Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ದೇಶವನ್ನು ವಿಶ್ವಗುರುವನ್ನಾಗಿಸುವುದು ಪ್ರಧಾನಿ ಮೋದಿರವರ ಪರಿಕಲ್ಪನೆ : ಡಾ. ಸಿದ್ದಾರ್ಥ ಗುಂಡಾರ್ಪಿ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ : ಪ್ರತಿ ಕ್ಷೇತ್ರದಲ್ಲಿ ದೇಶವನ್ನು ಮುಂದೆ ತೆಗೆದುಕೊಂಡು ಹೋಗಬೇಕೆಂದು ಪ್ರಧಾನಿ ನರೇಂದ್ರಮೋದಿ ಕನಸು ಕಂಡಿರುವುದರಿಂದ ಪ್ರತಿಯೊಬ್ಬರು ಸೇವಾ ಮನೋಭಾವ ಬೆಳೆಸಿಕೊಳ್ಳುವಂತೆ ಬಿಜೆಪಿ ಮುಖಂಡ ಡಾ. ಸಿದ್ದಾರ್ಥ ಗುಂಡಾರ್ಪಿ ಕರೆ ನೀಡಿದರು.

ಪ್ರಧಾನಿ ಮೋದಿ ಹಾಗೂ ಪಂಡಿತ್ ದೀನ್ ದಯಾಳ್ ಉಪಾಧ್ಯರವರ ಜನ್ಮದಿನದ ಅಂಗವಾಗಿ ನಗರ ಬಿಜೆಪಿ. ಓ.ಬಿ.ಸಿ. ಮೋರ್ಚಾದಿಂದ ಹದಿನೈದು ದಿನಗಳ ಕಾಲ ಹಮ್ಮಿಕೊಂಡಿರುವ ಸೇವಾ ಪಾಕ್ಷಿಕ ಪ್ರಯುಕ್ತ ಜೋಗಿಮಟ್ಟಿ ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಅರಳಿ ಮರ ನೆಟ್ಟು ನಂತರ ಮಾತನಾಡಿದರು.

ಬಿಜೆಪಿ ಎಂದರೆ ಕೇವಲ ಓಟಿಗಾಗಿ ಅಲ್ಲ. ದೇಶವನ್ನು ವಿಶ್ವಗುರುವನ್ನಾಗಿಸುವುದು ಪ್ರಧಾನಿ ಮೋದಿರವರ ಪರಿಕಲ್ಪನೆ. ಅದಕ್ಕಾಗಿ ಎಲ್ಲರೂ ಮೋದಿರವರ ಆಸೆಯಂತೆ ಸೇವಾ ಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕು ಎಂದು ತಿಳಿಸಿದರು.

ಗಿಡ-ಮರಗಳು ದೇಶದಲ್ಲಿ ಕಡಿಮೆಯಾಗುತ್ತಿರುವುದರಿಂದ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಕಳೆದ ಎರಡು ವರ್ಷ ಕೋವಿಡ್ ಸಂದರ್ಭದಲ್ಲಿ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಆಕ್ಸಿಜನ್ ನೀಡಿ ಪ್ರಾಣ ಕಾಪಾಡುವಂತ ಪರಿಸ್ಥಿತಿ ಎದುರಾಗಿತ್ತು. ಎಲ್ಲವನ್ನು ಅನುಭವಿಸಿದ್ದೀರಿ. ಹಾಗಾಗಿ ಪ್ರತಿಯೊಬ್ಬರು ಒಂದೊಂದು ಸಸಿ ನೆಟ್ಟು ದೊಡ್ಚ ಮರವನ್ನಾಗಿ ಬೆಳೆಸಿದರೆ ನಗರ ನೋಡಲು ಸುಂದರವಾಗಿರುತ್ತದಲ್ಲದೆ ಸಕಲ ಜೀವರಾಶಿಗಳಿಗೂ ಶುದ್ದವಾದ ಗಾಳಿ ಸಿಗುತ್ತದೆ ಎಂದು ಹೇಳಿದರು.

