Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಗ್ರಾಹಕ ಪ್ರಜ್ಞಾವಂತನಾಗಿದ್ದರೆ ಮಾರಾಟಗಾರರು ಮೋಸ ಮಾಡಲು ಸಾಧ್ಯವಿಲ್ಲ : ಡಾ.ಮಂಜುಳ ಸಿ.ತಿಪ್ಪಣ್ಣವರ್

Facebook
Twitter
Telegram
WhatsApp

 

ವರದಿ ಮತ್ತು ಫೋಟೋ  ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ, (ನ.06): ತೂಕ ಮತ್ತು ಗುಣಮಟ್ಟದಲ್ಲಿ ಮೋಸವಾದಾಗ ಪ್ರಶ್ನಿಸುವ ತಿಳುವಳಿಕೆಯನ್ನು ಗ್ರಾಹಕರಲ್ಲಿ ಮೂಡಿಸುವುದೇ ಗ್ರಾಹಕರ ಹಕ್ಕುಗಳ ಸಂಘಟನೆಯ ಮುಖ್ಯ ಉದ್ದೇಶ ಎಂದು ಸಂಘಟನೆಯ ರಾಜ್ಯಾಧ್ಯಕ್ಷೆ ಡಾ.ಮಂಜುಳ ಸಿ.ತಿಪ್ಪಣ್ಣವರ್ ತಿಳಿಸಿದರು.

ಭೀಮುಸಮುದ್ರ ರಸ್ತೆಯಲ್ಲಿರುವ ದವಳಗಿರಿ ಬಡಾವಣೆಯಲ್ಲಿ ಭಾನುವಾರ ಗ್ರಾಹಕರ ಹಕ್ಕುಗಳ ಸಂಘಟನೆ ಕಚೇರಿ ಉದ್ಘಾಟಿಸಿ ಮಾತನಾಡಿದರು.

ಬೆಳಗಿನಿಂದ ಹಿಡಿದು ರಾತ್ರಿ ಮಲುಗುವತನಕ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಜೀವನೋಪಾಯಕ್ಕೆ ಅಗತ್ಯವಿರುವ ವಸ್ತುಗಳನ್ನು ಖರೀದಿಸುತ್ತಾರೆ. ಆದರೆ ಅದರ ಗುಣಮಟ್ಟ ಹಾಗೂ ತೂಕದಲ್ಲಾಗುವ ವಂಚನೆಯ ಕಡೆ ಗಮನ ಕೊಡುವುದಿಲ್ಲ. ಪ್ಯಾಕ್‍ಗಳ ಮೇಲಿರುವ ಎಂ.ಆರ್.ಪಿ.ಬೆಲೆಗಿಂತ ಅಂಗಡಿಯವರು ಹೆಚ್ಚು ಹಣ ಪಡೆದರು ಪ್ರಶ್ನಿಸುವುದಿಲ್ಲ. ಎಲ್ಲಿಯವರೆಗೂ ಮೋಸ ಹೋಗುವವರು ಇರುತ್ತಾರೋ ಅಲ್ಲಿಯತನಕ ವಂಚನೆ ಮಾಡುವವರು ಇದ್ದೇ ಇರುತ್ತಾರೆ.
ಹಾಗಾಗಿ ಗ್ರಾಹಕರು ಎಚ್ಚರವಾಗಿದ್ದರೆ ಮಾರಾಟಗಾರರು ಜಾಗೃತರಾಗಿರುತ್ತಾರೆಂದು ಹೇಳಿದರು.

