Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕನಕ ದೇವರ ಪ್ರೀತಿ ಗೆದ್ದ ದಾಸ ಶ್ರೇಷ್ಠ : ಮಾಜಿ ಸಚಿವ ಎಚ್.ಆಂಜನೇಯ

Facebook
Twitter
Telegram
WhatsApp

 

 

ಚಿತ್ರದುರ್ಗ: ಕನಕದಾಸ ಮಂತ್ರಿಯಾಗಿ ಉತ್ತಮ ಆಡಳಿತ ನೀಡಿ, ಬಳಿಕ ಆಧ್ಯಾತ್ಮಿಕದತ್ತ ಆಸಕ್ತಿ ಬೆಳೆಸಿಕೊಂಡು ದೇವರ ಪ್ರೀತಿಯನ್ನೇ ಗೆದ್ದ ಶ್ರೇಷ್ಠ ಸಂತ ಎಂದು  ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.

ವಿವಿಧ ಸಂಘಟನೆಗಳ ಆಶ್ರಯದಲ್ಲಿ ಹೊಳಲ್ಕೆರೆ ತಾಲೂಕು ತಾಳಿಕಟ್ಟೆ ಗ್ರಾಮದಲ್ಲಿ ಶನಿವಾರ ಕನಕ ಜಯಂತಿ ಉತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.

ಅಸ್ಪೃಶ್ಯತೆ ನೋವು ಅನುಭವಿಸಿದವರಿಗೆ ಗೊತ್ತು. ಸ್ವತಃ ಕನಕದಾಸ ಮಂತ್ರಿ ಆಗಿದ್ದರೂ ಕುರುಬ ಜಾತಿಯ ವ್ಯಕ್ತಿ ಎಂಬ ಕಾರಣಕ್ಕೆ ದೇವಸ್ಥಾನ ಪ್ರವೇಶ ಮಾಡಲು ಆಗದೆ ಮನನೊಂದ ಅಸ್ಪಶ್ಯ ವರ್ಗದ ಜನನಾಯಕ. ತನ್ನ ಮೆಚ್ಚಿನ ಶ್ರೀಕೃಷ್ಣನ ದರ್ಶನ ಪಡೆಯಲು ನಡೆಸಿದ ಹೋರಾಟ ಅವಿಸ್ಮರಣೀಯ ಎಂದರು.

ಕನಕ ಕಿಂಡಿ ಕುರಿತು ವೈಜ್ಞಾನಿಕ ಹಾಗೂ ಜನರ ನಂಬಿಕೆ ಕುರಿತು ವಿವಾದ ಹುಟ್ಟು ಹಾಕುವುದಕ್ಕಿಂತ, ಜಾತಿ, ಧರ್ಮ ತಾರತಮ್ಯದ ವಿರುದ್ಧ ಹೋರಾಟ ನಡೆಸಿದ ಕನಕನ ಮಾರ್ಗದಲ್ಲಿ ನಾವೆಲ್ಲರೂ ಸಾಗಬೇಕಾಗಿದೆ. ಈ ಮೂಲಕ ಸಮಾಜದಲ್ಲಿ ಶಾಂತಿ ಸೌಹಾರ್ಧತೆ ನೆಲೆಸಲು ಶ್ರಮಿಸಬೇಕು ಎಂದರು.

ಹಳ್ಳಿಗಳಲ್ಲಿ ಎಲ್ಲ ಜಾತಿ ಜನರು ಒಗ್ಗೂಡಿ ಸಹೋದರರ ರೀತಿ ಭಾಳ್ವೆ ನಡೆಸಬೇಕಿದೆ. ಈಚೆಗೆ ಜಾತಿ, ಧರ್ಮಗಳ ಮಧ್ಯೆ ಕಂದಕ ಉಂಟು ಮಾಡುವ ವಾತಾವರಣಕ್ಕೆ ಮುಗ್ಧ ಜನರು ಬದುಕನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಕುರಿತು ಸದಾ ಎಚ್ಚರಿಕೆ ವಹಿಸಬೇಕು. ದೇವರ ಪ್ರೀತಿ ಗೆದ್ದ ಕನಕನ ಮಾರ್ಗದಲ್ಲಿ ನಾವೆಲ್ಲರೂ ಸಾಗಬೇಕು ಎಂದು ಹೇಳಿದರು.

