ಈ ಬಾರಿಯ ಚುನಾವಣೆ ಮೂರು ಪಕ್ಷಗಳಿಗೂ ಪ್ರತಿಷ್ಠೆಯ ಕಣವಾಗಿದೆ. ಸಮ್ಮಿಶ್ರ ಸರ್ಕಾರದಿಂದ ಅಧಿಕಾರ ಕಳೆದುಕೊಂಡ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷ ಈ ಬಾರಿ ಬಿಜೆಪಿಯನ್ನು ಹೊಡೆದುರುಳಿಸಬೇಕು ಎಂಬ ಹಠ ತೊಟ್ಟಿದೆ. ಜನ ಕೂಡ ಬಿಜೆಪಿಯನ್ನು ಸೋಲಿಸುತ್ತಾರೆ ಎಂಬ ನಂಬಿಕೆಯೂ ಎರಡು ಪಕ್ಷಗಳಲ್ಲಿ ಇದೆ. ಆದ್ರೆ ಈ ನಡುವೆ ಎಲ್ಲಿ, ಯಾವ ಅಭ್ಯರ್ಥಿಯನ್ನು ಹಾಕಬೇಕು ಎಂಬ ವಿಚಾರದ ಜೊತೆಗೆ ತಮ್ಮ ತಮ್ಮ ಮಕ್ಕಳಿಗೆ ಭದ್ರ ನೆಲೆ ಕಟ್ಟಿಕೊಡಲು ಪಕ್ಷದ ಹಿರಿಯ ನಾಯಕರು ಚಿಂತಿಸುತ್ತಿದ್ದಾರೆ.
ಇದೀಗ ಕಾಂಗ್ರೆಸ್ ಬಿಟ್ಟು ಮತ್ತೆ ಜೆಡಿಎಸ್ ಸೇರಿರುವ ಸಿ ಎಂ ಇಬ್ರಾಹಿಂ ತನ್ನ ಮಗಳಿಗೆ ಬೀದರ್ ಜಿಲ್ಲೆಯಲ್ಲಿ ಸ್ಥಾನ ಗಟ್ಟಿ ಮಾಡಲು ಯತ್ನಿಸುತ್ತಿದ್ದಾರೆ. ಬೀದರ್ ಈ ಹಿಂದೆ ಜೆಡಿಎಸ್ ನ ಭದ್ರಕೋಟೆಯಾಗಿತ್ತು. 70 ಸಾವಿರ ಮುಸ್ಲಿಂ ಮತಗಳಿರುವ ಹುಮ್ನಾಬಾದ್ ನಲ್ಲಿಇಬ್ರಾಹಿಂ ತಮ್ಮ ಪುತ್ರನನ್ನು ಕಣಕ್ಕಿಳಿಸಲು ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಫಯಾಜ್ ಪ್ರತಿಕ್ರಿಯೆ ನೀಡಿದ್ದು, ನಾನು ರಾಜಕೀಯಕ್ಕೆ ಬರುವುದಕ್ಕೆ ಕುಮಾರಸ್ವಾಮಿ ಅವರು ಸ್ಪೂರ್ತಿಯಾಗಿದ್ದಾರೆ. ಬೀದರ್ ಜಿಲ್ಲೆಯಿಂದಾನೇ ಕಲ್ಯಾಣ ಕರ್ನಾಟಕ ಹೋರಾಟ ಆರಂಭವಾಗಬೇಕು ಎಂಬುದು ನಮ್ಮ ಅಭಿಪ್ರಾಯ. ಇಲ್ಲಿ ಮಾಜಿ ಪ್ರಧಾನಿ ದೇವೇಗೌಡ ಅವರ ಕಾಲದಲ್ಲಿ ನಡೆದ ಅಭಿವೃದ್ಧಿ ಕೆಲಸ ಬಿಟ್ಟರೆ ಬೇರೆ ಯಾವ ಅಭಿವೃದ್ದಿ ಕೆಲಸವೂ ನಡೆದಿಲ್ಲ. ಇನ್ನು ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ರೈತರ ಸಾಲ ಮನ್ನಾ ಮಾಡಿದ್ದರು. ನಮ್ಮ ಜಿಲ್ಲೆಯಲ್ಲಿಯೇ ಆರು ರೈತರು ಅದರ ಉಪಯೋಗ ಪಡೆದಿದ್ದಾರೆ.