ಸುದ್ದಿಒನ್, ಚಿತ್ರದುರ್ಗ, (ಸೆ.30) : ವಾಹನ ಬಿಡುವ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದ ಘಟನೆ ಚಳ್ಳಕೆರೆ ತಾಲೂಕಿನ ಹಿರೇಹಳ್ಳಿ ಟೋಲ್ ನಲ್ಲಿ ನಡೆದಿದೆ.
ಹೊಸ ಹೆದ್ದಾರಿ ಟೋಲ್ ನಲ್ಲಿ ಬುಧವಾರ ರಾತ್ರಿ ಟೋಲ್ ನಲ್ಲಿ ವಾಹನ ಬಿಡುವ ವಿಚಾರಕ್ಕೆ ತಡವಾದ ಕಾರಣ ಸಿಬ್ಬಂದಿ ಹಾಗೂ ವಾಹನ ಸವಾರರ ನಡುವೆ ಘರ್ಷಣೆಗೆ ಕಾರಣವಾಗಿದೆ.
ಘಟನೆ ವಿಕೋಪಕ್ಕೆ ತಿರುಗಿ ಟೋಲ್ ಸಿಬ್ಬಂದಿಗಳು ಕೈಗೆ ಸಿಕ್ಕ ವಸ್ತುಗಳ ತೆಗೆದುಕೊಂಡು ವಾಹನ ಸವಾರರ ಮೇಲೆ ಹಲ್ಲೆ ನಡೆಸಿದ್ದಾರೆ. ನಾಲ್ವರಿಗೆ ಗಂಭೀರ ಗಾಯವಾಗಿದೆ.
ತೀವ್ರ ಗಾಯಗೊಂಡ ಚಳ್ಳಕೆರೆಯ ಶಿವರಾಜು, ರಾಜೇಶ್ ನನ್ನು ಚಳ್ಳಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತಳಕು ಪೋಲಿಸರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.