ಬೆಂಗಳೂರು: ಸೈಲೆಂಟ್ ಸುನಿ ಸೇರಿದಂತೆ ಇನ್ನು ಹಲವಾರು ರೌಡಿಶೀಟರ್ ಲೀಸ್ಟ್ ನಲ್ಲಿರುವವರು ಬಿಜೆಪಿ ಸೇರುವುದಕ್ಕೆ ತುದಿಗಾಲಿನಲ್ಲಿ ನಿಂತಿದ್ದಾರೆ ಎಂಬ ವಿಚಾರ ಸಾಕಷ್ಟು ಸದ್ದು ಮಾಡುತ್ತಾ ಇದೆ. ಈ ವಿಚಾರವಾಗಿ ಕಾಂಗ್ರೆಸ್ ಕೂಡ ಸಾಕಷ್ಟು ವ್ಯಂಗ್ಯವಾಡಿದೆ. ಇದೀಗ ಈ ಬಗ್ಗೆ ಶಾಸಕ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಸದ್ಯ ಕರ್ನಾಟಕ ಮತ್ತು ದೇಶದಲ್ಲಿ ಏನಾಗಿದೆ ಎಂದರೆ ಹೊರಗಡೆ ಇದ್ದಾತ ಪಾಪಿಗಳು ಇರುತ್ತಾರೆ. ಕಾನೂನಿನ ವಿರುದ್ಧವಾಗಿ ನಡೆದುಕೊಳ್ಳುತ್ತಾರೆ. ಬಳಿಕ ಅಂತವರೇ ಬಿಜೆಪಿ ಸೇರಿದ ತಕ್ಷಣ ಕೇಸರಿ ಶಾಲು ಧರಿಸಿ, ಬಿಜೆಪಿ ಶಾಲು ಧರಿಸಿ ಪಾವನರಾಗಿ ಬಿಡುತ್ತಾರೆ. ಬಿಜೆಪಿ ಒಂಥರ ವಾಷಿಂಗ್ ಮಷಿನ್ ಆಗಿದೆ.
ಕೇಸರಿ ಶಾಲು ಅಥವಾ ಬಿಜೆಪಿ ಶಾಲು ಹಾಕಿದ ಕೂಡಲೇ ಪಾವನರಾಗಿ ಬಿಡುತ್ತೀವಿ ಎಂದುಕೊಂಡಿದ್ದಾರೆ. ಸಿಸಿಬಿ ಹಾಗೂ ಸಿಐಡಿಗೆ ಸಿಗಲಾರದವರು ಸುಲಭವಾಗಿ ಬಿಜೆಪಿ ನಾಯಕರಿಗೆ ಸಿಗುತ್ತಾರೆ. ಬಿಜೆಪಿ ನಾಯಕರ ಜೊತೆಗೆ ಸುದ್ದಿಗೋಷ್ಠಿಯನ್ನು ನಡೆಸುತ್ತಾರೆ, ರಕ್ತದಾನ ಶಿಬಿರವನ್ನು ನಡೆಸುತ್ತಾರೆ. ಅವರ ಮುಂದೆಯೇ ಭಾಷಣವನ್ನು ಮಾಡುತ್ತಾರೆ. ಇದರಿಂದಾನೇ ತಿಳಿಯುತ್ತೆ, ಕರ್ನಾಟಕದಲ್ಲಿ ಬಿಜೆಪಿ ಎಂಥಾ ಪ್ರವೃತ್ತಿ ಬೆಳೆಸಿಕೊಂಡಿದೆ ಎಂದು ಅಂತ ಕಿಡಿಕಾರಿದ್ದಾರೆ.