ಮೂರು ವರ್ಷಗಳಿಂದ ಬೀಜದುಂಡೆ ತಯಾರಿಸಿ ಜೋಗಿಮಟ್ಟಿ ಹಾಗೂ ಆಡುಮಲ್ಲೇಶ್ವರದಲ್ಲಿ ಪಸರಿಸಲಾಗಿದೆ. ಇನ್ನು ಹತ್ತು ವರ್ಷದಲ್ಲಿ ನಗರವನ್ನು ಹಸಿರೀಕರಣವನ್ನಾಗಿಸುವಲ್ಲಿ ಎಲ್ಲರೂ ಪಣತೊಡಬೇಕೆಂದು ಮನವಿ ಮಾಡಿದರು.

ಬಿಜೆಪಿ.ಜಿಲ್ಲಾಧ್ಯಕ್ಷ ಎ.ಮುರಳಿ ಮಾತನಾಡುತ್ತ ಜೋಗಿಮಟ್ಟಿ ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಅರಳಿ ಗಿಡ ನೆಟ್ಟಿರುವುದು ಸಮಂಜಸವಾಗಿದೆ. ಏಕೆಂದರೆ ಅರಳಿ ಮರದಿಂದ ಶುದ್ದವಾದ ಗಾಳಿ ಸಿಗುತ್ತದೆ. ಕೋವಿಡ್ ಸಂದರ್ಭದಲ್ಲಿ ಉಸಿರಾಟಕ್ಕೆ ತೊಂದರೆಯಾಗಿ ಅನೇಕರು ಪ್ರಾಣ ಕಳೆದುಕೊಂಡಿದ್ದನ್ನು ಎಲ್ಲರೂ ನೋಡಿದ್ದೇವೆ. ಆಸ್ಪತ್ರೆಗಳಲ್ಲಿಯೂ ಆಕ್ಸಿಜನ್ ಪೂರೈಸಲು ಕಷ್ಟವಾಗುತ್ತಿತ್ತು. ಇಂತಹ ಸಂದರ್ಭದಲ್ಲಿ ಎಲ್ಲೆಲ್ಲಿ ಖಾಲಿ ಜಾಗವಿರುತ್ತದೋ ಅಲ್ಲೆಲ್ಲಾ ಗಿಡಗಳನ್ನು ನೆಟ್ಟು ಪೋಷಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು.

ಹಿಂದೂ ರುದ್ರಭೂಮಿಯಲ್ಲಿ ಈ ಹಿಂದೆ ಶವ ಸಂಸ್ಕಾರಕ್ಕೂ ಜಾಗವಿರುತ್ತಿರಲಿಲ್ಲ. ಬಳ್ಳಾರಿ ಜಾಲಿಗಿಡಗಳು ತುಂಬಿಕೊಂಡಿದ್ದವು. ಈಗ ಎಲ್ಲವನ್ನು ಸ್ವಚ್ಚಗೊಳಿಸಿ ದೇವಸ್ಥಾನ ನಿರ್ಮಿಸಿರುವುದು ನೋಡಲು ಸುಂದರವಾಗಿದೆ ಎಂದು ಟ್ರಸ್ಟ್‍ನವರಿಗೆ ಧನ್ಯವಾದಗಳನ್ನು ಅರ್ಪಿಸಿದರು.

ಭಾರತೀಯ ಜನತಾಪಾರ್ಟಿ ಬರೀ ರಾಜಕೀಯಕ್ಕಾಗಿ ಇರುವುದಲ್ಲ. ದೇಶವನ್ನು ಸದೃಢ, ಸುರಕ್ಷತೆ, ಸಮೃದ್ದತೆ ಕಡೆ ಕೊಂಡೊಯ್ಯುವುದು ನಮ್ಮ ನಾಯಕರುಗಳ ಉದ್ದೇಶ. ಅ.2 ಗಾಂಧಿ ಜಯಂತಿಯವರೆಗೆ ಹದಿನೈದು ದಿನಗಳ ಕಾಲ ರಾಜಕೀಯರಹಿತವಾಗಿ ಸಸಿ ನೆಡುವುದು, ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ ಸೇರಿದಂತೆ ಇನ್ನು ಅನೇಕ ಸೇವಾ ಚಟುವಟಿಕೆಗಳನ್ನು ನಡೆಸಲಾಗುವುದು. ಇದೇ ತಿಂಗಳ 30 ರಂದು ಕೃತಕ ಕಾಲುಗಳ ಜೋಡಣೆಯಿರುತ್ತದೆ. ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳುವಂತೆ ವಿನಂತಿಸಿದರು.

