ಹುಬ್ಬಳ್ಳಿ: ಕಾಂತಾರ ಸಿನಿಮಾದಲ್ಲಿ ದೈವ ನರ್ತಕರ ಜೀವನ ನೋಡಿದ ಮೇಲೆ ಸರ್ಕಾರದಿಂದ ಮಾಸಾಶನ ಅಂತ 2 ಸಾವಿರ ಹಣ ನಿಗದಿ ಮಾಡಿದೆ. ಈ ಬಗ್ಗೆ ವಿಚಾರವಾದಿ, ಮಾಜಿ ಸಚಿವೆ ಬಿ ಟಿ ಲಲಿತಾ ನಾಯ್ಕ್ ವಿರೋಧ ವ್ಯಕ್ತಪಡಿಸಿದ್ದಾರೆ. ದೈವ ನರ್ತಕರಿಗೆ ಹಣ ನೀಡಿ, ಮೂಢ ನಂಬಿಕೆಗೆ ಆಸ್ಪದ ಕೊಡಬಾರದಿತ್ತು ಎಂದು ತಿಳಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಲಲಿತಾ ನಾಯ್ಕ್ ಅವರು, ದೈವ ನರ್ತಕರು ಓಓ ಎಂದು ಚೀರಾಡುವುದು, ಕುಣಿಯುವುದು ಮೈಮೇಲೆ ದೇವರು ಬಂದಿದೆ ಎಂದು ಅಲ್ಲ. ಅದಕ್ಕೆ ಬೇರೆಯದ್ದೆ ಕಾರಣವಿದೆ. ದೈವ ನರ್ತಕರ ಜೀವನಕ್ಕೆ ಬೇರೆ ದಾರಿ ತೋರಿಸಬೇಕು. ಅದರ ಬದಲಿಗೆ ಈ ಮೂಲಕ ಮೂಢ ನಂಬಿಕೆಗೆ ಪ್ರಾಮುಖ್ಯತೆ ನೀಡಿದಂತೆ ಆಗುತ್ತದೆ ಎಂದಿದ್ದಾರೆ.
ರಿಷಬ್ ಶೆಟ್ಟಿ ತನ್ನ ವಿಚಾರವನ್ನು ನೇರವಾಗಿ ಹೇಳಿದರೆ ಈ ಮೂರ್ಖ ಜನರು ಆತನನ್ನು ಹಿಡಿದು ಹೊಡೆಯುತ್ತಾರೆ. ರಿಷಬ್ ಶೆಟ್ಟಿ ಪಕ್ಕಾ ವಿಚಾರವಾದಿ, ವೈಚಾರಿಕ ವ್ಯಕ್ತಿ. ತನ್ನ ವಿಚಾರಗಳನ್ನು ನೇರವಾಗಿ ಹೇಳು ಬದಲು ಈ ರೀತಿ ಹೇಳಿದ್ದಾನೆ ಎಂದು ಎದ್ದಿರುವ ವಿವಾದದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.