Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕೋಲಾರದ ಚೇತನ್ ಕುಮಾರ್ ಮನೆಗೆ ಭೇಟಿ ನೀಡಿ, ವಿದ್ಯಾರ್ಥಿಗೆ ಧೈರ್ಯ ತುಂಬಿದ ಮಾಜಿ ಸಚಿವ ಸುರೇಶ್ ಕುಮಾರ್

Facebook
Twitter
Telegram
WhatsApp

 

 

ಕೋಲಾರ: ಎಷ್ಟೇ ಶತಮಾನಗಳು ಕಳೆದರು ಜಾತಿ ಬಗೆಗಿನ ಕೀಳುಮಟ್ಟದ ಯೋಚನೆ ಕೆಲವರಲ್ಲಿ ಹೋಗುವುದೇ ಇಲ್ಲ. ಇತ್ತಿಚೆಗೆ ಮನುಕುಲವೇ ಅಸಹ್ಯಪಟ್ಟುಕೊಳ್ಳುವ ರೀತಿಯಲ್ಲಿ ಉಳ್ಳೇರಹಳ್ಳಿ ಗ್ರಾಮದ ಜನ ನಡೆದುಕೊಂಡಿದ್ದರು. ಇದೀಗ ಆ ವಿದ್ಯಾರ್ಥಿಯನ್ನು ಭೇಟಿ ಮಾಡಿ, ಮಾಜಿ ಸಚಿವ ಸುರೇಶ್ ಕುಮಾರ್ ಧೈರ್ಯ ತುಂಬಿದ್ದಾರೆ.

ಈ ಸಂಬಂಧ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಸುರೇಶ್ ಕುಮಾರ್ ಅವರು, ಇಂದು ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಟೇಕಲ್ ಹೋಬಳಿ, ಉಳ್ಳೇರಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಚೇತನ್ ಕುಮಾರ್ ಎಂಬ ವಿದ್ಯಾರ್ಥಿಯ ಮನೆಗೆ ಹೋಗಿದ್ದೆ. ಚೇತನ್ ಕುಮಾರ್ ಟೇಕಲ್ ಸರ್ಕಾರಿ ಸಂಯುಕ್ತ ಪದವಿಪೂರ್ವ ಕಾಲೇಜಿನ 10ನೇ ತರಗತಿಯ ವಿದ್ಯಾರ್ಥಿ.

ಸೆಪ್ಟೆಂಬರ್ 8ರಂದು ಉಳ್ಳೇರಹಳ್ಳಿ ಗ್ರಾಮದಲ್ಲಿ ಸಂಭವಿಸಿದ ಘಟನೆ ನಮಗೆಲ್ಲರಿಗೂ ಬೇಸರ ತರುವಂತಹದ್ದು. ಅಂದು ಗ್ರಾಮದಲ್ಲಿ ನಡೆಯುತ್ತಿದ್ದ ಭೂತಮ್ಮ ದೇವರ ಉತ್ಸವದ ಸಂದರ್ಭದಲ್ಲಿ ಆ ಮೆರವಣಿಗೆಗೆ ಉಪಯೋಗಿಸುತ್ತಿದ್ದ ಗುಜ್ಜುಕೊಲು (ಆಸರೆಗೆ ಉಪಯೋಗಿಸುವ ಕೋಲು) ಬಿದ್ದುಹೋಯಿತು. ಅದನ್ನು ಚೇತನ್ ಕುಮಾರ್ ಎತ್ತಿ ಕೊಟ್ಟ. ಪರಿಶಿಷ್ಟ ಜಾತಿಗೆ ಸೇರಿದ ಈ ಬಾಲಕ ದೇವರ ಕೋಲನ್ನು ಮುಟ್ಟಿದ ಎಂಬ ಕಾರಣಕ್ಕೆ ಅವನ ಕುಟುಂಬವನ್ನು ಗ್ರಾಮ ಬಿಟ್ಟು ಹೋಗಲು ಆಜ್ಞಾಪಿಸಲಾಯಿತು.

ನಂತರ ನಡೆದ ಪಂಚಾಯಿತಿಯಲ್ಲಿ ಆ ಬಾಲಕ “ಮಾಡಿದ ತಪ್ಪಿಗೆ” ಅವನ ಕುಟುಂಬ ₹ 60,000 ದೇವರ ಶುದ್ಧಿಗಾಗಿ ದಂಡ ತರಬೇಕೆಂದು ಆದೇಶಿಸಲಾಯಿತು. ಆ ಕುಟುಂಬದ ದುಡಿಯುವ ಏಕೈಕ ವ್ಯಕ್ತಿ ಎಂದರೆ ಚೇತನ್ ಕುಮಾರ್ ಅವರ ತಾಯಿ. ಅವರು ಬೆಂಗಳೂರಿನಲ್ಲಿ ಹೌಸ್ ಕೀಪಿಂಗ್ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ.

