ಬೆಂಗಳೂರು : ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯಲ್ಲಿ ಕೆಜಿಎಫ್-2 ಚಿತ್ರದ ಹಾಡನ್ನು ಪ್ರಸಾರ ಮಾಡಿದ್ದಕ್ಕಾಗಿ ಸಂಗೀತ ಸಂಸ್ಥೆಯೊಂದು ಆ ಪಕ್ಷದ ವಿರುದ್ಧ ಹಕ್ಕುಸ್ವಾಮ್ಯ ಪ್ರಕರಣವನ್ನು ದಾಖಲಿಸಿದ ನಂತರ ಇಲ್ಲಿನ ನ್ಯಾಯಾಲಯವು ಕಾಂಗ್ರೆಸ್ನ ಟ್ವಿಟರ್ ಅನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲು ಆದೇಶಿಸಿದೆ.
https://twitter.com/INCIndia/status/1579838167217188865?ref_src=twsrc%5Etfw%7Ctwcamp%5Etweetembed%7Ctwterm%5E1579838167217188865%7Ctwgr%5E31bb7a2717ff64b88b5b54ae99d25c481352cb7b%7Ctwcon%5Es1_c10&ref_url=https%3A%2F%2Fd-6796535981172762114.ampproject.net%2F2210211855000%2Fframe.html
ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಸೂಪರ್-ಹಿಟ್ ಚಿತ್ರ ಕೆಜಿಎಫ್ 2 ಚಿತ್ರದ ಹಾಡುಗಳನ್ನು ಕಾಂಗ್ರೆಸ್ ಬಳಸಿದೆ ಎಂದು ಆರೋಪಿಸಿ ಬೆಂಗಳೂರು ಮೂಲದ ಸಂಗೀತ ಸಂಸ್ಥೆ ಎಂಆರ್ಟಿ ಮ್ಯೂಸಿಕ್ ಸಲ್ಲಿಸಿದ ದೂರಿನ ನಂತರ ನ್ಯಾಯಾಲಯವು ಈ ಕ್ರಮ ಕೈಗೊಂಡಿದೆ.
ಕೃತಿಸ್ವಾಮ್ಯ ಉಲ್ಲಂಘನೆಗಾಗಿ ಎಮ್ಆರ್ಟಿ ಮ್ಯೂಸಿಕ್ ಸಂಸ್ಥೆ ಮೂವರು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಜೈರಾಮ್ ರಮೇಶ್ ಮತ್ತು ಸುಪ್ರಿಯಾ ಶ್ರಿನೇಟ್ ವಿರುದ್ಧ ಮೊಕದ್ದಮೆ ದಾಖಲಿಸಿದೆ.