ಮತ್ತು ಪಲ್ಲವಿ ಹಾಗೂ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ರಕ್ಷಾ ಮತ್ತು ಮಣೀಕಂಠ ಸ್ವಾಮಿಯವರನ್ನು 2021-22ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತಮವಾದ ಅಂಕವನ್ನು ಪಡೆದ ಶ್ರವಣ ದೋಷದ ಹಿರಿಯೂರಿನ ಪೂರ್ಣಿಮ, ಚಿತ್ರದುರ್ಗದ ಬೌದ್ದಿಕ ವಿಕಲತೆ ಹೊಂದಿದ ಚೈತ್ರ ಎನ್. ಹಾಗೂ ದೈಹಿಕ ವಿಕಲಚೇತನರಾದ ಉಷಾ ಎಸ್, ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್, ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಂ.ಎಸ್.ದಿವಾಕರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೆಶಕರಾದ ರವಿಶಂಕರ್ ರೆಡ್ಡಿ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ. ವೈಶಾಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಶ್ರೀಮತಿ ಭಾರತಿ ಬಣಕಾರ್. ಜಿಲ್ಲಾ ಸಂಪರ್ಕಧಿಕಾರಿ ಕೆಂಪ ಹನುಮಯ್ಯ, ದೈಹಿಕ ಶಿಕ್ಷಕರಾದ ನೀಲಕಂಠಚಾರ್ ಭಾಗವಹಿಸಿದ್ದರು.

 

 

 

 

 

 

 

 

 

 

 

 

 

Facebook
Twitter
Telegram
WhatsApp
suddionenews

suddionenews

Leave a Comment

Top Stories

ಮೂರು ಕ್ಷೇತ್ರಗಳ ಸೋಲು ವಿಜಯೇಂದ್ರರ ರಾಜ್ಯಾಧ್ಯಕ್ಷ ಪಟ್ಟಕ್ಕೆ ಕುತ್ತು ತರುತ್ತಾ..?

  ರಾಜ್ಯದಲ್ಲಿ ಹೈವೋಲ್ಟೇಜ್ ಸೃಷ್ಟಿಸಿದ್ದಂತ ಮೂರು ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶವು ಬಂದಿದೆ. ಮೂರರಲ್ಲಿ ಮೂರು ಕ್ಷೇತ್ರವೂ ಕಾಂಗ್ರೆಸ್ ತೆಕ್ಕೆಗೆ ಜಾರಿದೆ. ಶಿಗ್ಗಾಂವಿ ಹಾಗೂ ಸಂಡೂರು ಎರಡು ಕೂಡ ಬಿಜೆಪಿ ಗೆದ್ದೆ ಗೆಲ್ಲುತ್ತದೆ ಎಂಬ ನಿರೀಕ್ಷೆ

ಉಚಿತ ಆಧಾರ್ ಅಪ್ ಡೇಟ್ ಗೆ ಡೆಡ್ ಲೈನ್ ಯಾವಾಗ ಗೊತ್ತಾ..?

    ಸುದ್ದಿಒನ್ | ಆಧಾರ್ ಕಾರ್ಡ್‌ನಲ್ಲಿರುವ ಹೆಸರು ಮತ್ತು ಇತರ ವಿವರಗಳು ಬಹಳ ಮುಖ್ಯ. ಬಹಳಷ್ಟು ಜನರ ಆಧಾರ್ ಕಾರ್ಡ್‌ನಲ್ಲಿ ಹೆಸರು ಅಥವಾ ವಿಳಾಸ ತಪ್ಪಾಗಿ ಮುದ್ರಿಸಲಾಗಿರುತ್ತದೆ. ಆಧಾರ್‌ನಲ್ಲಿ ಈ ವಿವರಗಳು ಸರಿಯಾಗಿದ್ದರೆ

ಕಾಂತಾರ-1 ಶೂಟಿಂಗ್ ಮುಗಿಸಿ ಬರುವಾಗ ಅಪಘಾತ : ಹಲವರಿಗೆ ಗಂಭೀರ ಗಾಯ..!

    ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ಕಾಂತಾರ ಸಿನಿಮಾ ವರ್ಲ್ಡ್ ವೈಡ್ ಹೆಸರು ಮಾಡಿತ್ತು. ಆ ಸಕ್ಸಸ್ ನಡುವೆಯೇ ಪ್ರೀಕ್ವೇಲ್ ಘೋಷಣೆ ಮಾಡಿದ್ದರು. 2025ಕ್ಕೆ ಅನೌನ್ಸ್ ಎಂಬುದನ್ನು ಹೊಂಬಾಳೆ ಈಗಾಗಲೇ ಘೋಷಣೆ ಮಾಡಿದೆ.

error: Content is protected !!