ಭಾರತದ ಕಂಪನಿಯೊಂದು ತಯಾರು ಮಾಡಿದ ಕೆಮ್ಮು ಹಾಗೂ ಶೀತದ ಸಿರಪ್ ಕುಡಿದ ಆಫ್ರಿಕಾ ಖಂಡದ ಗ್ಯಾಂಬಿಯಾದಲ್ಲಿ 66 ಮಕ್ಕಳ ಸಾವಿಗೆ ಕಾರಣವಾಗಿದೆ. ಈಗಾಗಲೇ ಈ ಸಿರಪ್ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಬಳಿಕವಷ್ಟೇ ಆ ಸಿರಪ್ ನಲ್ಲಿ ಬೆರೆತಿರುವುದು ಏನು ಎಂಬುದು ತಿಳಿಯಲಿದೆ.
ಈ ಸಿರಪ್ ತಯಾರು ಮಾಡಿದ ಸಂಸ್ಥೆಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ. ಕೆಮ್ಮು ಹಾಗೂ ಶೀತದ ಸಿರಪ್ ನಲ್ಲಿ ಹಾನಿಕಾರ ಡೈಥಿಲಿನ್ ಗ್ಲೈಕೋಲ್ ಮತ್ತು ಎಥಿಲಿನ್ ಗ್ಲೈಕೋಲ್ ಅಂಶ ಕಂಡು ಬಂದಿರುವುದು ಬೆಳಕಿಗೆ ಬಂದಿದೆ. ಸಿರಪ್ ನಲ್ಲಿ ರಾಸಾಯನಿಕ ಅಂಶ ನಿಗದಿತ ಪ್ರಮಾಣಕ್ಕಿಂತ ಹೆಚ್ಚಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಇನ್ನು ಈ ಸಿರಪ್ ನಿಂದ ಗ್ಯಾಂಬಿಯಾದಲ್ಲಿ ಮಾತ್ರ ಅಡ್ಡ ಪರಿಣಾಮ ಉಂಟಾಗಿದೆ. ಹರಿಯಾಣ ಮೂಲದ ಮೇಡನ್ ಫಾರ್ಮ್ಯಾಸ್ಯೂಟಿಕಲ್ ಲಿಮಿಟೆಡ್ ಕಂಪನಿ ಈ ಕಾಫ್ ಸಿರಪ್ ಗಳನ್ನು ತಯಾರು ಮಾಡಿತ್ತು. ಇದೀಗ ಕೇಂದ್ರ ಸರ್ಕಾರ ತನಿಖೆ ನಡೆಸಲು ಮುಂದಾಗಿದೆ.