ರಾಮನಗರ: ಗುದ್ದಲಿ ಪೂಜೆಗೆ ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಆಹ್ವಾನ ನೀಡಿಲ್ಲ ಎಂಬ ಕಾರಣಕ್ಕೆ ಜೆಡಿಎಸ್ ಕಾರ್ಯಕರ್ತರು ಹಾಗೂ ಸಿಪಿ ಯೋಗಿಶ್ವರ್ ಕಾರ್ಯಕರ್ತರ ನಡುವೆ ಚನ್ನಪಟ್ಟಣದಲ್ಲಿ ದೊಡ್ಡ ಗಲಾಟೆಯೇ ನಡೆದಿದೆ. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಕುಮಾರಸ್ವಾಮಿ, ನನ್ನ ಪಕ್ಷದಲ್ಲಿರುವವರು ಯಾರು ಗೂಂಡಾಗಳಲ್ಲ ಎಂದು ತಿರುಗೇಟು ನೀಡಿದ್ದಾರೆ.
ನಾಣು ಬ್ಲ್ಯಾಕ್ ಇದ್ದೇನೆ ಆದರೆ ಬ್ಲ್ಯಾಕ್ ಮೇಲರ್ ಅಲ್ಲ. ನಿಮಗೆ ಹಾಗೇ ಎನಿಸಿದರೆ ನಾನಗೇನು ಗೊತ್ತಿಲ್ಲ. ನಾವೂ ಬೇರೆ ಜಿಲ್ಲೆಯಿಂದ ಗೂಂಡಾಗಳನ್ನು ಕರೆಸಿ ಯಾವತ್ತಿಗೂ ಪ್ರತಿಭಟನೆ ನಡೆಸುವುದಿಲ್ಲ. ನನ್ನ ಪಕ್ಷದಲ್ಲಿರುವವರು ಗುಂಡಾಗಳು ಅಲ್ಲ, ರಾಮನಗರ ಜಿಲ್ಲೆ ಅಷ್ಟೊಂದು ಅನಾಥವಾಗಿಲ್ಲ. ರಾಮನಗರದ ಶಾಸಕರ ಗಮನಕ್ಕೂ ತಾರದೇ ಸಿ ಪಿ ಯೋಗೀಶ್ವರ್ ಅದೇಗೆ ಕಾರ್ಯಕ್ರಮ ಮಾಡಿದರು ಎಂದು ಪ್ರಶ್ನಿಸಿದ್ದಾರೆ.
ಸುಮ್ಮನೆ ಬಿಡುವುದಿಲ್ಲ. ಈ ಬಾರಿ ವಿಧಾನಸಭೆಯಲ್ಲಿ ಹಕ್ಕುಚ್ಯುತಿ ಮಂಡಿಸುತ್ತೇನೆ. ಇದು ಸಾಮಾನ್ಯ ಹಕ್ಕುಚ್ಯುತಿಯಾಗಲ್ಲ. ಆ ವೇಳೆ ಯಾರೆಲ್ಲಾ ಅಧಿಕಾರಿಗಳು ಇದ್ದರೋ ಅವರೆಲ್ಲಾ ಸಸ್ಪೆಂಡ್ ಆಗಬೇಕು. ಮುಂದಿನ ವಿಧಾನಸಭೆ ಚುನಾವಣೆ ಬಹಳ ದೂರ ಉಳಿದುಕೊಂಡಿಲ್ಲ. ಅದನ್ನು ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು ಎಂದು ಆಕ್ರೋಶ ಹೊರ ಹಾಕಿದ್ದಾರೆ.