ಸುದ್ದಿಒನ್ ವೆಬ್ ಡೆಸ್ಕ್
ಟಿ 20 ವಿಶ್ವಕಪ್ ಅಂಗವಾಗಿ ನಡೆದ ಸೂಪರ್-12 ಪಂದ್ಯ ಮತ್ತೊಂದು ಅಪರೂಪದ ಕ್ಷಣಕ್ಕೆ ಸಾಕ್ಷಿಯಾಯಿತು. ಗುರುವಾರ ನಡೆದ ಗುಂಪು-2ರ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಆಘಾತ ನೀಡಿದ ಜಿಂಬಾಬ್ವೆ ರೋಚಕ ಜಯ ದಾಖಲಿಸಿತು.
131 ರನ್ ಗಳ ಗುರಿಯೊಂದಿಗೆ ಕಣಕ್ಕೆ ಇಳಿದ ಪಾಕಿಸ್ತಾನ ನಿಗದಿತ 20 ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 129 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಜಿಂಬಾಬ್ವೆ ಒಂದು ರನ್‌ನಿಂದ ಅಮೋಘ ಜಯ ಸಾಧಿಸಿತು.
ಕೊನೆಯವರೆಗೂ ಹೋರಾಡಿದ ಜಿಂಬಾಬ್ವೆ ಅದ್ಭುತ ಪ್ರದರ್ಶನ ನೀಡಿ ಪಂದ್ಯವನ್ನು ಗೆದ್ದುಕೊಂಡಿತು.
ಪಾಕಿಸ್ತಾನದ ಶಾನ್ ಮಸೂದ್ 44 ರನ್ ಗಳಿಸಿ ಗರಿಷ್ಠ ಸ್ಕೋರರ್ ಆಗಿದ್ದರು.
ಮೊಹಮ್ಮದ್ ನವಾಜ್ 22 ರನ್ ಮತ್ತು ಮೊಹಮ್ಮದ್ ವಾಸಿಮ್ ಔಟಾಗದೆ 12 ರನ್ ಗಳಿಸಿದರು.
ಜಿಂಬಾಬ್ವೆ ಬೌಲಿಂಗ್ ನಲ್ಲಿ ಸಿಕಂದರ್ ರಜಾ 3 ಹಾಗೂ ಬ್ರಾಡ್ ಇವಾನ್ಸ್ 2 ವಿಕೆಟ್ ಪಡೆದರು. ಪಾಕಿಸ್ತಾನ ಮೂಲದ ಸಿಕಂದರ್ ರಝಾ ಪಂದ್ಯದ ಟರ್ನಿಂಗ್ ಪಾಯಿಂಟ್ ಆದರು. ಒಂದೇ ಓವರ್ ನಲ್ಲಿ ಎರಡು ನಿರ್ಣಾಯಕ ವಿಕೆಟ್ ಕಬಳಿಸಿ ಪಾಕಿಸ್ತಾನಕ್ಕೆ ಪೆಟ್ಟು ಕೊಟ್ಟರು.
ಮೊದಲು ಬ್ಯಾಟ್ ಮಾಡಿದ ಜಿಂಬಾಬ್ವೆ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 130 ರನ್ ಗಳಿಸಿತು. ಸೀನ್ ವಿಲಿಯಮ್ಸ್ 31 ರನ್ ಗಳಿಸಿ ಟಾಪ್ ಸ್ಕೋರರ್ ಆಗಿದ್ದರು.ಕೊನೆಯಲ್ಲಿ ಬ್ರಾಡ್ ಇವಾನ್ಸ್ 19 ರನ್ ಮತ್ತು ರಯಾನ್ ಬರ್ಲ್ ಔಟಾಗದೆ 10 ರನ್ ಗಳಿಸಿದರು. ಜಿಂಬಾಬ್ವೆ 93/3 ರ ಸಂದರ್ಭದಲ್ಲಿ ಎರಡು ರನ್‌ಗಳನ್ನು ಪಡೆಯುವುದರೊಳಗೆ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತು. ಪಾಕ್ ಬೌಲರ್‌ಗಳಲ್ಲಿ ಮೊಹಮ್ಮದ್ ವಾಸಿಮ್ 4, ಶಾದಾಬ್ ಖಾನ್ 3 ಮತ್ತು ಹ್ಯಾರಿಸ್ ರೌಫ್ ಒಂದು ವಿಕೆಟ್ ಪಡೆದರು.