ಗ್ರಾಹಕರ ಹಕ್ಕುಗಳ ಸಂಘಟನೆ ಅತ್ಯಂತ ಪವರ್‍ಫುಲ್. ಸರ್ಕಾರ ಮಾಡದ ಕೆಲಸವನ್ನು ಈ ಸಂಘಟನೆ ಮಾಡುತ್ತದೆ. ಗ್ರಾಹಕ ಪ್ರಜ್ಞಾವಂತನಾಗಿದ್ದರೆ ಮಾರಾಟಗಾರರು ಮೋಸ ಮಾಡಲು ಸಾಧ್ಯವಿಲ್ಲ. ಅನ್ಯಾಯವನ್ನು ಪ್ರಶ್ನಿಸುವ ಧೈರ್ಯ ಗ್ರಾಹಕರಲ್ಲಿ ಮೂಡಬೇಕು. ಗ್ರಾಹಕ ತನ್ನನ್ನು ತಾನು ಮೋಸಕ್ಕೆ ಒಳಪಡಿಸಿಕೊಳ್ಳಬಾರದು. ಕಿರಾಣಿ ಅಂಗಡಿ, ಪೆಟ್ರೋಕ್ ಬಂಕ್, ಹಾಲಿನ ಕೇಂದ್ರ ಹೀಗೆ ಪಟ್ಟಿ ಮಾಡುತ್ತ ಹೋದರೆ ಗ್ರಾಹಕ ಎಲ್ಲೆಲ್ಲಿ ವಸ್ತುಗಳನ್ನು ಖರೀಧಿಸುತ್ತಾನೋ ಅಲ್ಲೆಲ್ಲ ಎಚ್ಚರಿಕೆಯಿಂದ ಇರುವಂತೆ ಜಾಗೃತಿ ಮೂಡಿಸುವುದಕ್ಕಾಗಿ ನಾವುಗಳು ಸಿದ್ದರಿದ್ದೇವೆ. ಎಂದರು.

ಉಳಿತಾಯ ಗಳಿಕೆಗಿಂತ ಮುಖ್ಯ. ಎಲ್ಲಾ ತಾಲ್ಲೂಕು, ಹಳ್ಳಿಗಳಲ್ಲಿ ನಮ್ಮ ಸಂಘಟನೆಯನ್ನು ವಿಸ್ತರಿಸುತ್ತೇವೆ. ಬರೀ ಮೊಬೈಲ್‍ನಲ್ಲಿಯೇ ಮುಳುಗಿ ಹೋಗುವ ಬದಲು ಎಲ್ಲಿ ಮೋಸ ವಂಚನೆ ನಡೆಯುತ್ತದೆಯೋ ಅಲ್ಲೆಲ್ಲಾ ಎಚ್ಚರಿಕೆಯಿಂದ ಗ್ರಾಹಕ ಇರಬೇಕಾಗುತ್ತದೆ. ಶಾಲಾ-ಕಾಲೇಜು, ಜನನಿಬಿಡ ಸ್ಥಳ, ಮಾರುಕಟ್ಟೆ, ಸಾರ್ವಜನಿಕ ವಲಯಗಳಲ್ಲಿ ವಂಚನೆ ವಿರುದ್ದ ಅರಿವು ಮೂಡಿಸಲಾಗುವುದು. ಐದರಿಂದ ಆರು ವಿಂಗ್‍ಗಳನ್ನು ರಚಿಸಲಾಗುವುದು. ಕಾನೂನು ಚೌಕಟ್ಟಿನಲ್ಲಿ ನಮ್ಮ ಸಂಘಟನೆ ಕೆಲಸ ಮಾಡಲಿದೆ. ಪ್ರಶ್ನಿಸುವ ಗುಣ ಗ್ರಾಹಕರಲ್ಲಿರಬೇಕು ಎಂದು ವಿನಂತಿಸಿದರು.

