Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಭಗವದ್ಗೀತೆ ಸರ್ವಕಾಲಕ್ಕೂ ಸಲ್ಲುವಂತದ್ದು : ಶಿವಲಿಂಗಾನಂದ ಮಹಾಸ್ವಾಮಿಗಳು

Facebook
Twitter
Telegram
WhatsApp

 

ವರದಿ ಮತ್ತು ಫೋಟೋ  ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ : ಸರ್ವಕಾಲಕ್ಕೂ ಆದರಣೀಯವಾಗಿರುವ ಭಗವದ್ಗೀತೆಯನ್ನು ಎಲ್ಲರೂ ಪಠಣ ಮಾಡಬೇಕೆಂದು ಕಬೀರಾನಂದಾಶ್ರಮದ ಶಿವಲಿಂಗಾನಂದ ಮಹಾಸ್ವಾಮಿಗಳು ಹೇಳಿದರು.

ಭಗವದ್ಗೀತಾ ಅಭಿಯಾನ-ಕರ್ನಾಟಕ ಜಿಲ್ಲಾ ಸಮಿತಿ, ಸರ್ವಜ್ಞೇಂದ್ರ ಸರಸ್ವತಿ ಪ್ರತಿಷ್ಠಾನ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನಂ ವತಿಯಿಂದ ವಾಸವಿ ಮಹಲ್‍ನಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಭಗವದ್ಗೀತಾ ಜಿಲ್ಲಾ ಅಭಿಯಾನ ಉದ್ಘಾಟಿಸಿ ಮಾತನಾಡಿದರು.

ಭಗವದ್ಗೀತೆಯಲ್ಲಿ ಕೇವಲ ಲೌಖಿಕವನ್ನಷ್ಟೆ ಉಪದೇಶ ಮಾಡಿಲ್ಲ. ಆಧ್ಯಾತ್ಮವನ್ನು ಒಳಗೊಂಡಿದೆ. ಹಾಗಾಗಿ ಭಗವದ್ಗೀತೆ ಸರ್ವಕಾಲಕ್ಕೂ ಸಲ್ಲುವಂತದ್ದು, ಅನೇಕ ಅಂಶಗಳನ್ನು ಒಳಗೊಂಡಿದೆ.
ನ್ಯಾಯಾಲಯದಲ್ಲಿ ಭಗವದ್ಗೀತೆಯನ್ನಿಟ್ಟು ಪ್ರಮಾಣ ಮಾಡಿಸುವುದುಂಟು. ಅಷ್ಟೊಂದು ಶ್ರೇಷ್ಠವಾದ ಗ್ರಂಥ ಎಂದು ತಿಳಿಸಿದರು.

ರಾಷ್ಟ್ರಪಿತ ಮಹಾತ್ಮಗಾಂಧಿ ದಿನಕ್ಕೆ ಎರಡು ಶ್ಲೋಕಗಳನ್ನು ಬರೆಯುತ್ತಿದ್ದರು. ಸಂದಿಗ್ದ ಪರಿಸ್ಥತಿಯಲ್ಲಿ ಅರ್ಜುನನಿಗೆ ಶ್ರೀಕೃಷ್ಣ ಭಗವದ್ಗೀತೆಯನ್ನು ಬೋಧಿಸಿದ. ಶಾಲಾ ಹಂತದಲ್ಲಿ ಮಕ್ಕಳು ಭಗವದ್ಗೀತೆಯನ್ನು ಪಠಣ ಮಾಡಿ ಅದರಲ್ಲಿ ಸಾರಾಂಶವನ್ನು ತಿಳಿದುಕೊಂಡು ಅದರಂತೆ ಬದುಕಿದರೆ ಒಳ್ಳೆಯದು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ತಿಪ್ಪೇಸ್ವಾಮಿ ಮಾತನಾಡಿ ಪ್ರಾಥಮಿಕ ಮತ್ತು ಪ್ರೌಢಾಲೆಗಳಲ್ಲಿ ಮಕ್ಕಳು ಭಗವದ್ಗೀತೆಯನ್ನು ಅಧ್ಯಯನ ಮಾಡಿದರೆ ಸಾಮರಸ್ಯದ ಬದುಕನ್ನು ಕಲಿಸುತ್ತದೆ. ಶ್ಲೋಕಗಳನ್ನು ಕಲಿತರೆ ಶಾಂತಿಯುತ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಭಗವದ್ಗೀತೆಯಲ್ಲಿನ ಸಾರಾಂಶವನ್ನು ಮಕ್ಕಳು ತಿಳಿದುಕೊಂಡು ತಮ್ಮಲ್ಲಿರುವ ಸೃಜನಶೀಲತೆಯನ್ನು ಹೊರಹೊಮ್ಮಿಸಿ. ಸಮಾಜ ಕಂಟಕರಾಗಬೇಡಿ ಎಂದು ಕಿವಿಮಾತು ಹೇಳಿದರು.

