ವರದಿ ಮತ್ತು ಫೋಟೋ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ: ನಗರದ ಕೆಳಗೋಟೆಯಲ್ಲಿರುವ ಅಂಬಾಭವಾನಿ ದೇವಸ್ಥಾನದಲ್ಲಿ ನಡೆದ ದೇವಿಯ ನವರಾತ್ರಿ ಹಾಗೂ ವಿಜಯದಶಮಿ ಪ್ರಯುಕ್ತ ಮರಾಠ ವಿದ್ಯಾವರ್ಧಕ ಸಂಘದ ವತಿಯಿಂದ ದುರ್ಗ ದೌಡ್ ಮೆರವಣಿಗೆ ಬುಧವಾರ ನಗರದ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ಸಾಗಿತು.
ರಂಗಯ್ಯನಬಾಗಿಲಿನಿಂದ ಹೊರಟ ಮೆರವಣಿಗೆ ಉಚ್ಚಂಗಿಯಲ್ಲಮ್ಮ ದೇವಸ್ಥಾನದ ಮುಂಭಾಗದ ರಸ್ತೆಯಿಂದ ಸಾಗಿ ಆನೆಬಾಗಿಲು, ಗಾಂಧಿವೃತ್ತ, ಎಸ್.ಬಿ.ಎಂ.ಸರ್ಕಲ್, ಅಂಬೇಡ್ಕರ್ ವೃತ್ತ, ಒನಕೆ ಓಬವ್ವ ಪ್ರತಿಮೆ ಮುಂಭಾಗದಿಂದ ಅಂಬಾಭವಾನಿ ದೇವಸ್ಥಾನ ತಲುಪಿತು.
ಮೆರವಣಿಗೆಯಲ್ಲಿದ್ದ ಪುರುಷರು ಮಹಿಳೆಯರು ಕೇಸರಿ ಪೇಟೆ ತೊಟ್ಟು ಶಿಸ್ತಿನಿಂದ ಸಾಗಿದರು. ಕೈಯಲ್ಲಿ ಭಗವಧ್ವಜ ಹಿಡಿದು ಜೈಶ್ರೀರಾಮ, ಜೈಶಿವಾಜಿ ಎನ್ನುವ ಘೋಷಣೆಗಳನ್ನು ಕೂಗುತ್ತ ಸಾಗಿದರು. ದಕ್ಷಿಣ ಕನ್ನಡದ ಚಂಡೆವಾದ್ಯ, ನಾಸಿಕ್‍ಡೋಲ್ ಮೆರವಣಿಗೆಯಲ್ಲಿ ಆಕರ್ಷಣೀಯವಾಗಿತ್ತು.
ಮರಾಠ ಸಮಾಜದ ಅಧ್ಯಕ್ಷ ಸುರೇಶ್‍ಜಾದವ್, ಕಾರ್ಯದರ್ಶಿ ಗೋಪಾಲ್‍ರಾವ್ ಜಾಧವ್, ಬಿಜೆಪಿ.ಯುವ ಮುಖಂಡರಾದ ಡಾ.ಸಿದ್ದಾರ್ಥ, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷರುಗಳಾದ ಕೆ.ತಿಪ್ಪೇಸ್ವಾಮಿ, ಟಿ.ಭದ್ರಿನಾಥ್, ಮರಾಠ ಸಮಾಜದ ರೋಹಿತ್ ಗಾಯಕ್‍ವಾಡ್, ಮಂಜುನಾಥ ಗಾಯಕ್‍ವಾಡ್, ಸತೀಶ್ ಜಾಧವ್, ನಿತೀನ್ ಜಾಧವ್, ಕೃಷ್ಣೋಜಿರಾವ್‍ಮೋರೆ, ನಾಗರಾಜ್‍ಬೇದ್ರೆ, ಶಾರದಬಾಯಿ, ಕಲಾಬಾಯಿ, ಪದ್ಮಬಾಯಿ ಸೇರಿದಂತೆ ಮರಾಠ ಸಮಾಜದ ಅನೇಕರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.