ಭಾರತೀಯ ದಲಿತ ಸಂಘರ್ಷ ಸಮಿತಿ ರಾಜ್ಯ ಉಪಾಧ್ಯಕ್ಷ ಚಂದ್ರಪ್ಪಘಾಟ್ ಮಾತನಾಡಿ ನಮ್ಮ ಜಿಲ್ಲೆಯಲ್ಲಿ ಗ್ರಾಹಕರಿಗೆ ಜಾಗೃತಿ ಮೂಡಿಸುವುದಕ್ಕಾಗಿ ಇಂತಹ ಸಂಘಟನೆ ಅವಶ್ಯಕತೆಯಿದೆ. ಮೊದಲಿನಿಂದಲೂ ಶೋಷಿತರ ಪರವಾಗಿ ಹೋರಾಟ ಮಾಡಿಕೊಂಡು ಬರುತ್ತಿರುವ ನಾನು ಸದಾ ಈ ಸಂಘಟನೆಗೆ ಬೆನ್ನೆಲುಬಾಗಿ ನಿಲ್ಲುತ್ತೇನೆ. ಸ್ಥಳ ಪ್ರಜ್ಞೆ, ಭಾಷಾ ಪ್ರಜ್ಞೆ, ಸಮಯ ಪ್ರಜ್ಞೆಯಿದ್ದಾಗ ಎಂತಹ ಸಮಸ್ಯೆಗಳನ್ನಾದರೂ ಎದುರುಸಿ ನ್ಯಾಯ ಪಡೆಯಬಹುದು. ಅದಕ್ಕಾಗಿ ಗ್ರಾಹಕರು ಈ ಸಂಘಟನೆ ಜೊತೆ ಕೈಜೋಡಿಸುವಂತೆ ವಿನಂತಿಸಿದರು.

ಹೆಚ್.ಆರ್.ಮುರುಗೇಶ್, ಗೋವಿಂದರಾಜು, ಆನಂದ್, ಜಗದೀಶ್ ಟಿ. ಅಜಯ, ಸಂಜೀವಮೂರ್ತಿ, ಗೀತ ವೇದಿಕೆಯಲ್ಲಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ರಾಜ್ಯದ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ..!

ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನವಣೆ ಭಾರೀ ಕುತೂಹಲಕ್ಕೆ ಕಾರಣವಾಗಿತ್ತು. ಇಂದು ಮತ ಎಣಿಕೆ ಕಾರ್ಯದಲ್ಲಿ ಸದ್ಯದ ಸ್ಥಿತಿಯಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಮೂರು ಕ್ಷೇತ್ರದಲ್ಲೂ ಕಾಂಗ್ರೆಸ್ ಮುಂದಿದೆ. ಸಿಪಿ ಯೋಗೀಶ್ವರ್ : 45,982

ಸಿಪಿ ಯೋಗೀಶ್ವರ್ ವರ್ಸಸ್ ನಿಖಿಲ್ ಕುಮಾರಸ್ವಾಮಿ: ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಮುನ್ನಡೆ ..!

ಚನ್ನಪಟ್ಟಣ: ರಾಜ್ಯದಲ್ಲಿ ಇಂದು ಮೂರು ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ ಕಾರ್ಯ ಬೆಳಗ್ಗೆಯಿಂದಾನೇ ನಡೆಯುತ್ತಿದೆ. ಚನ್ನಪಟ್ಟಣ ಕ್ಷೇತ್ರ ಹೈವೋಲ್ಟೇಜ್ ಕ್ಷೇತ್ರವಾಗಿತ್ತು. ಎಲ್ಲರ ಚಿತ್ತ ಇಂದು ಅತ್ತ ಕಡೆಯೇ ನೆಟ್ಟಿದೆ‌. ಮತ ಎಣಿಕೆ ನಡೆಯುತ್ತಿದ್ದು, ಸದ್ಯದ

ಕಾಮಾಲೆ (ಜಾಂಡೀಸ್) ರೋಗ ಎಂದರೇನು ? ಇಲ್ಲಿದೆ ಉಪಯುಕ್ತ ಮಾಹಿತಿ….!

ಕಾಮಾಲೆ ಅಥವಾ ಜಾಂಡೀಸ್ ಎನ್ನುವುದು ಹತ್ತು ಹಲವು ರೋಗಗಳಲ್ಲಿ ಕಂಡು ಬರುವ ದೇಹ ಸ್ಥಿತಿಯಾಗಿರುತ್ತದೆ. ಹಲವಾರು ಕಾರಣಗಳಿಂದ ಕಾಮಾಲೆ ರೋಗ ಬರುವ ಸಾಧ್ಯತೆ ಇರುತ್ತದೆ. ಕಾಮಾಲೆ ಎಂಬ ಪದವು ಕಾಮ ಮತ್ತು ಲಾ ಎಂಬ

error: Content is protected !!