ಸುದ್ದಿಒನ್ ವೆಬ್ ಡೆಸ್ಕ್
ನವದೆಹಲಿ : ನೋಟುಗಳ ಮೇಲೆ ಲಕ್ಷ್ಮಿ ಮತ್ತು ಗಣೇಶನ ಚಿತ್ರಗಳನ್ನು ಮುದ್ರಿಸುವಂತೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕೇಂದ್ರವನ್ನು ಒತ್ತಾಯಿಸಿದರು.
ದೆಹಲಿಯಲ್ಲಿ ವರ್ಚುವಲ್ ಮಾಧ್ಯಮಗೋಷ್ಠಿ ನಡೆಸಿದ ಕೇಜ್ರಿವಾಲ್, ದಿನದಿಂದ ದಿನಕ್ಕೆ ಕುಸಿಯುತ್ತಿರುವ ರೂಪಾಯಿ ಮೌಲ್ಯವನ್ನು ಮೊದಲು ಪ್ರಸ್ತಾಪಿಸಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
Addressing an important Press Conference | LIVE https://t.co/w5wiYs2seT
— Arvind Kejriwal (@ArvindKejriwal) October 26, 2022
ಪ್ರತಿ ತಿಂಗಳು ಹೊಸದಾಗಿ ಮುದ್ರಿತವಾಗಿರುವ ನೋಟುಗಳಲ್ಲಿ ಮಹಾತ್ಮ ಗಾಂಧೀಜಿಯವರ ಫೋಟೋದೊಂದಿಗೆ ಈ ದೇವರುಗಳ ಫೋಟೋಗಳನ್ನು ಸೇರಿಸುವುದು ಒಳ್ಳೆಯದು ಎಂದು ಹೇಳಿದರು.
ಆದರೆ ಇದನ್ನು ಏಕೆ ಮಾಡಬೇಕು ಎಂಬುದನ್ನೂ ಕೇಜ್ರಿವಾಲ್ ವಿವರಿಸಿದ್ದಾರೆ. ಕರೆನ್ಸಿ ನೋಟಿನ ಮೇಲೆ ಲಕ್ಷ್ಮೀದೇವಿಯ ಫೋಟೋ ಇದ್ದರೆ ನಾಡಿನ ಜನತೆಗೆ ದೇವರ ಆಶೀರ್ವಾದ ಸಿಗುತ್ತದೆ. ಇದರಿಂದ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ. ಕಷ್ಟಗಳನ್ನು ಹೋಗಲಾಡಿಸುವ ದೇವರು ಎಂದು ಕರೆಯಲ್ಪಡುವ ಗಣೇಶನ ಫೋಟೋದಿಂದ ಜನರ ಸಮಸ್ಯೆಗಳು ಪರಿಹಾರವಾಗುತ್ತವೆ.
ಇಂಡೋನೇಷ್ಯಾದಂತಹ ದೇಶಗಳಲ್ಲಿಯೂ ಕೂಡ ಕರೆನ್ಸಿ ನೋಟುಗಳ ಮೇಲೆ ಗಣೇಶನ ಫೋಟೋವನ್ನು ಮುದ್ರಿಸಲಾಗಿದೆ. 20 ಸಾವಿರದ ನೋಟಿನ ಮೇಲೆ ಗಣೇಶನ ಫೋಟೋ ಇದೆ ಎಂದು ವ್ಯಂಗ್ಯವಾಡಿದರು.
ಆರ್ಥಿಕತೆ ಸದೃಢವಾಗಿರಲು ಶಾಲೆ, ಆಸ್ಪತ್ರೆಗಳನ್ನು ನಿರ್ಮಿಸಿ ಮೂಲಸೌಕರ್ಯಗಳನ್ನು ಸುಧಾರಿಸಬೇಕು ಎಂದು ಸಲಹೆ ನೀಡಿದರು.
ಕೆಲವೊಮ್ಮೆ ಸರ್ಕಾರ ಚುನಾವಣಾ ಕ್ರಮಗಳನ್ನು ಕೈಗೊಂಡರೂ ಫಲಿತಾಂಶ ಬರುವುದಿಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ದೇಶದ ಎಲ್ಲಾ ಉದ್ಯಮಿಗಳು ತಮ್ಮ ಕೆಲಸವನ್ನು ಪ್ರಾರಂಭಿಸುವ ಮೊದಲು ಪ್ರತಿದಿನ ಲಕ್ಷ್ಮಿ ಮತ್ತು ಗಣೇಶನನ್ನು ಪೂಜಿಸುತ್ತಾರೆ ಎಂದು ಉಲ್ಲೇಖಿಸಲಾಗಿದೆ. ಅದಕ್ಕಾಗಿಯೇ ಕರೆನ್ಸಿ ನೋಟುಗಳ ಮೇಲೆ ಆ ದೇವರುಗಳ ಫೋಟೋಗಳನ್ನು ಮುದ್ರಿಸಿದರೆ ಉತ್ತಮ ಅಭಿವೃದ್ಧಿ ಮತ್ತು ಆರ್ಥಿಕತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಗುರುವಾರ ಅಥವಾ ಶುಕ್ರವಾರ ಕೇಂದ್ರಕ್ಕೆ ಪತ್ರ ಬರೆಯುವುದಾಗಿ ಕೇಜ್ರಿವಾಲ್ ಸ್ಪಷ್ಟಪಡಿಸಿದ್ದಾರೆ.