Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮೋದಿ ಒಬ್ಬ ಅಪ್ರತಿಮ ದೇಶ ಭಕ್ತ ಎಂದು ಹೊರದೇಶದವರೇ ಹೊಗಳುತ್ತಿದ್ದಾರೆ : ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್

ಮೊ : 78998 64552

ಚಿತ್ರದುರ್ಗ, (ನ.21): ಮೋದಿ ದೇಶದ ಪ್ರಧಾನಿಯಾದ ಮೇಲೆ ಭಾರತದ ಕೀರ್ತಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿದೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಬಾಪೂಜಿ ವಿದ್ಯಾಸಂಸ್ಥೆಯಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಪ್ರೊ.ಲಿಂಗಪ್ಪನವರ ನರೇಂದ್ರ ಮೋದಿರವರ ಬದುಕಿನ ಮಾಯ ಯಾನ ಹಾಗೂ ಅರಿವಿನ ಬುತ್ತಿ ಪುಸ್ತಕಗಳ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಪ್ರೊ.ಲಿಂಗಪ್ಪನವರು ವಾಸ್ತವಾಂಶ ಮಾತನಾಡುವವರು. ಸಿದ್ದಾಂತಗಳ ಬಗ್ಗೆ ಮಾತನಾಡುವ ಕೆಲವರು ನಿಜಸಂಗತಿಗಳನ್ನು ತಿರುಚುವ ಕೆಲಸ ಮಾಡುತ್ತಾರೆ. ಎರಡು ಪುಸ್ತಕಗಳನ್ನು ಅತ್ಯುತ್ತಮವಾಗಿ ಬರೆದಿದ್ದಾರೆಂದು ಬಣ್ಣಿಸಿದರು.

ಆರ್.ಎಸ್.ಎಸ್.ನಿಂದ ಬೆಳೆದು ಬಂದು ಮೋದಿ ಶಾಸಕರಾಗದೆ ಗುಜರಾತ್ ಮುಖ್ಯಮಂತ್ರಿಯಾದರು. ಅದೇ ರೀತಿ ಲೋಕಸಭಾ ಸದಸ್ಯರಾಗದೆ ದೇಶದ ಪ್ರಧಾನಿಯಾದರು. ಬಾಲಕನಿದ್ದಾಗಲೆ ಅಮೇರಿಕ್ಕೆ ಹೋಗಿದ್ದವರು. ಇಪ್ಪತ್ತು ವರ್ಷಗಳಾದ ಮೇಲೆ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡರು. ದೇಶದ ಸ್ವಾತಂತ್ರ್ಯಕ್ಕಾಗಿ ಹುಟ್ಟಿಕೊಂಡ ಕಾಂಗ್ರೆಸ್ ಪಕ್ಷವನ್ನು ಸ್ವಾತಂತ್ರ್ಯ ನಂತರ ವಿಸರ್ಜಿಸುವಂತೆ ಅನೇಕ ಹಿರಿಯರು ಹೇಳಿದ್ದರು. ಆದರೆ ನೆಹರು ತನ್ನ ಸ್ವಾರ್ಥಕ್ಕಾಗಿ ರಾಜಕೀಯವಾಗಿ ಪಕ್ಷವನ್ನಾಗಿ ಬಳಸಿಕೊಂಡರು. ಟ್ರಿಪಲ್ ತಲಾಖ್ ರದ್ದುಪಡಿಸಿದ ಮೋದಿ ಜಮ್ಮ ಮತ್ತು ಕಾಶ್ಮೀರ ಇಲ್ಲಿಯವರೆಗೂ ಅನುಭವಿಸಿಕೊಂಡು ಬಂದು ಆರ್ಟಿಕಲ್ 370 ನ್ನು ನಿಷೇಧಿಸಿ ದಿಟ್ಟ ನಿರ್ಧಾರ ಕೈಗೊಂಡರು.

