Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ವೀರಶೈವ ಸಮಾಜ ಬೇರೆ ಸಮಾಜವನ್ನು ಬೆಳಸಿದೆ : ಕೆ.ಎಸ್. ನವೀನ್

Facebook
Twitter
Telegram
WhatsApp

 

ವರದಿ ಮತ್ತು ಫೋಟೋ
ಸುರೇಶ್ ಪಟ್ಟಣ್,
ಮೊ : 87220 22817

ಚಿತ್ರದುರ್ಗ,(ಅ.30) :  ಇಂದಿನ ದಿನಮಾನದಲ್ಲಿ ತಮಗೆ ಉಪಕಾರವನ್ನು ಮಾಡಿದವರನ್ನು ಸ್ಮರಣೆ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ, ಇದೇ ರೀತಿ ನಿಮ್ಮ ಪ್ರತಿಭೆಯನ್ನು ಪುರಸ್ಕಾರ ಮಾಡಿದ ಸಮಾಜವನ್ನು ಸಹಾ ಮುಂದಿನ ದಿನದಲ್ಲಿ ಮರೆಯ ಬೇಡಿ ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಅಖಿಲ ಬಾರತ ವೀರಶೈವ ಲಿಂಗಾಯತ ಮಹಾಸಭಾ ಚಿತ್ರದುರ್ಗ ಜಿಲ್ಲಾ ಘಟಕದ ವತಿಯಿಂದ ನಗರದ ಪಂಚಾಯತ್ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸಮಾಜದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಪರೀಕ್ಷೆಯ ಸಮಯದಲ್ಲಿ ಅದರ ಪೋಷಕರಿಗೆ ತಮ್ಮ ಮಕ್ಕಳು ಎಷ್ಟು ಅಂಕ ಪಡೆಯುತ್ತಾರೂ, ಮುಂದೆ ಯಾವ ಕಾಲೇಜಿಗೆ ಸೇರಿಸಬೇಕೂ, ಎಷ್ಟು ಫೀಜ್ ಆಗುತ್ತದೆಯೋ ಉತ್ತಮ ಕಾಲೇಜು ಯಾವುದೋ ಎಂಬ ವಿವಿಧ ರೀತಿ ಆಂತಕದಲ್ಲಿ ಇರುತ್ತಾರೆ, ಆದರೆ ವಿದ್ಯಾರ್ಥಿಗಳು ಮಾತ್ರ ತಾವು ಬರದೆ ಉತ್ತರಕ್ಕೆ ಎಷ್ಟು ಅಂಕಗಳು ಬರುತ್ತವೆಯೋ ಎಂಬ ಅಂತಕದಲ್ಲಿ ಇರುತ್ತಾರೆ, ತಮ್ಮ ಮುಂದೆ ಇರುವ ಗುರಿಯನ್ನು ಸಾಧನೆ ಮಾಡುವ ರೀತಿಯಲ್ಲಿ ಛಾಲೆಂಜ್ ಆಗಿ ತೆಗೆದುಕೊಂಡು ಸಾಧನೆ ಮಾಡಿ ಎಂದು ಕರೆ ನೀಡಿದರು.

ಇಂದು ನಮ್ಮ ಸಮಾಜ ನಿಮ್ಮ ಪ್ರತಿಭೆಯನ್ನು ಗುರುತಿಸಿ ಸನ್ಮಾನ ಮಾಡಿದೆ ಇದನ್ನು ನಿಮ್ಮ ಜೀವನದಲ್ಲಿ ಮರೆಯಬೇಡಿ. ಆದರೆ ಇದನ್ನು ಮರೆಯುವವರ ಸಂಖ್ಯೆ ಇಂದಿನ  ದಿನಮಾನದಲ್ಲಿ ಹೆಚ್ಚಾಗಿದೆ. ಮುಂದೆ ನೀವುಗಳು ಉನ್ನತ ಹುದ್ದೆಯಲ್ಲಿದ್ದಾಗ ನೀವು ಸಹಾ ಸಮಾಜಕ್ಕೆ ಸಹಾಯವನ್ನು ಮಾಡಿ, ಎಂದ ಅವರು, ವೀರಶೈವ ಸಮಾಜ ಬೇರೆ ಸಮಾಜವನ್ನು ಬೆಳಸಿದೆ, ಇದರಿಂದ ನಮ್ಮ ಸಮಾಜವನ್ನು ಎಲ್ಲರು ಒಪ್ಪುತ್ತಾರೆ, ಗೌರವಿಸುತ್ತಾರೆ, ಅವರ ಸಮಸ್ಯೆಗಳಿಗೆ ನಮ್ಮ ಸಮಾಜ ಸ್ಫಂದಿಸುತ್ತದೆ ಬೇರೆಯವರು ಸಹಾ ಚನ್ನಾಗಿ ಇರಬೇಕೆಂದು ಬಯಸುವುದು ವೀರಶೈವ ಲಿಂಗಾಯತ ಸಮಾಜ ಎಂದು ನವೀನ್ ತಿಳಿಸಿದರು.

