ಮೈಸೂರು: ದಸರಾ ಹಬ್ಬಕ್ಕೆ ಇಂದು ವಿದ್ಯುಕ್ತ ಚಾಲನೆ ದೊರೆತಿದೆ. ಇದೇ ಮೊದಲ ಬಾರಿಗೆ ರಾಷ್ಟ್ರಪತಿ ಚಾಲನೆ ನೀಡಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮಾ ಅವರಿಗೆ ಸಿಎಂ ಬೊಮ್ಮಾಯಿ ಸೇರಿದಂತೆ ಸಚಿವರು, ಶಾಸಕರು, ಸಂಸದರು ಸಾಥ್ ನೀಡಿದ್ದಾರೆ.
ದಸರಾ ಉದ್ಘಾಟನಾ ಸಮಾರಂಭದ ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮಾ ಮಾತನಾಡಿದ್ದು, ಚಾಮುಂಡೇಶ್ವರಿ ತಾಯಿ ನನ್ನ ತುಂಬು ಹೃದಯದ ನಮನಗಳು. ದೇಶದ ಯತಿ ಮುನಿಗಳು ಸಂಸ್ಕೃತಿ ರಕ್ಷಿಸಿ ಮುಂದುವರೆಸಿದ್ದಾರೆ. ಮೈಸೂರು ದಸರಾ ಭಾರತದ ಸಂಸ್ಕೃತಿಯ ಪ್ರತೀಕ. ಈ ಹಬ್ಬ ಹಲವು ಸಂಸ್ಕೃತಿಯ ಜೊತೆಗೆ ಬೆರೆತುಕೊಂಡಿದೆ. ಬಸವಣ್ಣ, ಅಲ್ಲಮ ಪ್ರಭು ಆದರ್ಶ ವ್ಯಕ್ತಿಗಳಾಗಿದ್ದರು.
ಬಸವಣ್ಣನವರ ವಚನ ಜನತಂತ್ರ ವ್ಯವಸ್ಥೆಗೆ ಮಾದರಿಯಾಗಿದೆ. ಈಗಲೂ ಅವರ ವಚನವನ್ನು ಭಕ್ತಿಪೂರ್ವಕವಾಗಿ ಕೇಳಲಾಗುತ್ತದೆ. ಕರ್ನಾಟಕ ಭಕ್ತಿ ಸಮಾನತೆಯನ್ನು ಎಲ್ಲೆಡೆ ಪಸರಿಸಲಾಗಿದೆ. ಮಹಿಷಾಮರ್ಧನ ಮೂಲಕ ಮಹಿಳೆಯರ ಸಾಮರ್ಥ್ಯ ಪರಿಚಯ ಮಾಡಿಕೊಡಲಾಗಿದೆ. ಮಹಿಳೆ ಶಾಂತಿ, ಶಕ್ತಿ, ಶೌರ್ಯದ ಸಂಕೇತ ಎಂದು ಬಿಂಬಿಸಲಾಗಿದೆ. ಮೈಸೂರು ದಸರಾ ಮುಂದುವರೆದಿರುವುದು ಹೆಮ್ಮೆಯ ವಿಷಯ. ಈ ಅವಕಾಶ ನೀಡಿದ್ದಕ್ಕೆ ಮುಖ್ಯಮಂತ್ರಿ ಅವರಿಗೆ ಧನ್ಯವಾದಗಳು ಎಂದಿದ್ದಾರೆ.