ಚಿಕ್ಕಮಗಳೂರು: ಈ ಬಾರಿಯೂ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು ಎಂದು ಬಿಜೆಪಿ ನಾಯಕರು ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದಾರೆ. ಜೊತೆಗೆ ಬಿಜೆಪಿಯೇ ಅಧಿಜಾರಕ್ಕೆ ಬರುವುದು ಎಂಬ ಆತ್ಮವಿಶ್ವಾಸವೂ ಅವರಲ್ಲಿ ಇದೆ. ಇದರ ನಡುವೆ ಜಿಲ್ಲೆ ಜಿಲ್ಲೆಗೂ ಹೋಗುತ್ತಿದ್ದು, ಜನರಿಗೆ ಒಂದಷ್ಟು ಭರವಸೆಗಳನ್ನು ನೀಡುತ್ತಿದ್ದಾರೆ.
ಜನಸಂಕಲ್ಪ ಯಾತ್ರೆ ಮೂಲಕ ಕಾರ್ಯಕ್ರಮಗಳನ್ನು ಮಾಡುತ್ತಿದ್ದು, ಎಲ್ಲೆಲ್ಲಿ ಬಿಜೆಪಿ ವೀಕ್ ಇದೆಯೋ ಅಲ್ಲೆಲ್ಲಾ ಸ್ಟ್ರಾಂಗ್ ಮಾಡುವ ಪ್ರಯತ್ನ ನಡೆಯುತ್ತಿದೆ. ಇದೀಗ ಚಿಕ್ಕಮಗಳೂರಿನ ಕಡೆ ಬಿಜೆಪಿ ತನ್ನ ಪಯಣ ಬೆಳೆಸಿದ. ಇಂದು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಗ್ರಾಮದಲ್ಲಿ ಜನಸಂಕಲ್ಪ ಯಾತ್ರೆ ಹಮ್ಮಿಕೊಳ್ಳಲಾಗಿದೆ.
ಸಿಎಂ ಬೊಮ್ಮಾಯಿ ಅವರು ಇದು ಸೇರಿ ಜಿಲ್ಲೆಗೆ ಮೂರನೆ ಬಾರಿಗೆ ಭೇಟಿ ನೀಡುತ್ತಿದ್ದಾರೆ. ಇದು ಬಿಜೆಪಿ ನಾಯಕರಲ್ಲಿ ಹೊಸ ಹುಮ್ಮಸ್ಸು ತುಂಬಿದರೆ, ರೈತರು ಆಸೆಯ ಕಣ್ಗಳಲ್ಲಿ ನೋಡುತ್ತಿದ್ದಾರೆ. ಈ ಭಾಗದಲ್ಲಿ ಸಂಪೂರ್ಣವಾಗಿ ಹೆಚ್ಚಿನ ಅಡಿಕೆ ಬೆಳೆಗಾರರಿದ್ದಾರೆ. ಆದ್ರೆ ಕಳೆದ ಕೆಲವು ವರ್ಷಗಳಿಂದ ಅಡಿಕೆ ಬೆಳೆಗೆ ರೋಗ ಬಾಧಿಸಿದೆ. ಹೀಗಾಗಿ ಬೆಳೆ ಕಳೆದುಕೊಂಡಿದ್ದಾರೆ. ಸಿಎಂ ಬರುತ್ತಿರುವ ಕಾರಣ ಅಡಿಕೆ ಬೆಳೆಗಾರರಿಗೆ ಪರಿಹಾರದ ಭರವಸೆ ನೀಡುತ್ತಾರಾ ಎಂಬ ಆಸೆಯನ್ನು ಅಲ್ಲಿನ ರೈತರು ಇಟ್ಟುಕೊಂಡಿದ್ದಾರೆ.