ರಾಜ್ಯದಲ್ಲಿ ಸರ್ಕಾರಗಳು ಇನ್ನೂ ಶಿಕ್ಷಣವನ್ನು ನೀಡಲು ಪ್ರಾರಂಭ ಮಾಡದ ಸಮಯದಲ್ಲಿ ಇಲ್ಲಿನ ಮಠಗಳು ಶಾಲೆಯನ್ನು ಪ್ರಾರಂಭ ಮಾಡಿ ಮಕ್ಕಳಿಗೆ ಶಿಕ್ಷಣವನ್ನು ನೀಡಲು ಪ್ರಾರಂಭ ಮಾಡಿದವು ಇದರಿಂದ ಲಕ್ಷಾಂತರ ಮಕ್ಕಳು ಶಿಕ್ಷಣವನ್ನು ಪಡೆಯಲು ಸಾಧ್ಯವಾಗಿದೆ. ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಸಹಾ ನೀಡಲಾಗಿದೆ. ವಿಧಾನ ಪರಿಷತ್ ಸದಸ್ಯರಾಗಿ ಯಾವುದೇ ಒಬ್ಬ ವ್ಯಕ್ತಿ ಕರೆ ಮಾಡಿದರು ಸಹಾ ಅವರ ಸಮಸ್ಯೆಗೆ ಸ್ಫಂದಿಸುತ್ತೇನೆ, ನಮ್ಮನ್ನು ನಂಬಿ ಬಂದವರಿಗೆ ಸಹಾಯ ಮಾಡುವುದು ನಮ್ಮ ಕರ್ತವ್ಯವಾಗಿದೆ. ಚಿತ್ರದುರ್ಗದ ಜಿಲ್ಲಾಧಿಕಾರಿಗಳಾಗಿ ಕವಿತಾರವರು ಕಳೆದ ಎರಡುವರೆ ವರ್ಷದಿಂದ ಉತ್ತಮವಾದ ಕೆಲಸವನ್ನು ಮಾಡಿದ್ದಾರೆ ಯಾವುದೇ ಕಪ್ಪು ಚುಕ್ಕೆಯನ್ನು ಸಹಾ ಹೊಂದಿಲ್ಲ ಎಂದು ಹೇಳಿದರು.

