ಚಿಕ್ಕೋಡಿ: ಹಿಂದೂ ಪದ ಎಲ್ಲಿಂದ ಬಂತು… ಅದರ ಅರ್ಥ ತಿಳಿದರೆ ನಿಮಗೆ ನಾಚಿಕೆಯಾಗುತ್ತೆ ಅಂತ ಹೇಳಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೊಸ ಚರ್ಚೆ ಹುಟ್ಟು ಹಾಕಿದ್ದಾರೆ. ಹಿಂದೂ ಪದ ಎನ್ನುವುದು ಭಾರತೀಯ ಪದವೇ ಅಲ್ಲ. ಅದೊಂದು ಪರ್ಶಿಯನ್ ಭಾಷೆ ಎಂದಿದ್ದಾರೆ.
ನಿಪ್ಪಾಣಿಯಲ್ಲಿ ಮಾನವ ಬಂಧುತ್ವ ಕಾರ್ಯಕ್ರಮದಲ್ಲಿ ಮಾತನಾಡಿದ ಸತೀಶ್ ಜಾರಕಿಹೊಳಿ ಅವರು, ಹಿಂದೂ ಭಾರತದ ಪದವಲ್ಲ. ಇದು ನಮ್ಮದಾ..? ಹಿಂದೂ ಪದ ಎಲ್ಲಿಂದ ಬಂತು. ಇರಾನ್, ಇರಾಕ್, ಖಜಕಿಸ್ತಾನದ್ದು. ಭಾರತಕ್ಕೂ ಇದಕ್ಕೂ ಏನು ಸಂಬಂಧ. .? ಈ ಪದ ನಿಮ್ಮದು ಹೇಗೆ ಆಗುತ್ತೆ..? ಈ ಬಗ್ಗೆ ಚರ್ಚೆಯಾಗಲೇಬೇಕು.
ಈಗ ವಾಟ್ಸಾಪ್, ವಿಕಿಪೀಡಿಯಾ ನೋಡಿ. ಇದು ಪರ್ಶಿಯನ್ ನಿಂದ ಬಂದಿರುವುದು. ನಿಮ್ಮದಲ್ಲ. ಆದರೂ ತುಂಬಾ ವೈಭವೀಕರಿಸಿದ್ದಾರೆ. ಯಾಕೆ ಹೀಗೆ ಮಾಡುತ್ತಿದ್ದೀರಿ. ನಿಮ್ಮದಲ್ಲ ಈ ಪದ. ಈ ಪದದ ಅರ್ಥ ನಿಮಗೆ ಗೊತ್ತಾದರೆ ನಾಚಿಕೆಯಾಗುತ್ತದೆ. ಅದು ತುಂಬಾ ಕೆಟ್ಟದಾಗಿದೆ. ಇದನ್ನು ನಾನು ಹೇಳಿದ್ದಲ್ಲ. ಸ್ವಾಮೀಜಿಯೊಬ್ಬರು ಹೇಳಿದ್ದು. ಇದು ಈಗಾಗಲೇ ವೆಬ್ಸೈಟ್ ನಲ್ಲೂಇದೆ. ಯಾವುದೋ ಧರ್ಮ, ಪದ ತಂದು ನಮ್ಮ ಮೇಲೆ ಬಲವಂತವಾಗಿ ಹಾಕುತ್ತಿದ್ದಾರೆ ಎಂದು ಸತೀಶ್ ಜಾರಕಿಹೊಳಿ ಚರ್ಚೆ ಹುಟ್ಟು ಹಾಕಿದ್ದಾರೆ.