ರಾಜ್ಯದಲ್ಲಿ ಪೇ ಸಿಎಂ ಪೋಸ್ಟರ್ ಅಭಿಯಾನ ಟ್ರೆಂಡ್ ಆಗುತ್ತಿದ್ದಂತೆ, ರೈತರು ಕೂಡ ನ್ಯಾಯ ಕೇಳುವುದಕ್ಕೆ ಈಗ ಅದನ್ನೇ ಬಳಸುತ್ತಿದ್ದಾರೆ. ಬೆಂಬಲ ಬೆಲೆ ಕೊಡದ ಸರ್ಕಾರದ ವಿರುದ್ಧ ಇದೇ ಅಭಿಯಾನವನ್ನು ತಿರುಗಿಸಿದ್ದಾರೆ. ಪೇ ಸಿಎಂ ಪೋಸ್ಟರ್ ರೀತಿಯಲ್ಲಿಯೇ ಪೇ ಫಾರ್ಮರ್ ಪೋಸ್ಟರ್ ಅಭಿಯಾನವನ್ನು ಶುರು ಮಾಡಿದ್ದಾರೆ. ಇಂದು ಈ ಅಭಿಯಾನ ಕೊಂಚ ಹೆಚ್ಚಾಗಿದೆ.
ನಿನ್ನೆಯಿಂದ ಮಂಡ್ಯದ ರೈತರು ಪೇ ಫಾರ್ಮರ್ ಅಭಿಯಾನ ಆರಂಭಿಸಿದ್ದು, ಇಂದು ರಸ್ತೆ ಗೋಡೆಗಳು, ಬಸ್ಸುಗಳ ಮೇಲೆಲ್ಲಾ ಅಭಿಯಾನ ಪೋಸ್ಟರ್ ರಾರಜಿಸುತ್ತಿದೆ. ಬೆಳೆದ ಬೆಲೆಗೆ ಬೆಂಬಲ ಬೆಲೆ ನೀಡಿ ಎಂದು ಈ ಪೋಸ್ಟರ್ ಅಭಿಯಾನ ಆರಂಭಿಸಿದ್ದಾರೆ. ಮಂಡ್ಯ ನಗರದ ಸಂಜಯ್ ವೃತ್ತದಲ್ಲಿ ಈ ಅಭಿಯಾನ ಆರಂಭವಾಗಿದ್ದು, ಕಾರು, ರಾಷ್ಟ್ರೀಯ ಹೆದ್ದಾರಿ, ಸರ್ಕಾರಿ ಬಸ್ಸುಗಳ ಮೇಲೆಯೂ ಪೇ ಫಾರ್ಮರ್ ಪೋಸ್ಟರ್ ಗಳನ್ನು ಅಂಟಿಸಿದ್ದಾರೆ.
ಈ ಅಭಿಯಾನವನ್ನು ಯುವ ರೈತ ನಾಯಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ನಡೆಸಲಾಗಿದೆ. ಹೆದ್ದಾರಿಯಲ್ಲಿ ಕೆಎಸ್ಆರ್ಟಿಸಿ, ಐರಾವತ ಬಸ್ ಗಳನ್ನು ತಡೆದು, ಅದರ ಮೇಲೆ ಪೋಸ್ಟರ್ ಅಂಟಿಸಿ, ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಒಂದು ಟನ್ ಕಬ್ಬಿಗೆ 4500 ರೂಪಾಯಿ ನಿಗದಿ ಮಾಡುವಂತೆ ಒತ್ತಾಯಿಸಿದ್ದಾರೆ.