ಪ್ರಭಂಜನಾಚಾರ್ ಮಾತನಾಡುತ್ತ ಭಗವದ್ಗೀತೆ ಮೂಲಕ ಗೀತ ಗಂಗಾ ಗಾಯತ್ರಿ ಗೋವಿಂದ ಎನ್ನುವ ಶಬ್ದಗಳನ್ನು ಇಟ್ಟುಕೊಳ್ಳಬೇಕು. ಇದರಲ್ಲಿನ ಪ್ರತಿಯೊಂದು ಶ್ಲೋಕಗಳ ಅಧ್ಯಯನಕ್ಕೂ ಮಹತ್ವವಿದೆ. ಪ್ರತಿ ಮನೆ ಮನೆಗೆ ಭಗವದ್ಗೀತೆಯ ಪ್ರಾಮುಖ್ಯತೆಯನ್ನು ತಿಳಿಸಬೇಕಿದೆ. ಭಗವದ್ಗೀತೆ ಅಭಿಯಾನ ಎಲ್ಲರ ಮನದಲ್ಲಿ ಮನೆ ಮಾಡಬೇಕಾದರೆ ತಪ್ಪದೆ ಪಠಣ ಮಾಡಿ ಎಂದು ತಿಳಿಸಿದರು.

ಗೋನೂರು ಸಮೀಪವಿರುವ ರಾಜರಾಜೇಶ್ವರಿ ದೇವಸ್ಥಾನದ ನಾಗರಾಜ್‍ಭಟ್ ಮಾತನಾಡಿ 2007 ರಲ್ಲಿ ಭಗವದ್ಗೀತಾ ಅಭಿಯಾನ ಆರಂಭಗೊಂಡಿತು. 2009 ಹಾಗೂ 2019 ರಲ್ಲಿ ಜಿಲ್ಲೆಯಲ್ಲಿ ನಡೆದಿದೆ. ಸಾಮಾಜಿಕ ಸಾಮರಸ್ಯ, ಅಪರಾಧಿಕರಣ ನಿಯಂತ್ರಣ, ಮನೋದೌರ್ಬಲ್ಯ ಈ ಮೂರಕ್ಕೂ ಭಗವದ್ಗೀತೆಯಲ್ಲಿ ಉತ್ತರವಿದೆ. ಚಿತ್ತಶುದ್ದಿ ಮನುಷ್ಯನಿಗೆ ತುಂಬಾ ಪ್ರಾಮುಖ್ಯವಾಗಿರುವುದರಿಂದ ಎಲ್ಲರೂ ಭಗವದ್ಗೀತೆಯನ್ನು ಪಠಣ ಮಾಡಲೇಬೇಕು ಎಂದು ಮನವಿ ಮಾಡಿದರು.

