ಸುದ್ದಿಒನ್, ಚಿತ್ರದುರ್ಗ, (ಅ.01) : ಐಮಂಗಲ ಪೊಲೀಸ್ ತರಬೇತಿ ಶಾಲೆ ಆರನೇ ತಂಡದ ಪೊಲೀಸ್ ಪೇದೆಗಳ ನಿರ್ಗಮನ ಪಥಸಂಚಲನಕ್ಕೆ ಸಿದ್ಧವಾಗಿದೆ.
ಒಟ್ಟು 429 ಪ್ರಶಿಕ್ಷಣಾರ್ಥಿಗಳು ತರಬೇತಿ ಪಡೆದಿದ್ದಾರೆ. ಇದರಲ್ಲಿ ಒಬ್ಬರು ಎಂ.ಟೆಕ್, 25 ಮಂದಿ ಬಿಇ, 25 ಸ್ನಾತಕೋತ್ತರ ಪದವೀಧರರು, 313 ಪದವೀಧರರು , ಏಳು ಜನ ಐಟಿಐ, ಹದಿಮೂರು ಆರ್ಮಿ ಪದವೀಧರರಿದ್ದಾರೆ.
2002 ರಲ್ಲಿ ತಾತ್ಕಾಲಿಕವಾಗಿ ಆರಂಭವಾದ ಪೊಲೀಸ್ ತರಬೇತಿ ಶಾಲೆ 2015 ರಿಂದ ಕಾಯಂ ತರಬೇತಿ ಶಾಲೆಯಾಗಿದ್ದು, ರಾಜ್ಯದ 12 ಶಾಲೆಗಳಲ್ಲಿ ಇದು ಒಂದಾಗಿದೆ. ಇದುವರೆಗೆ ಏಳು ತಂಡಗಳಿಗೆ ತರಬೇತಿ ನೀಡಲಾಗಿದೆ ಎನ್ನುತ್ತಾರೆ ತರಬೇತಿ ಶಾಲೆ ಪ್ರಾಂಶುಪಾಲ ಪಿ.ಪಾಪಣ್ಣ.
ಕಲಬುರ್ಗಿ ತರಬೇತಿ ಶಾಲೆಯಲ್ಲಿ ಎಸ್ಐ ಮತ್ತು ಕಾನ್ ಸ್ಟೇಬಲ್ ಗಳಿಗೆ ತರಬೇತಿ ನೀಡಲಾಗುತ್ತದೆ. ಐಮಂಗಲ ಕೇಂದ್ರದಲ್ಲಿ ಐನೂರು ಪೇದೆಗಳಿಗೆ ತರಬೇತಿ ಮತ್ತು ಪುನರ್ ಮನನ ನಡೆಸಲಾಗುತ್ತಿದೆ. ಜತೆಗೆ ಒಳಾಂಗಣ, ಹೊರಾಂಗಣ ತರಬೇತಿ ನೀಡಲಾಗುತ್ತದೆ.
2,240 ಪೊಲೀಸರಿಗೆ ತರಬೇತಿ, ಅರಣ್ಯ ಇಲಾಖೆ ಸಿಬ್ಬಂದಿಗೆ ಶಸ್ತ್ರಾಸ್ತ್ರ ತರಬೇತಿ ನೀಡಿರುವ ಹೆಗ್ಗಳಿಕೆಗೆ ಈ ಕೇಂದ್ರ ಪಾತ್ರವಾಗಿದೆ.