ಜಿಲ್ಲಾಧಿಕಾರಿಯಾಗಿದ್ದ ಕವಿತಾ ಎಸ್ ಮನ್ನಿಕೇರಿ ಮಾತನಾಡಿ, ಕಳೆದ ಎರಡುವರೆ ವರ್ಷದಿಂದ ಚಿತ್ರದುರ್ಗದಲ್ಲಿ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ ತೃಪ್ತಿ ಇದೆ. ಈ ಸಮಯದಲ್ಲಿ ಎಲ್ಲರು ಸಹಾ ಉತ್ತಮವಾದ ಸಹಕಾರವನ್ನು ನೀಡಿದ್ದಾರೆ. ವಿದ್ಯಾರ್ಜನೆ ಸಮಯದಲ್ಲಿ ಕಷ್ಟವನ್ನು ಪಟ್ಟರೆ ಮುಂದಿನ ಜೀವನ ಸುಖವಾಗಿರುತ್ತದೆ ಅದರೆ ವಿದ್ಯಾರ್ಜನೆ ಸಮಯದಲ್ಲಿ ಸುಖವನ್ನು ಪಡೆದರೆ ಮುಂದಿನ ಜೀವನ ಪೂರ್ತಿಯಾಗಿ ಕಷ್ಟವನ್ನು ಪಡೆಯಬೇಕಾಗುತ್ತದೆ ಇದರ ಆಯ್ಕೆ ನಿಮ್ಮದು ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿ, ಯಾವುದೇ ಗುರಿಯನ್ನು ಸಾಧನೆ ಮಾಡಬೇಕಾದರೆ ಗುರಿ ಅತಿ ಮುಖ್ಯವಾಗಿದೆ. ಸತತವಾದ ಪ್ರಯತ್ನದಿಂದ ಮಾತ್ರ ಇದನ್ನು ಸಾಧನೆ ಮಾಡಲು ಸಾಧ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಸಮಾಜದಲ್ಲಿ ವಿವಿಧ ರೀತಿಯಲ್ಲಿ ಸಾಧನೆ ಮಾಡಿದವರನ್ನು ಮತ್ತು ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯಲ್ಲಿ ಉತ್ತಮ ಅಂಕವನ್ನು ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋ.ಎಸ್.ವಿರೇಶ್ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಬಿಜೆಪಿ ಯುವ ಮುಖಂಡ ಅನಿತ್ ಕುಮಾರ್, ಅಭಾವಿಮದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶೀ ರೇಣುಕ ಪ್ರಸನ್ನ, ರಾಜ್ಯ ಯುವ ಘಟಕದ ಅಧ್ಯಕ್ಷ ಮನೋಹರ್ ಅಬ್ಬಿಗೆರೆ, ರಾಜ್ಯ ಸಮಿತಿ ಸದಸ್ಯರಾದ ಶ್ರೀಮತಿ ಅರತಿ, ಮಹಡಿ ಶಿವಮೂರ್ತಿ, ಶ್ರೀಮತಿ ಶ್ಯಾಮಲ ಶಿವಪ್ರಕಾಶ್, ಶ್ರೀಮತಿ ರೂಪ ವಿನಯ್ ಕುಮಾರ್, ಹಂಜಿ ಶಿವಸ್ವಾಮಿ, ಬಸವರಾಜಯ್ಯ, ಪ್ರಶಾಂತ್ ಜಿಲ್ಲಾ ಪ್ರಧಾನ ಕಾರ್ಯದರ್ಶೀ ಮಹೇಶ್, ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ನಿರ್ಮಲ ಬಸವರಾಜು, ಜಿಲ್ಲಾ ಯುವ ಘಟಕದ ಅಧ್ಯಕ್ಷ ಕಾರ್ತಿಕ್ ಸೇರಿದಂತೆ ಇತರರು ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಕಾಮಾಲೆ (ಜಾಂಡೀಸ್) ರೋಗ ಎಂದರೇನು ? ಇಲ್ಲಿದೆ ಉಪಯುಕ್ತ ಮಾಹಿತಿ….!

ಕಾಮಾಲೆ ಅಥವಾ ಜಾಂಡೀಸ್ ಎನ್ನುವುದು ಹತ್ತು ಹಲವು ರೋಗಗಳಲ್ಲಿ ಕಂಡು ಬರುವ ದೇಹ ಸ್ಥಿತಿಯಾಗಿರುತ್ತದೆ. ಹಲವಾರು ಕಾರಣಗಳಿಂದ ಕಾಮಾಲೆ ರೋಗ ಬರುವ ಸಾಧ್ಯತೆ ಇರುತ್ತದೆ. ಕಾಮಾಲೆ ಎಂಬ ಪದವು ಕಾಮ ಮತ್ತು ಲಾ ಎಂಬ

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ: ಈ ರಾಶಿಯ ಕುಟುಂಬದಲ್ಲಿ ಕಲಹಗಳು ಆಗಲು ದಾಯಾದಿಗಳೇ ಕಾರಣ : ಈ ರಾಶಿಯ ಗಂಡ ಹೆಂಡತಿ ದೂರವಾಗಲು ಹಿತೈಷಿಗಳೇ ಕಾರಣ : ಶನಿವಾರ-ರಾಶಿ ಭವಿಷ್ಯ

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

error: Content is protected !!