ಕುರುಗೋಡು. ನ.30
ಕುರುಗೋಡು ತಾಲೂಕಿನ ಬಹಳಷ್ಟು ರೈತರು ಬಯೋ ಕಂಪನಿಯ ಇಂಫ್ಯಾಕ್ಟ್ – ಡಿ ಎನ್ನುವ ಕಳಪೆ ಕ್ರಿಮಿನಾಶಕವನ್ನು ಹೆಚ್ಚಿನ ದರದಲ್ಲಿ ತೆಗೆದುಕೊಂಡು ತಾವು ಬೆಳೆದ ಬೆಳೆಗಳಿಗೆ ಸಿಂಪರಣೆ ಮಾಡಿದ ಪರಿಣಾಮ ಬೆಳೆಗಳು ನಾಶಗೊಂಡು ಹಿನ್ನಲೆ ಅಂಗಡಿಗಳ ವಿರುದ್ಧ ರೈತರು ಆಕ್ರೋಶಗೊಂಡು ತಹಸೀಲ್ದಾರ್ ಕಚೇರಿಯನ್ನು ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದ ಪ್ರಸಂಗ ಜರುಗಿತ್ತು.
ಸಧ್ಯ ಇಂದು ಕೂಡ ಕರ್ನಾಟಕ ಪ್ರಾಂತ ರೈತ ಸಂಘದ ಪದಾಧಿಕಾರಿಗಳು ಇಂಪ್ಯಾಕ್ಟ್ ಡಿ ಔಷಧಿ ಯಿಂದ ನಷ್ಟಕ್ಕೆ ಒಳಗಾದ ರೈತರಿಗೆ ತಕ್ಷಣವೇ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಕುರುಗೋಡು ಸೇರಿದಂತೆ ಸುತ್ತಮುತ್ತ ಬಹುತೇಕ ಗ್ರಾಮಗಳ ರೈತರು ಹೆಚ್ಚಿನ ದರದಲ್ಲಿ ಬಯೋ ಕಂಪನಿಯ ಔಷದಿ ಪಡೆದು ಕೈ ಸುಟ್ಟುಕೊಂಡಿದ್ದಾರೆ. ಇದರ ಬಗ್ಗೆ ಅನೇಕ ರೈತರು, ಮುಖಂಡರು ಸಂಘಟನೆ ಗಾರರು ರೈತರ ಪರವಾಗಿ ದ್ವನಿ ಎತ್ತಿ ತಹಸೀಲ್ದಾರ್ ಕಚೇರಿಯಲ್ಲಿ ಸಭೆ ನಡೆಸಿದ್ದಾರೆ ಆದ್ರೂ ಇಂದಿನ ವರೆಗೂ ಪರಿಹಾರದ ವ್ಯವಸ್ಥೆ ಕಂಡಿಲ್ಲ ಇದರಿಂದ ತಾಲೂಕಿನಲ್ಲಿ ದಿನ ದಿನಕ್ಕೆ ಬಯೋ ಕಂಪನಿ ಮತ್ತು ಅಂಗಡಿಗಳ ಮಾಲೀಕರ ವಿರುದ್ಧ ಜೋರಾಗಿ ದ್ವನಿ ಕಂಡು ಬರುತ್ತಿದೆ.
ಕೃಷಿ ಇಲಾಖೆ, ತೋಟಗಾರಿಕೆ, ಕಂದಾಯ ಅಧಿಕಾರಿಗಳು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು ಪ್ರಯೋಜನೆ ಆಗದ ಕಾರಣ ಪ್ರಾಂತ ರೈತ ಸಂಘದ ಪದಾಧಿಕಾರಿಗಳು ಖಂಡಿಸಿ ಕೂಡಲೇ ನಷ್ಟಕ್ಕೆ ಒಳಗಾದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಮತ್ತು ಅಂಗಡಿಗಳ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಬೇಕು ಎಂದು ಪ್ರತಿಭಟನೆ ಕೈಗೊಂಡಿದ್ದಾರೆ.
ಇದೆ ವೇಳೆ ಸಂಘಟನೆಯ ಮುಖಂಡ ಗಾಳಿ ಬಸವರಾಜ್ ಮಾತನಾಡಿ, ಈಗಾಗಲೇ ಗೊಬ್ಬರ ಅಂಗಡಿ ಗಳ ಮಾಲಿಕರ ಮತ್ತು ರೈತರ ನಡುವೆ ಸಭೆಯಲ್ಲಿ ಕೆಲಕಾಲ ವಾಗ್ವದ ನೆಡೆದಿತ್ತು, ರೈತರು ತಾವು ಖರೀದಿಸಿದ ಕ್ರೀಮಿ ನಾಶಕ ಮತ್ತು ಗೊಬ್ಬರ ಗಳಿಗೆ ದುಪ್ಪಟ್ಟು ಬೆಲೆ ಹಾಕಿ ಮದ್ದಿನ ಕಂಪನಿಗಳು ಹಾಗಲು ದರೋಡೆ ನೆಡೆಸುತ್ತಿದ್ದಾರೆ. ಇದರ ಬಗ್ಗೆ ಅಧಿಕಾರಿಗಳು ಕ್ರಮ ಆಗಿಲ್ಲ.ಆದ್ದರಿಂದ ಬಯೋ ಕಂಪನಿಯನ್ನು ರದ್ದು ಪಡಿಸಬೇಕು ಜೊತೆಗೆ ಗೊಬ್ಬರದ ಅಂಗಡಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಅಗ್ರಹಿಸಿದರು.
ಅಧಿಕಾರಿಗಳು ರೈತರಿಗೆ ನ್ಯಾಯ ಒದಗಿಸದೆ ಅಂಗಡಿಗಳ ಮಾಲೀಕರ ಜೊತೆಗೆ ಕೈಜೋಡಿಸಿ ರೈತರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಅಲ್ಲದೆ ರೈತರನ್ನು ಕಾಪಾಡುವ ಅಧಿಕಾರಿಗಳೇ ಅಂಗಡಿ ಮಾಲೀಕರಿಗೆ ಕುಮ್ಮಕ್ಕು ನೀಡಿ ಸುವ್ಯವಸ್ಥೆಯನ್ನು ಹದೆಗೆಡುಸುತಿದ್ದಾರೆ ಎಂದು ತಿಳಿಸಿದರು.