ಮುಂಬೈ: ಜೈಲಿನಲ್ಲಿ ಸೊಳ್ಳೆಗಳು ಜಾಸ್ತಿ ಎಂಬ ಮಾತು ಇದೆ. ಇದೀಗ ತಾನಿದ್ದ ಕೊಠಡಿಯಲ್ಲಿ ಎಷ್ಟು ಸೊಳ್ಳೆಗಳು ಇದ್ದವು ಎಂಬುದನ್ನು ಪ್ರೂವ್ ಮಾಡುದಕ್ಕೆ ಭೂಗತ ಪಾತಕಿ ದಾವುದ್ ಇಬ್ರಾಹಿಂ ಮಾಜಿ ಸಹಚರ ಎಜಾಜ್ ಲಕ್ಡಾವಾಲಾ ಬಾಕ್ಸ್ ಒಂದರಲ್ಲಿ ಸತ್ತ ಸೊಳ್ಳೆಗಳನ್ನು ಸೇವ್ ಮಾಡಿಕೊಂಡು ಕೋರ್ಟ್ ಗೆ ಬಂದಿದ್ದ ವಿಚಿತ್ರ ಘಟನೆ ನಡೆದಿದೆ.
2020ರಲ್ಲಿಯೇ ಎಜಾಜ್ ಬಂಧನವಾಗಿತ್ತು. ಆಗ ನವಿ ಮುಂಬೈನ ತಲೋಜಾ ಜೈಲಿನಲ್ಲಿ ಇರಿಸಿದ್ದರು. ಆ ವೇಳೆಯೂ ಎಜಾಜ್ ಸೊಳ್ಳೆ ಸಮಸ್ಯೆಯ ಬಗ್ಗೆ ಕೋರ್ಟ್ ಗೆ ಮನವಿ ಮಾಡಿದ್ದನು. ಆಗ ಕೋರ್ಟ್ ಸೊಳ್ಳೆ ಪರದೆಯನ್ನು ಕೊಡಲು ಅನುಮತಿ ನೀಡಿತ್ತು. ಆದರೆ ಈಗ ಭದ್ರತೆಯ ದೃಷ್ಟಿಯಿಂದ ಸೊಳ್ಳೆ ಪರದೆಯನ್ನು ಕೊಡುವುದನ್ನು ನಿಲ್ಲಿಸಿದೆ.
ಹೀಗಾಗಿ ತಾನು ಇದ್ದ ಕೊಠಡಿಯಲ್ಲಿ ಎಷ್ಟು ಸೊಳ್ಳೆಗಳ ಕಾಟವಿದೆ ಎಂದು ಕೋರ್ಟ್ ಗೆ ತೋರಿಸಲು ಡಬ್ಬ ಒಂದರಲ್ಲಿ ತಾನು ಸಾಯಿಸಿದ ಎಲ್ಲಾ ಸೊಳ್ಳೆಗಳನ್ನು ಬಾಕ್ಸ್ ಒಂದರಲ್ಲಿ ಸೊಳ್ಳೆಗಳನ್ನು ತಂದು, ಕೋರ್ಟ್ ಮುಂದೆ ಇಟ್ಟಿದ್ದಾನೆ. ಮತ್ತೆ ಕೋರ್ಟ್ ನಲ್ಲಿ ಸೊಳ್ಳೆ ಪರದೆಗೆ ಮನವಿ ಮಾಡಿದ್ದಾನೆ. ಆದ್ರೆ ಈ ಬಾರಿ ಯಾರಿಗೂ ಸೊಳ್ಳೆ ಪರದೆ ಕೊಡುವುದಿಲ್ಲ. ನಿನ್ನಂತೆ ಎಲ್ಲಾ ಕೈದಿಗಳು ಸೊಳ್ಳೆ ಕಡಿಸಿಕೊಂಡೆ ಮಲಗುತ್ತಾರೆ ಎಂದಿದೆ ಕೋರ್ಟ್.