ಬ್ರಾಹ್ಮಣ ಸಂಘದ ಅಧ್ಯಕ್ಷ ಪಿ.ಎಸ್.ಮಂಜುನಾಥ್, ಆರ್ಯವೈಶ್ಯ ಸಂಘದ ಅಧ್ಯಕ್ಷ ಎಲ್.ಇ.ಶ್ರೀನಿವಾಸ್‍ಬಾಬು, ವಾಸವಿ ವಿದ್ಯಾಸಂಸ್ಥೆ ಅಧ್ಯಕ್ಷ ಎಸ್.ಎ.ಸತ್ಯನಾರಾಯಣಶೆಟ್ಟಿ ವೇದಿಕೆಯಲ್ಲಿದ್ದರು.
ಭಗವದ್ಗೀತಾ ಅಭಿಯಾನ ಜಿಲ್ಲಾ ಸಮಿತಿ ಕಾರ್ಯಾಧ್ಯಕ್ಷ ಎಸ್.ಎನ್.ಕಾಶಿವಿಶ್ವನಾಥಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಪ್ರಾಥಮಿಕ ಮತ್ತು ಪ್ರೌಢಶಾಲೆ ಮಕ್ಕಳು ಭಗವದ್ಗೀತಾ ಅಭಿಯಾನದಲ್ಲಿ ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಮೂರು ಕ್ಷೇತ್ರಗಳ ಸೋಲು ವಿಜಯೇಂದ್ರರ ರಾಜ್ಯಾಧ್ಯಕ್ಷ ಪಟ್ಟಕ್ಕೆ ಕುತ್ತು ತರುತ್ತಾ..?

  ರಾಜ್ಯದಲ್ಲಿ ಹೈವೋಲ್ಟೇಜ್ ಸೃಷ್ಟಿಸಿದ್ದಂತ ಮೂರು ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶವು ಬಂದಿದೆ. ಮೂರರಲ್ಲಿ ಮೂರು ಕ್ಷೇತ್ರವೂ ಕಾಂಗ್ರೆಸ್ ತೆಕ್ಕೆಗೆ ಜಾರಿದೆ. ಶಿಗ್ಗಾಂವಿ ಹಾಗೂ ಸಂಡೂರು ಎರಡು ಕೂಡ ಬಿಜೆಪಿ ಗೆದ್ದೆ ಗೆಲ್ಲುತ್ತದೆ ಎಂಬ ನಿರೀಕ್ಷೆ

ಉಚಿತ ಆಧಾರ್ ಅಪ್ ಡೇಟ್ ಗೆ ಡೆಡ್ ಲೈನ್ ಯಾವಾಗ ಗೊತ್ತಾ..?

    ಸುದ್ದಿಒನ್ | ಆಧಾರ್ ಕಾರ್ಡ್‌ನಲ್ಲಿರುವ ಹೆಸರು ಮತ್ತು ಇತರ ವಿವರಗಳು ಬಹಳ ಮುಖ್ಯ. ಬಹಳಷ್ಟು ಜನರ ಆಧಾರ್ ಕಾರ್ಡ್‌ನಲ್ಲಿ ಹೆಸರು ಅಥವಾ ವಿಳಾಸ ತಪ್ಪಾಗಿ ಮುದ್ರಿಸಲಾಗಿರುತ್ತದೆ. ಆಧಾರ್‌ನಲ್ಲಿ ಈ ವಿವರಗಳು ಸರಿಯಾಗಿದ್ದರೆ

ಕಾಂತಾರ-1 ಶೂಟಿಂಗ್ ಮುಗಿಸಿ ಬರುವಾಗ ಅಪಘಾತ : ಹಲವರಿಗೆ ಗಂಭೀರ ಗಾಯ..!

    ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ಕಾಂತಾರ ಸಿನಿಮಾ ವರ್ಲ್ಡ್ ವೈಡ್ ಹೆಸರು ಮಾಡಿತ್ತು. ಆ ಸಕ್ಸಸ್ ನಡುವೆಯೇ ಪ್ರೀಕ್ವೇಲ್ ಘೋಷಣೆ ಮಾಡಿದ್ದರು. 2025ಕ್ಕೆ ಅನೌನ್ಸ್ ಎಂಬುದನ್ನು ಹೊಂಬಾಳೆ ಈಗಾಗಲೇ ಘೋಷಣೆ ಮಾಡಿದೆ.

error: Content is protected !!