ಹಳ್ಳಿಗಳಲ್ಲಿ ಜನ ಒಗ್ಗಟ್ಟಿನಿಂದ ಇದ್ದರೆ ಮಾತ್ರ ತಮ್ಮೂರು, ತಮ್ಮ ಕುಟುಂಬದ ಪ್ರಗತಿ ಸಾಧ್ಯ ಎಂಬ ಸತ್ಯ ಅರಿತುಕೊಳ್ಳಬೇಕು. ಯಾವುದೇ ಕಾರಣಕ್ಕೂ ಅಸ್ಪೃಶ್ಯತೆ, ಮೌಢ್ಯತೆಗೆ ಅವಕಾಶ ಕೊಡದೇ ವೈಜ್ಞಾನಿಕ ಚಿಂತನೆ ಜೊತೆಗೆ ಪೂರ್ವಿಕರು ಕಟ್ಟಿಕೊಟ್ಟ ಸಾಂಪ್ರದಾಯಗಳನ್ನು ಸಹೋರತೆ ಬಾಂಧ್ಯವದಲ್ಲಿ ಮುಂದುವರಿಸಿಕೊಂಡು ಹೋಗಬೇಕು ಎಂದು ಹೇಳಿದರು.

ಬಸವಣ್ಣ, ಕನಕ, ಶ್ರೀಕೃಷ್ಣ, ವಾಲ್ಮೀಕಿ, ಅಂಬೇಡ್ಕರ್, ಬಾಬು ಜಗಜೀವನರಾಂ ಸೇರಿದಂತೆ ಅನೇಕ ಮಹನೀಯರ ಜಯಂತಿಗಳನ್ನು ಎಲ್ಲ ಸಮುದಾಯವರು ಒಗ್ಗೂಡಿ ಆಚರಿಸುವ ವಾತಾವರಣ ನಿರ್ಮಾಣ ಆಗಬೇಕು. ಸಾಧಕರಿಗೆ ಜಾತಿಯ ಸೋಂಕು ತಗುಲದಂತೆ ಜನರು ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ಸಮಾಜಕ್ಕೆ ದೊಡ್ಡ ನಷ್ಟ ಉಂಟಾಗಲಿದೆ ಎಂದು ಎಚ್ಚರಿಸಿದರು.

ಹಾಲುಮತ ಹೆಸರೇ ಸೂಚಿಸುವಂತೆ ಕುರುಬ ಸಮಾಜದವರು ಹಾಲಿನಂತ ಮನಸ್ಸಿನವರು. ಸ್ವತಃ ನೋವುಂಡು ಇತರರ ಏಳ್ಗೆಗೆ ಶ್ರಮಿಸುವ ಜನರು. ಇದಕ್ಕೆ ಉತ್ತಮ ಉದಾಹರಣೆ ಕನಕದಾಸರು. ಅಸ್ಪೃಶ್ಯತೆ ನೋವನ್ನುಂಡರೂ ಅಶಾಂತಿ ಮಾರ್ಗ ತುಳಿಯದೇ ಶ್ರೀಕೃಷ್ಣನನ್ನೇ ತನ್ನೆಡೆಗೆ ತಿರುಗಿಸಿಕೊಂಡ ಕನಕ ನಮ್ಮೆಲ್ಲರಿಗೂ ಪ್ರಶ್ನಾತೀತ ನಾಯಕನಾಗಿ ಎದುರುಗೊಳ್ಳುತ್ತಾನೆ ಹೇಳಿದರು.

ಸಿದ್ದರಾಮಯ್ಯ ಕೂಡ ಅನೇಕ ಸಂಕಷ್ಟ, ಸವಾಲುಗಳನ್ನು ಎದುರಿಸಿ ಉಪಮುಖ್ಯಮಂತ್ರಿ, ಮುಖ್ಯಮಂತ್ರಿಯಾಗಿ ಜನಪರ ಆಡಳಿತ ನೀಡಿದ ಮಹಾನ್ ನಾಯಕ. ಸಿದ್ದರಾಮಯ್ಯನವರ ಆಡಳಿತ ಬಡವರ ಪಾಲಿಗೆ ಸುವರ್ಣ ಯುಗವಾಗಿತ್ತು. ಈಗಲೂ ಅಂತಹ ಆಡಳಿತ ಮರುಸ್ಥಾಪನೆ ಆಗಬೇಕೆಂಬ ತುಡಿತ ಎಲ್ಲೆಡೆ ಜನ ವ್ಯಕ್ತಪಡಿಸಿದ್ದಾರೆ ಎಂದರು.

