ಮಂಡ್ಯ: ಇತ್ತಿಚೆಗೆ ರೌಡಿ ಸೈಲೆಂಟ್ ಸುನಿ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡುತ್ತಾ ಇದೆ. ಚಾಮರಾಜಪೇಟೆಯಲ್ಲಿ ಸ್ವತಂತ್ರ ಸ್ಪರ್ಧಿಯಾಗಿ ಸ್ಪರ್ಧಿಸುತ್ತೀನಿ ಎಂದು ಹೇಳಿದ್ದಾರೆ. ಸೈಲೆಂಟ್ ಸುನಿ ಜೊತೆಗೆ ಹಲವು ಬಿಜೆಪಿ ನಾಯಕರು ಕಾಣಿಸಿಕೊಂಡಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಸಮಾಜದಲ್ಲಿ ಗಲಭೆ ಎಬ್ಬಿಸಲು ಬಿಜೆಪಿ ನಾಯಕರಿಗೆ ರೌಡಿಗಳು ಬೇಕು. ಅದೇ ಕಾರಣಕ್ಕೆ ರೌಡಿಶೀಟರ್ ಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ. ಬಿಜೆಪಿಯ ಇಬ್ಬರು ನಾಯಕರು ಅವರ ಜೊತೆ ವೇದಿಕೆ ಹಂಚಿಕೊಂಡಿದ್ದರು. ಇಂಥವರ ಜೊತೆಗೆ ಓಡಾಡಿಯೂ ಬಿಜೆಪಿ ನಾಯಕರು ಸಮರ್ಥನೆ ಮಾಡಿಕೊಳ್ಳುತ್ತಾರೆ ಎಂದು ಕಿಡಿಕಾರಿದ್ದಾರೆ.
ಇನ್ನು ಕಾಂಗ್ರೆಸ್ ನವರು ಜೈಲಿಗೆ ಹೋಗಿ ಬಂದಿದ್ದಾರೆ ಎಂಬ ವಿಚಾರಕ್ಕೆ ಮಾತನಾಡಿದ ಸಿದ್ದರಾಮಯ್ಯ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಾವನ ಮನೆಗೆ ಹೋಗಿ ಬಂದಿರುವುದಾ..? ಅಮಿತ್ ಶಾ ಅವರು ಕೂಡ ಮೂರು ವರ್ಷಗಲ ಕಾಲ ಜೈಲಿನಲ್ಲಿ ಇದ್ದು ಬಂದವರು. ಅಂಥವರೇ ಅಧ್ಯಕ್ಷರು ಹಾಗೂ ಗೃಹ ಸಚಿವರಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.
ಬಿಜೆಪಿಯವರಿಗೆ ಅಂಟು ರೋಗವಿದೆ. ಅದರಲ್ಲೂ ಬೊಮ್ಮಾಯಿ ಅವರಿಗೆ ಅದು ಜಾಸ್ತಿಯೇ ಆಗಿದೆ. ಬಿಜೆಪಿಯವರಿಗೆ ಜನರು ಅಧಿಕಾರ ಕೊಟ್ಟಿಲ್ಲ. ಏನೇ ವಿಚಾರ ಹೇಳಿದರೂ ಹಿಂದಿನ ಸರ್ಕಾರದಲ್ಲಿ ಆಗಿಲ್ವಾ ಅಂತಾರೆ. ಸಮಾಜದಲ್ಲಿ ಅಶಾಂತಿ ಮೂಡಿಸಲು ಬಿಜೆಪಿ ನಾಯಕರು ಇಂಥವರನ್ನು ಸೇರಿಸಿಕೊಳ್ಳುತ್ತಾರೆ ಎಂದಿದ್ದಾರೆ.