ಚಿತ್ರದುರ್ಗ : ಆಜಾದಿ ಕಾ ಅಮೃತ ಮಹೋತ್ಸವ ಹಾಗೂ ಪ್ರಧಾನಿ ನರೇಂದ್ರಮೋದಿರವರ ಹುಟ್ಟುಹಬ್ಬದ ಅಂಗವಾಗಿ ಅಖಿಲ ಭಾರತೀಯ ಥೇರಾಪಂಥ್ ಯುವಕ್ ಪರಿಷತ್, ರೋಟರಿ ಕ್ಲಬ್, ವಾಸವಿ ಯುವಜನ ಸಂಘ, ಆರ್ಯವೈಶ್ಯ ಮಹಾಸಭಾ, ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯಿಂದ ಶನಿವಾರ ನಗರದ ರೋಟರಿ ಬಾಲಭವನ, ದಾವಣಗೆರೆ ರಸ್ತೆಯಲ್ಲಿರುವ ಥೇರಾಪಂಥ್ ಭವನ ಹಾಗೂ ವಾಸವಿ ಮಹಲ್‍ನಲ್ಲಿ ಮೆಘಾ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಥೇರಾಪಂಥ್ ಭವನದಲ್ಲಿ 54, ರೋಟರಿ ಬಾಲಭವನದಲ್ಲಿ 25, ವಾಸವಿಮಹಲ್‍ನಲ್ಲಿ 21 ಮಂದಿ ರಕ್ತದಾನ ಮಾಡಿದರು.
ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ರಾಜ್ಯ ಸಮಿತಿ ಸದಸ್ಯ ಕೆ.ಮಧುಪ್ರಸಾದ್ ಮಾತನಾಡಿ ಭಾರತದಲ್ಲಿ ಪ್ರತಿವರ್ಷವೂ ಹದಿಮೂರುವರೆ ಲಕ್ಷ ಯೂನಿಟ್ ರಕ್ತದ ಅವಶ್ಯಕತೆಯಿದ್ದು, ಪ್ರತಿ ವರ್ಷ ಎರಡುವರೆ ಲಕ್ಷ ಯೂನಿಟ್ ರಕ್ತದ ಕೊರತೆಯಾಗುತ್ತದೆ. ಅಪಘಾತ, ಆಪರೇಷನ್, ಹೆರಿಗೆ ಸಂದರ್ಭದಲ್ಲಿ ತುರ್ತಾಗಿ ರಕ್ತದ ಅವಶ್ಯಕತೆಯಿರುತ್ತದೆ. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನಿಗಳು ಮುಂದೆ ಬರಬೇಕು ಎಂದು ಮನವಿ ಮಾಡಿದರು.
ಅಖಿಲ ಭಾರತೀಯ ಥೇರಾಪಂಥ್ ಯುವಕ ಪರಿಷತ್‍ನ ವಿಕ್ರಾಂತ್‍ಜೈನ್, ವಿನೋದ್‍ಭಾಫ್ನ, ರೋಟರಿ ಕ್ಲಬ್ ಅಧ್ಯಕ್ಷೆ ಮಾಧುರಿ ಮಧುಪ್ರಸಾದ್, ಕಾರ್ಯದರ್ಶಿ ಜಯಶ್ರೀಷಾ, ಗಾಯತ್ರಿ ಶಿವರಾಂ, ವಿನಯ್‍ಪ್ರಸಾದ್, ಅವಿನಾಶ್, ವೆಂಕಟೇಶ್‍ಕುಮಾರ್, ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಕಾರ್ಯದರ್ಶಿ ಮಜಹರ್‍ವುಲ್ಲಾ, ರೊ.ಎಸ್.ವೀರೇಶ್ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.