ಕುರುಬ ಸಮುದಾಯ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಪ್ರಗತಿಗೆ ಹೆಚ್ಚು ಗಮನ ಹರಿಸಬೇಕು. ಕನಕ, ಸಿದ್ದರಾಮಯ್ಯನ ರೀತಿ ಜನ ಸೇವೆಗೆ ಬದ್ಧರಾಗಬೇಕು ಎಂದು ಹೇಳಿದರು.

ಗ್ರಾಮದಲ್ಲಿ ಕನಕ ಭಾವಚಿತ್ರ ಮೆರವಣಿಗೆ ಅದ್ಧೂರಿಯಾಗಿ ನಡೆಸಲಾಯಿತು. ನೂರಾರು ಸಂಖ್ಯೆಯಲ್ಲಿ ವಿವಿಧ ಸಮುದಾಯದ ಜನರು ಪಾಲ್ಗೊಂಡಿದ್ದರು. ಸಮುದಾಯದ ಪರವಾಗಿ ಆಂಜನೇಯ ಅವರಿಗೆ ಕಂಬಳಿ ಹೊದಿಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಉಪಾಧ್ಯಕ್ಷ ಗಂಗಾಧರ್, ಗ್ರಾಪಂ ಅಧ್ಯಕ್ಷೆ ಲಲಿತಾಬಾಯಿ, ಉಪಾಧ್ಯಕ್ಷ ಬಸವರಾಜ್, ಮುಖಂಡರಾದ ಗುಡಿಗೌಡ್ರು ಕೆಂಚಪ್ಪ, ಗುರಯ್ಯ ಒಡೆಯರ್, ಗೌಡ್ರು ಗುಮ್ನಣ್ಣ, ತಿಮ್ಮಯ್ಯ, ಕೃಷ್ಣಮೂರ್ತಿ, ಹಳ್ಳಪ್ಪ, ಧನಂಜಯ್, ರಾಮಗಿರಿ ರಾಜಣ್ಣ, ಕನಕಯುವಸೇನೆ ಮುಖಂಡ ತಿಮ್ಮಯ್ಯ ಉಪಸ್ಥಿತರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಮೂರನೇ ಬಾರಿಗೆ ಸೋತ ನಿಖಿಲ್ ಕುಮಾರಸ್ವಾಮಿ…!

ಸುದ್ದಿಒನ್ | ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಗಳ ಜೊತೆಗೆ ದೇಶಾದ್ಯಂತ ವಿವಿಧ ರಾಜ್ಯಗಳ 48 ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆ ನಡೆಯಿತು. ಕರ್ನಾಟಕದಲ್ಲಿ ಮೂರು ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಸಂಡೂರು ಕ್ಷೇತ್ರದಿಂದ ಅನ್ನಪೂರ್ಣ

ಮಹಾರಾಷ್ಟ್ರದಲ್ಲಿ ಯಾರಾಗಲಿದ್ದಾರೆ ನೂತನ ಸಿಎಂ ?

ಸುದ್ದಿಒನ್ | ಮಹಾರಾಷ್ಟ್ರದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಹಾಗಾದರೆ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಬಿಜೆಪಿ ಮುಖಂಡ ಪ್ರವೀಣ್ ದಾರೇಕರ್ ಪ್ರತಿಕ್ರಿಯಿಸಿದ್ದಾರೆ. ದೇವೇಂದ್ರ ಫಡ್ನವೀಸ್

ಸಿಎಂ ಸಿದ್ದರಾಮಯ್ಯ ಅವರ ಪ್ರಚಾರದಿಂದ ಗೆಲುವು : ಬಿಜೆಪಿ ಸೋಲಿನ ಬಗ್ಗೆ ಜನಾರ್ದನ ರೆಡ್ಡಿ ಫಸ್ಟ್ ರಿಯಾಕ್ಷನ್

ಬಳ್ಳಾರಿ: ಇಂದು ಸಂಡೂರು ವಿಧಾನಸಭಾ ಕ್ಷೇತ್ರದಲ್ಲೂ ಫಲಿತಾಂಶ ಬಂದಿದ್ದು, ಕಾಂಗ್ರೆಸ್ ಅಭ್ಯರ್ಥಿ ಅನ್ನಪುರ್ಣ ತುಕರಾಂ ಗೆಲುವು ಸಾಧಿಸಿದ್ದಾರೆ. ಸಂಜೆ ವೇಳೆಗೆ ಅಧಿಕೃತ ಅನೌನ್ಸ್ ಆಗಲಿದೆ. ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವುದಕ್ಕಾಗಿ ಜನಾರ್ದನ ರೆಡ್ಡಿ ಅವರು ಸಾಕಷ್ಟು

error: Content is protected !!