ಬೆಂಗಳೂರು: ಮಸ್ಕಿ ಕ್ಷೇತ್ರದ ಕಾಲುವೆ ಬಗ್ಗೆ ಶಾಸಕ ತುರುವಿಹಾಳ್ ಪ್ರಶ್ನೆ ಎತ್ತಿದ್ದಾರೆ. ಇದಕ್ಕೆ ವಿಧಾನಸಭೆಯಲ್ಲಿ ಸಚಿವ ಗೋವಿಂದ ಕಾರಜೋಳು ಉತ್ತರ ನೀಡಿದ್ದಾರೆ. ಶಾಸಕರು ಬೈ ಎಲೆಕ್ಷನ್ ಸಮಯದಲ್ಲಿ ಮಾತು ಕೊಟ್ಟಿದ್ದಾರೆ. ಆದರೆ ನೀರಿನ ಲಭ್ಯತೆ ಇಲ್ಲ ಎಂದು ಸಚಿವ ಕಾರಜೋಳು ತಿಳಿಸಿದ್ದಾರೆ.
ಜೊತೆಗೆ ಹಟ್ಟಿಗೋಲ್ಡ್ ನವರು ಇದಕ್ಕೆ ಅವಕಾಶ ಮಾಡಿಕೊಡಲ್ಲ. ಹೀಗಾಗಿ ಯೋಜನೆ ಮಾಡಲು ಆಗಲ್ಲ ಎಂದು ಸಚಿವ ಕಾರಜೋಳು ಹೇಳಿದ್ದಾರೆ. ಕಾರಜೋಳು ಮಾತಿಗೆ ಸದನದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪಾಪ ಶಾಸಕರು ಯೋಜನೆ ಆಗಲಿ ಅಂತ ಹೇಳಿದ್ದಾರೆ. ಸ್ವಲ್ಪ ಪಾಸಿಟಿವ್ ಆಗಿ ಉತ್ತರಿಸಿ ಎಂದಿದ್ದಾರೆ.
ಸಿದ್ದರಾಮಯ್ಯ ಅವರಿಗೆ ಸಮಸ್ಯೆ ಗೊತ್ತಿದ್ದರೂ ಕೇಳುತ್ತಿದ್ದಾರೆ. ಕಾಲುವೆ ಸಮಸ್ಯೆ ಏನಿದೆ ಎಂಬುದನ್ನು ಕಾರಜೋಳ್ ಉತ್ತರಿಸಿದ್ದಾರೆ. ಬಳಿಕ ಪಾಪ ಶಾಸಕರು ಭರವಸೆ ಕೊಟ್ಟಿದ್ದಾರೆ ಪ್ರಯತ್ನಿಸಿ. ರಮೇಶ್ ಜಾರಕಿಹೊಳಿ ಕೂಡ ಭರವಸೆ ನೀಡಿದ್ದಾರೆ. ಅಧಿಕಾರಿಗಳ ಸಭೆ ಕರೆದು ಮತ್ತೊಮ್ಮೆ ಪ್ರಯತ್ನಿಸಿ ಎಂದು ಗೋವಿಂದ ಕಾರಜೋಳಗೆ ಸಿದ್ದರಾಮಯ್ಯ ಮತ್ತೊಮ್ಮೆ ಹೇಳಿದ್ದಾರೆ.