ಶಿವಮೊಗ್ಗ: ಮಾಜಿ ರೌಡಿ ಸೈಲೆಂಟ್ ಸುನಿ ಬಿಜೆಪಿ ಪಕ್ಷವನ್ನು ಸೇರುತ್ತಾರೆ ಎಂಬ ವಿಚಾರಕ್ಕೆ ಕಾಂಗ್ರೆಸ್ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿ ಒಂದು ರೌಡಿಗಳ ಪಕ್ಷ ಎಂದು ವ್ಯಂಗ್ಯವಾಡಿದ್ದರು. ಇದೀಗ ಕಾಂಗ್ರೆಸ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಈಶ್ವರಪ್ಪ, ನಮ್ಮದು ರೌಡಿಗಳ ಪಕ್ಷ ಅಲ್ಲ ಸುಸಂಸಕೃತರ ಪಕ್ಷ ಎಂದು ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ರೌಡಿಗಳೇ ಇದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಹಾರ್ ಜೈಲಿಗೆ ಹೋಗಿ ಬಂದಿದ್ದಾರೆ. ಕಾಂಗ್ರೆಸ್ ಯುವ ಮೋರ್ಚಾ ಅಧ್ಯಕ್ಷ ನಲಪಾಡ್ ಬಾರ್ ನಲ್ಲಿ ಹೊಡೆದಾಡಿ ಜೈಲಿಗೆ ಹೋಗಿ ಬಂದವನು ಎಂದಿದ್ದಾರೆ.
ಇನ್ನು ಡಿಕೆಶಿ ಮೇಲೆ ಚೆನ್ನಾಗಿ ಮಾತನಾಡುತ್ತಾರೆ. ಒಳಗೊಳಗೆ ದ್ವೇಷ ಕಾರುತ್ತಾರೆ. ಹಿಂದೂ ಸಮಾಜ ಬಿಜೆಪಿ ಪರವಾಗಿದೆ ಹೀಗಾಗಿಯೇ ಮುಂದಿನ ದಿನಗಳಲ್ಲಿ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ ಎಂದಿದ್ದಾರೆ.
ಇನ್ನು ಮಹಾರಾಷ್ಟ್ರ ಗಡಿ ವಿವಾದ ಆಗಾಗ ನಡೆಯುತ್ತಲೇ ಇದ್ದು, ಈ ಬಗ್ಗೆ ಮಾತನಾಡಿದ ಈಶ್ವರಪ್ಪ, ಒಂದಿಂಚು ಭೂಮಿಯನ್ನು ಬಿಡುವುದಿಲ್ಲ. ಅದಕ್ಕಾಗಿ ರಾಜ್ಯದ ಆರುವರೆ ಕೋಟಿ ಜನ ಒಗ್ಗಟ್ಟಾಗಿದ್ದಾರೆ. ಅಲ್ಲಿ ಕುಡಿಯುವುದಕ್ಕೆ ನೀರು ಸಹ ಇಲ್ಲ. ಗಡಿ ಭಾಗದ ಜನ ಕರ್ನಾಟಕಕ್ಕೆ ಸೇರುವುದಕ್ಕೆ ಬಯಸುತ್ತಿದ್ದಾರೆ ಎಂದಿದ್ದಾರೆ.