ಸುದ್ದಿಒನ್, ಚಳ್ಳಕೆರೆ, (ಸೆ.30) : ನಗರದ ರಹೀಂ ನಗರದ ನಿವಾಸಿ ಪವನ್ ಕುಮಾರ್(30) ಎಂಬ ಯುವಕ ಜೀವನದಲ್ಲಿ ಜಿಗುಪ್ಸೆಗೊಂಡು ಇಲ್ಲಿನ ಅರಣ್ಯ ಇಲಾಖೆ ಒಳಭಾಗದಲ್ಲಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತನ ಸಾವಿಗೆ ನಿಖರವಾದ ಕಾರಣಗಳು ತಿಳಿದುಬಂದಿಲ್ಲವಾದರೂ ಜಿಗುಪ್ಸೆಗೊಂಡ ಹಿನ್ನೆಲೆಯಲ್ಲಿ ಬುಧವಾರ ಮಧ್ಯಾನ್ಹ ನೇಣುಹಾಕಿಕೊಂಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಈ ಸಂಬಂಧ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.