ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಇಂದು ರಾಜ್ಯಕ್ಕೆ ಭೇಟಿ ನೀಡಿ, ಹಲವು ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಪ್ರಧಾನಿ ಮೋದಿ ರಾಜ್ಯಕ್ಕೆ ಬಂದ ಹಿನ್ನೆಲೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಉತ್ತರ ನೀಡಿ ಮೋದಿ ಎಂಬ ಹ್ಯಾಷ್ ಟ್ಯಾಗ್ ಜೊತೆಗೆ ಟ್ವಿಟ್ಟರ್ ನಲ್ಲಿ ಸಾಲು ಸಾಲಿ ಪ್ರಶ್ನೆಗಳನ್ನು ಕೇಳಿದ್ದಾರೆ.
* ಕೇಂದ್ರದ ಆಯೋಗಗಳು ನಡೆಸುವ ಪ್ರವೇಶ ಪರೀಜ್ಷೆಯಿಂದ ಕನ್ನಡವನ್ನು ಕಿಕ್ ಔಟ್ ಮಾಡಿ, ಕನ್ನಡಿಗರ ಉದ್ಯೋಗವನ್ನು ಕಿತ್ತುಕೊಳ್ಳಲಾಗಿದೆ. ಕನ್ನಡಿಗರನ್ನು ಕಂಡರೆ ಯಾಕಿಷ್ಟು ಕೋಪ..?
* ರಾಜ್ಯದ ಆರ್ಥಿಕತೆಗೆ ನೆರವಾಗುವ ಮಹದಾಯಿ, ಕೃಷ್ಣಾ ಮೇಲ್ದಂಡೆ, ಮೇಕೆದಾಟು ಯೋಜನೆಗಳ ಜಾರಿ ಯಾವಾಗ..? ಇವುಗಳನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿ ಎನ್ನುವ ರೈತರ ಬೇಡಿಕೆಯ ಬಗ್ಗೆ ನಿಮ್ಮ ನಿಲುವೇನು..?
* ತುಮಕೂರು-ದಾವಣಗೆರೆ ಸಬ್ ಅರ್ಬನ್ ರೈಲ್ವೇ ಯೋಜನೆಗೆ ಅಗತ್ಯ ಹಣ ನೀಡಿಲ್ಲ. ರಾಯಚೂರು ಜನತೆಯ ಏಮ್ಸ್ ಕನಸು ಇನ್ನೂ ಕನಸಾಗಿಯೇ ಉಳಿದಿದೆ. ಕರ್ನಾಟಕದ ಬಗ್ಗೆ ಯಾಕೆ ಈ ಮಲತಾಯಿ ಧೋರಣೆ..?
* ರಾಜ್ಯದ ಹಣದುಬ್ಬರ ಶೇ. 7.62ಕ್ಕೆ ಏರಿಕೆಯಾಗಿದೆ. ಗಾಯದ ಮೇಲೆ ಬರೆ ಎಂಬಂತೆ ರಾಜ್ಯದ ನಿರುದ್ಯೋಗ ಪ್ರಮಾಣ ಶೇ. 38.7ಕ್ಕೆ ಏರಿಕೆಯಾಗಿದೆ. ಹೀಗಾದರೆ ಸಾಮಾನ್ಯ ಜನ ಬದುಕುವುದು ಹೇಗೆ..?ಎಂದು ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಪ್ರಶ್ನೆ ಹಾಕಿದ್ದಾರೆ.