ಬಿಜೆಪಿ ನಗರ ಮಂಡಲ ಅಧ್ಯಕ್ಷ ನವೀನ್ ಚಾಲುಕ್ಯ, ಸಂಪತ್‍ಕುಮಾರ್, ನಾಗರಾಜ್‍ಬೇದ್ರೆ, ದಗ್ಗೆಶಿವಪ್ರಕಾಶ್, ನಗರ ಪ್ರಧಾನ ಕಾರ್ಯದರ್ಶಿಗಳಾದ ಕಿರಣ್, ವೆಂಕಟೇಶ್, ಬಾಗೋಡಿ ಸ್ವಾಮಿ, ಪಲ್ಲವಿ ಪ್ರಸನ್ನ, ನಗರ ಮಹಿಳಾಧ್ಯಕ್ಷೆ ಶೀಲ, ಓ.ಬಿ.ಸಿ.ಮೋರ್ಚಾ ಅಧ್ಯಕ್ಷ ಕೃಷ್ಣ, ನಗರಾಭಿವೃದ್ದಿ ಪ್ರಾಧಿಕಾರದ ಸದಸ್ಯ ರೈತರಾಜು, ನಗರಸಭಾ ಸದಸ್ಯರುಗಳಾದ ಮಹೇಶ್, ಹರೀಶ್, ನಾಮನಿರ್ದೇಶಕ ಸದಸ್ಯರುಗಳಾದ ತಿಮ್ಮಣ್ಣ, ರಮೇಶ್, ಅಶೋಕ್, ಹಿಂದೂ ರುದ್ರಭೂಮಿ ಟ್ರಸ್ಟ್ ಅಧ್ಯಕ್ಷ ಗುರುಮೂರ್ತಿ ಹಾಗೂ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಫೋಟೋ ವಿವರಣೆ: ಪ್ರಧಾನಿ ಮೋದಿ ಹಾಗೂ ಪಂಡಿತ್ ದೀನ್ ದಯಾಳ್ ಉಪಾಧ್ಯರವರ ಜಯಂತಿ ಅಂಗವಾಗಿ ಹಿಂದೂ ರುದ್ರಭೂಮಿಯಲ್ಲಿ ಅರಳಿ ಗಿಡ ನೆಡಲಾಯಿತು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಕಾಮಾಲೆ (ಜಾಂಡೀಸ್) ರೋಗ ಎಂದರೇನು ? ಇಲ್ಲಿದೆ ಉಪಯುಕ್ತ ಮಾಹಿತಿ….!

ಕಾಮಾಲೆ ಅಥವಾ ಜಾಂಡೀಸ್ ಎನ್ನುವುದು ಹತ್ತು ಹಲವು ರೋಗಗಳಲ್ಲಿ ಕಂಡು ಬರುವ ದೇಹ ಸ್ಥಿತಿಯಾಗಿರುತ್ತದೆ. ಹಲವಾರು ಕಾರಣಗಳಿಂದ ಕಾಮಾಲೆ ರೋಗ ಬರುವ ಸಾಧ್ಯತೆ ಇರುತ್ತದೆ. ಕಾಮಾಲೆ ಎಂಬ ಪದವು ಕಾಮ ಮತ್ತು ಲಾ ಎಂಬ

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ: ಈ ರಾಶಿಯ ಕುಟುಂಬದಲ್ಲಿ ಕಲಹಗಳು ಆಗಲು ದಾಯಾದಿಗಳೇ ಕಾರಣ : ಈ ರಾಶಿಯ ಗಂಡ ಹೆಂಡತಿ ದೂರವಾಗಲು ಹಿತೈಷಿಗಳೇ ಕಾರಣ : ಶನಿವಾರ-ರಾಶಿ ಭವಿಷ್ಯ

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

error: Content is protected !!