ತಮ್ಮ ಆರ್ಥಿಕ ಅಸಹಾಯಕತೆಯನ್ನು ವ್ಯಕ್ತಪಡಿಸಿ ಆಕೆ ₹ 5,000 ನೀಡುತ್ತೇನೆಂದು ಹೇಳಿದಾಗ ಅಲ್ಲಿನ ಪ್ರಮುಖರು ಒಪ್ಪಲಿಲ್ಲ. ಈ ಘಟನೆ ಇಡೀ ರಾಜ್ಯದ ಗಮನ ಸೆಳೆದಿದೆ. ಈ ಸಂದರ್ಭದಲ್ಲಿ ಕೋಲಾರದ ಜಿಲ್ಲಾಡಳಿತ ನಡೆದುಕೊಂಡಿರುವ ರೀತಿ ಅತ್ಯಂತ ಶ್ಲಾಘನೀಯ. ಆತಂಕಕ್ಕೆ ಒಳಗಾಗಿದ್ದ ಆ ಕುಟುಂಬಕ್ಕೆ ಧೈರ್ಯ ತುಂಬಿ ತಪ್ಪಿತಸ್ಥರನ್ನು ಬಂಧನಕ್ಕೆ ಒಳಮಾಡಿ ಕುಟುಂಬಕ್ಕೆ ಅಗತ್ಯ ವಸತಿ ನೆರವನ್ನು ನೀಡುವುದಾಗಿ ಘೋಷಿಸಿದೆ. ಮತ್ತು ಚೇತನ್ ಕುಮಾರ್ ತಾಯಿಗೆ ಸೂಕ್ತ ಉದ್ಯೋಗ ಕೊಡುವ ಭರವಸೆ ನೀಡಿದೆ.

ನಾನು ಇಂದು ಚೇತನ್ ಕುಮಾರ್ ಮನೆಗೆ ಭೇಟಿ ನೀಡಿ ಅವರ ತಂದೆ,ತಾಯಿ ಮತ್ತು ಅಜ್ಜಿ ಎಲ್ಲರನ್ನೂ ಮಾತನಾಡಿಸಿ ಧೈರ್ಯ ತುಂಬುವ ಮಾತುಗಳನ್ನು ಆಡಿದೆ. ಚೇತನ್ ಕುಮಾರನನ್ನೂ ಸಹ ಅವನ ಶಾಲೆಯ ಪ್ರಾಂಶುಪಾಲರ ಕೊಠಡಿಯಲ್ಲಿ ಭೇಟಿ ಮಾಡಿ ನನ್ನ ಪಕ್ಕದಲ್ಲಿ ಕೂಡಿಸಿಕೊಂಡು ಅವನ ಆತ್ಮವಿಶ್ವಾಸವು ಹೆಚ್ಚಾಗುವ ಮಾತುಗಳನ್ನು ಆಡಿದೆ. ಶಾಲೆಯ ಶಿಕ್ಷಕರು ಈ ನಿಟ್ಟಿನಲ್ಲಿ ಅತ್ಯಂತ ಪೂರಕವಾಗಿ ನಡೆದುಕೊಂಡಿದ್ದಾರೆ. ಆದರೆ ಆ ಕುಟುಂಬದ ಮೇಲೆ ಈ ರೀತಿ ದೌರ್ಜನ್ಯವೆಸಗಿ, ಆ ಅಮಾಯಕ ಬಾಲಕನ ಮನಸ್ಸನ್ನು ಘಾಸಿ ಮಾಡಿರುವ ಆ ಗ್ರಾಮದ ಪ್ರಮುಖರಿಗೆ ಯಾವುದೇ ಕ್ಷಮೆ ಎಂಬುದು ಇರಕೂಡದು ಎಂದು ಬರೆದುಕೊಂಡಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಕಾಮಾಲೆ (ಜಾಂಡೀಸ್) ರೋಗ ಎಂದರೇನು ? ಇಲ್ಲಿದೆ ಉಪಯುಕ್ತ ಮಾಹಿತಿ….!

ಕಾಮಾಲೆ ಅಥವಾ ಜಾಂಡೀಸ್ ಎನ್ನುವುದು ಹತ್ತು ಹಲವು ರೋಗಗಳಲ್ಲಿ ಕಂಡು ಬರುವ ದೇಹ ಸ್ಥಿತಿಯಾಗಿರುತ್ತದೆ. ಹಲವಾರು ಕಾರಣಗಳಿಂದ ಕಾಮಾಲೆ ರೋಗ ಬರುವ ಸಾಧ್ಯತೆ ಇರುತ್ತದೆ. ಕಾಮಾಲೆ ಎಂಬ ಪದವು ಕಾಮ ಮತ್ತು ಲಾ ಎಂಬ

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ: ಈ ರಾಶಿಯ ಕುಟುಂಬದಲ್ಲಿ ಕಲಹಗಳು ಆಗಲು ದಾಯಾದಿಗಳೇ ಕಾರಣ : ಈ ರಾಶಿಯ ಗಂಡ ಹೆಂಡತಿ ದೂರವಾಗಲು ಹಿತೈಷಿಗಳೇ ಕಾರಣ : ಶನಿವಾರ-ರಾಶಿ ಭವಿಷ್ಯ

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

error: Content is protected !!