ಪೌರತ್ವ ತಿದ್ದುಪಡಿ ಕಾಯಿದೆ ಜಾರಿಗೆ ತರಲು ಹೊರಟಾಗ ಭಾರತದ ಮುಸಲ್ಮಾನರನ್ನು ದೇಶದಿಂದ ಹೊರಹಾಕಲಾಗುತ್ತದೆ ಎಂದು ಕಾಂಗ್ರೆಸ್‍ನವರು ಅಪಪ್ರಚಾರದಲ್ಲಿ ತೊಡಗಿದರು. 1952 ರಲ್ಲಿ ಶ್ಯಾಂಪ್ರಸಾದ್ ಮುಖರ್ಜಿ ಘೋಷಿಸಿದ್ದ ಪ್ರಣಾಳಿಕೆಯಂತೆ ಪ್ರಧಾನಿ ಮೋದಿ ಎಲ್ಲವನ್ನು ಈಡೇರಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಗೆದ್ದು ಮತ್ತೆ ಅವರೇ ದೇಶದ ಪ್ರಧಾನಿಯಾದರೆ ಪಾಕಿಸ್ತಾನ ಆಕ್ಯುಪೈಡ್ ಕಾಶ್ಮೀರವನ್ನು ವಶಪಡಿಸಿಕೊಳ್ಳುವುದರಲ್ಲಿ ಅನುಮಾನವಿಲ್ಲವೆಂದರು.

ಕೊರೋನಾದಲ್ಲಿ 200 ಕೋಟಿ ಡೋಸ್ ಲಸಿಕೆಯನ್ನು ಉಚಿತವಾಗಿ ನೀಡಿದ್ದರಿಂದ ನಮ್ಮ ದೇಶದಲ್ಲಿ ಸಾವು-ನೋವಿನ ಸಂಖ್ಯೆ ಕಡಿಮೆಯಾಯಿತು. ಯಾರು ಹಸಿವಿನಿಂದ ನರಳಬಾರದೆಂದು 80 ಕೋಟಿ ಜನರಿಗೆ ಉಚಿತವಾಗಿ ಪಡಿತರ ಧಾನ್ಯಗಳನ್ನು ನೀಡುತ್ತಿದ್ದಾರೆ. ರಷ್ಯಾ-ಉಕ್ರೇನ್ ಯುದ್ದದಲ್ಲಿ ಸಿಕ್ಕಿಹಾಕಿಕೊಂಡಿದ್ದ ನಮ್ಮ ದೇಶದ ವಿದ್ಯಾರ್ಥಿಗಳಷ್ಟೆ ಅಲ್ಲ ಚೀನ, ಶ್ರೀಲಂಕಾದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆ ತಂದ ಎದೆಗಾರಿಕೆ ಮೋದಿಯವರದು. ಚೀನಾ ಗಡಿಗೆ ಹೋಗಿ ನಮ್ಮ ತಂಟೆಗೆ ಬಂದರೆ ಹುಷಾರ್ ಎನ್ನುವ ಎಚ್ಚರಿಕೆ ನೀಡುವ ಧೈರ್ಯ ತೋರಿದ್ದಾರೆ. ಮೋದಿ ಒಬ್ಬ ಅಪ್ರತಿಮ ದೇಶ ಭಕ್ತ ಎಂದು ಹೊರದೇಶದವರು ಹೊಗಳುತ್ತಿದ್ದಾರೆ ಎಂದು ಗುಣಗಾನ ಮಾಡಿದರು.

ನಿವೃತ್ತ ಮುಖ್ಯ ಶಿಕ್ಷಕ ಹುರುಳಿ ಬಸವರಾಜ್ ಅರಿವಿನ ಬುತ್ತಿ ಪುಸ್ತಕ ಕುರಿತು ಮಾತನಾಡುತ್ತ ಪ್ರೊ.ಲಿಂಗಪ್ಪ 25 ಕೃತಿಗಳನ್ನು ಬರೆದಿದ್ದಾರೆ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಧಾರ್ಮಿಕ ವಿಷಯಗಳಲ್ಲದೆ ಇತ್ತೀಚೆಗೆ ರಾಜಕೀಯ ವಿಚಾರಗಳು ಇವರ ಬರಹಗಳಲ್ಲಿವೆ. 120 ಪುಟಗಳ ಅರ್ಥಪೂರ್ಣವಾದ ಕೃತಿ ಇದು. ಸಾಮಾನ್ಯನಿಗೂ ಅರ್ಥೈಸುವ ಸರಳವಾಗಿ ಓದುಗನನ್ನು ಕಥನ ರೂಪದಲ್ಲಿ ಕೊಂಡೊಯ್ಯುವಂತಿದೆ.

