Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕರಡು ಮತದಾರ ಪಟ್ಟಿ ಪ್ರಕಟಣೆ : ಮತದಾರರಪಟ್ಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿಗೆ ಅವಕಾಶ

Facebook
Twitter
Telegram
WhatsApp

ಮಾಹಿತಿ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ,(ನ.08) : ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಭಾವಚಿತ್ರವಿರುವ ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಣೆ-2023ರ ಸಂಬಂಧ ಚುನಾವಣಾ ಆಯೋಗವು ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಇದರ ಅನುಸಾರ ಇದೇ ನವೆಂಬರ್ 9 ರಂದು ಕರಡು ಮತದಾರ ಪಟ್ಟಿ ಪ್ರಕಟಣೆ ಮಾಡಲಾಗುವುದು. ನವೆಂಬರ್ 9 ರಿಂದ ಡಿಸೆಂಬರ್ 8 ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ. ನವೆಂಬರ್ 12, ನವೆಂಬರ್ 20, ಡಿಸೆಂಬರ್ 03 ಹಾಗೂ ಡಿಸೆಂಬರ್ 04 ರಂದು ಮಿಂಚಿನ ನೋಂದಣಿ ಕಾರ್ಯಚರಣೆ ನಡೆಯಲಿದೆ. ಡಿಸೆಂಬರ್ 26 ವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ತೀರ್ಮಾನಿಸಲಾಗುವುದು. 2023ರ ಜನವರಿ 05 ರಂದು ಮತದಾರರ ಅಂತಿಮ ಪಟ್ಟಿ ಪ್ರಕಟಣೆ ಮಾಡಲಾಗುವುದು.

2023 ಜನವರಿ 01ಕ್ಕೆ 18 ವರ್ಷ ಪೂರ್ಣಗೊಳ್ಳುವವರು ಹಾಗೂ ಸಂಬಂಧಿಸಿದ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಲ್ಲದವರು ಹಾಗೂ ಹೆಸರು ಕೈಬಿಟ್ಟುಹೋಗಿರುವವರು ಹಾಗೂ ಮತದಾರರ ಪಟ್ಟಿಯಲ್ಲಿ ಮಾಹಿತಿಯನ್ನು ತಿದ್ದುಪಡಿ ಮಾಡಿಸಬೇಕಾದಲ್ಲಿ ಮತ್ತು ಬೇರೆ ಮತಗಟ್ಟೆ, ಕ್ಷೇತ್ರಕ್ಕೆ ವರ್ಗಾಹಿಸಬೇಕಾಗಿದ್ದಲ್ಲಿ ನಿಗದಿಪಡಿಸಿರುವ ನಮೂನೆಗಳಾದ 6,7 ಮತ್ತು 8ಗಳಲ್ಲಿ ಅರ್ಜಿಯನ್ನು ಭರ್ತಿ ಮಾಡಿ ದಾಖಲಾತಿಗಳೊಂದಿಗೆ ತಮ್ಮ ವ್ಯಾಪ್ತಿಯ ಮತದಾನ ಕೇಂದ್ರದಲ್ಲಿ, ತಾಲ್ಲೂಕು ಕಚೇರಿಯಲ್ಲಿ, ಉಪವಿಭಾಗಾಧಿಕಾರಿಗಳವರ ಕಾರ್ಯಾಲಯದಲ್ಲಿ ನೀಡಿ ಸ್ವೀಕೃತಿ ಪಡೆಯಬಹುದಾಗಿದೆ.

ಅಲ್ಲದೇ ಭಾರತ ಚುನಾವಣಾ ಆಯೋಗವು ಹೊಸದಾಗಿ ಮತದಾರರ ಸಹಾಯವಾಣಿ (voter Help line App) ನ್ನು ಜಾರಿಗೆ ತಂದಿದ್ದು, ಸಾರ್ವಜನಿಕರು ಮತದಾರರ ಸಹಾಯವಾಣಿ (voter Help line App)  ಮುಖಾಂತರವೇ ಆನ್‍ಲೈನ್‍ನಲ್ಲಿ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಕೋರಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಫೈನಲಿ ಪ್ಲೇ ಆಫ್ ಗೆ ಗ್ರ್ಯಾಂಡ್ ಎಂಟ್ರಿಯಾಯ್ತು RCB

ಬೆಂಗಳೂರು: ನಿನ್ನೆ ಸಂಜೆಯಿಂದ ಬೆಂಗಳೂರಿನಲ್ಲಿ ಬಾರೀ ಮಳೆ. ಆರ್ಸಿಬಿ ಪಂದ್ಯದ ವೇಳೆ ಮಳೆಯಾಟ ಜೋರಾಗಿತ್ತು. ಒಮ್ಮೊಮ್ಮೆ ಮಳೆ ಬಂದು ಬಂದು ನಿಲ್ಲುತ್ತಿತ್ತು. ಇದರಿಂದ ಆರ್ಸಿಬಿ ಅಭಿಮಾನಿಗಳಿಗೆ ಬೇಸರವೂ ಆಗಿತ್ತು. ಆದ್ರೆ ಆರ್ಸಿಬಿ ಕೊಟ್ಟ ಟಾರ್ಗೆಟ್‌

ಅನ್ನ ಮಾಡುವಾಗ ಅಕ್ಕಿಯನ್ನು ಎಷ್ಟು ಬಾರಿ ತೊಳೆಯಬೇಕು ಗೊತ್ತಾ ?

ಸುದ್ದಿಒನ್ : ನಾವು ದಿನಕ್ಕೆ ಎರಡರಿಂದ ಮೂರು ಬಾರಿ ತಿನ್ನುವ ಪ್ರಮುಖ ಆಹಾರವೆಂದರೆ ಅಕ್ಕಿ. ದೇಶದ ಹೆಚ್ಚಿನ ಭಾಗಗಳಲ್ಲಿ, ಜನರು ಅನ್ನವನ್ನು ತಿನ್ನುತ್ತಾರೆ. ಕೆಲವು ರಾಜ್ಯಗಳಲ್ಲಿ ಅಕ್ಕಿ ಪ್ರಧಾನ ಆಹಾರವಾಗಿದೆ. ಬ್ರೌನ್ ರೈಸ್ ಮತ್ತು

ಈ ರಾಶಿಯವರ ಮದುವೆ ಯಾವಾಗ ಆಗುತ್ತೆ? ಎಂಬ ಚಿಂತೆಯಲ್ಲಿ ವಯಸ್ಸು ಮೀರುತಿದೆ.

ಈ ರಾಶಿಯವರ ಮದುವೆ ಯಾವಾಗ ಆಗುತ್ತೆ? ಎಂಬ ಚಿಂತೆಯಲ್ಲಿ ವಯಸ್ಸು ಮೀರುತಿದೆ. ಈ ರಾಶಿಯವರು ತುಂಬಾ ದಿವಸದಿಂದ ಪ್ರೀತಿಸುತ್ತಿದ್ದಾರೆ ಆದರೆ ಇವರ ಜೊತೆ ಮದುವೆ ಆಗುತ್ತೋ ಇಲ್ವೋ ಎಂಬ ಅನುಮಾನ, ಭಾನುವಾರ- ರಾಶಿ ಭವಿಷ್ಯ

error: Content is protected !!