ನಮ್ಮ ದೇಶದ ಈಗಿನ ಪ್ರಧಾನಿ ನರೇಂದ್ರಮೋದಿ ಬಾಲಕನಿದ್ದಾಗಲೆ ಹಿಮಾಲಯದಲ್ಲಿ ಯೋಗಿಯಂತೆ ಕೆಲವು ದಿನಗಳನ್ನು ಕಳೆಯುತ್ತಾರೆ. ಸಂಘಟನೆ ಚಾತುರ್ಯ ಮಾತುಗಾರಿಕೆ ಅವರಲ್ಲಿದೆ. ಹೃದಯವಂತಿಕೆ ಸಂಘಟನೆಯಲ್ಲಿ ಪ್ರಬುದ್ದರು. ಆರ್ಥಿಕ ನೀತಿ, ಕೋರಾನದಂತ ಸಂಕಷ್ಠ ಪರಿಸ್ಥಿತಿ, ನೋಟುಗಳ ಅಮಾನ್ಯೀಕರಣ ಸಂದರ್ಭದಲ್ಲಿ ಅನೇಕ ಟೀಕೆ ಟಿಪ್ಪಣಿಗಳು ಎದುರಾದರೂ ಯಾವುದಕ್ಕೂ ಜಗ್ಗಲಿಲ್ಲ. ಕಥೆಗಾರ, ಕಾದಂಬರಿಗಾರ ಮೋದಿಯಲ್ಲಿದ್ದಾನೆ. ಬುದ್ದ, ಬಸವ, ಅಂಬೇಡ್ಕರ್‍ರವರಲ್ಲಿದ್ದ ಪ್ರಜ್ಞೆಯನ್ನು ಪ್ರೊ.ಲಿಂಗಪ್ಪ ಪುಸ್ತಕದಲ್ಲಿ ಕಾಣಿಸಿದ್ದಾರೆಂದು ಹೇಳಿದರು.

ಜಾನಪದ ವಿದ್ವಾಂಸ ಡಾ.ಪಿ.ಬಿ.ಮೀರಾಸಾಬಿಹಳ್ಳಿ ಶಿವಣ್ಣ, ಪ್ರೊ.ಟಿ.ವಿ.ಸುರೇಶ್‍ಗುಪ್ತ, ಬಿಜೆಪಿ.ಜಿಲ್ಲಾ ಉಪಾಧ್ಯಕ್ಷ ಕಲ್ಲೇಶಯ್ಯ, ಬಾಪೂಜಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಕೆ.ಎಂ.ವೀರೇಶ್, ನಿವೃತ್ತ ಉಪನ್ಯಾಸಕ ಪರಮೇಶ್ವರಪ್ಪ ವೇದಿಕೆಯಲ್ಲಿದ್ದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎನ್.ಶಿವಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಕಾಮಾಲೆ (ಜಾಂಡೀಸ್) ರೋಗ ಎಂದರೇನು ? ಇಲ್ಲಿದೆ ಉಪಯುಕ್ತ ಮಾಹಿತಿ….!

ಕಾಮಾಲೆ ಅಥವಾ ಜಾಂಡೀಸ್ ಎನ್ನುವುದು ಹತ್ತು ಹಲವು ರೋಗಗಳಲ್ಲಿ ಕಂಡು ಬರುವ ದೇಹ ಸ್ಥಿತಿಯಾಗಿರುತ್ತದೆ. ಹಲವಾರು ಕಾರಣಗಳಿಂದ ಕಾಮಾಲೆ ರೋಗ ಬರುವ ಸಾಧ್ಯತೆ ಇರುತ್ತದೆ. ಕಾಮಾಲೆ ಎಂಬ ಪದವು ಕಾಮ ಮತ್ತು ಲಾ ಎಂಬ

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ: ಈ ರಾಶಿಯ ಕುಟುಂಬದಲ್ಲಿ ಕಲಹಗಳು ಆಗಲು ದಾಯಾದಿಗಳೇ ಕಾರಣ : ಈ ರಾಶಿಯ ಗಂಡ ಹೆಂಡತಿ ದೂರವಾಗಲು ಹಿತೈಷಿಗಳೇ ಕಾರಣ : ಶನಿವಾರ-ರಾಶಿ ಭವಿಷ್ಯ

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

error: Content is protected !!