ಬೆಂಗಳೂರು: ಮಳೆಗಾಲದ ಅಧಿವೇಶನದಲ್ಲಿ ಆಡಳಿತ ಪಕ್ಷವನ್ನು ವಿಪಕ್ಷಗಳು ತರಾಟೆ ತೆಗೆದುಕೊಳ್ಳುವ ಪ್ರಸಂಗಗಳು ನಡೆಯುತ್ತಿವೆ. ಇಂದು ಕೂಡ ಸಿಎಂ ಬೊಮ್ಮಾಯಿ ಹೇಳುವುದನ್ನು ಕೇಳಿಸಿಕೊಳ್ಳದೆ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಮಾತನಾಡುತ್ತಲೇ ಇದ್ದರು. ಆಗ ಮಧ್ಯಪ್ರವೇಶಿಸಿದ ಸ್ಪೀಕರ್ ಕಾಗೇರಿ ಪದೇ ಪದೇ ಎದ್ದು ನಿಂತು ಎಷ್ಟು ಉಪ ಪ್ರಶ್ನೆ ಕೇಳೋದು ಎಂದಿದ್ದಾರೆ.
ಕಾಂಗ್ರೆಸ್ ನಾಯಕರ ವಿರುದ್ಧ ಗರಂ ಆದ ಸ್ಪೀಕರ್, ಸಭೆಗೆ ಒಂದು ಗೌರವ ಇಲ್ವಾ. ಎಷ್ಟು ಸಲ ಹೇಳುವುದು. ಎಲ್ಲರು ಒಟ್ಟಿಗೆ ಮಾತನಾಡಿದರೆ ಯಾರಿಗೆ ಹೇಳುವುದು. ಸಮಸ್ಯೆ ಇರುವುದು ನನಗೂ ಗೊತ್ತಿದೆ. ಅದನ್ನು ನೀವೂ ಹೇಳಬೇಡಿ. ಅಲ್ಲಿ ಎಷ್ಟು ಜನ ನಿಂತುಕೊಂಡು ಉಪ ಪ್ರಶ್ನೆ ಕೇಳೊದ್ದಾರೆ ಎಂಬುದನ್ನು ಯುಟಿ ಖಾದರ್ ನೀವೂ ನೋಡಿದ್ದೀರಿ. ನಾನು ಇಲ್ಲಿಗೆ ಇವತ್ತು ಬಂದು ಕೂತಿಲ್ಲ. ಎಲ್ಲದೂ ಗೊತ್ತಿದೆ.
ಸಭೆಗೆ ಒಂದು ಗೌರವ ಇಲ್ಲವಾ. ಮುಖ್ಯಮಂತ್ರಿಗಳು ಸ್ಪಷ್ಟವಾಗಿ ಹೇಳಿದ್ದಾರೆ. ಪ್ರತ್ಯೇಕವಾಗಿ ಸಭೆ ಕರೆಯುತ್ತೀನಿ. ಆ ಸಭೆಯಲ್ಲಿ ಏನೆಲ್ಲಾ ಸಮಸ್ಯೆ ಇದೆ ಅದನ್ನು ಚರ್ಚೆ ಮಾಡೋಣಾ ಎಂದಿದ್ದಾರೆ. ಪಾರದರ್ಶಕವಾಗಿ ಕೆಲಸ ಮಾಡೋಣಾ ಅಂತ ಹೇಳಿದ್ದಾರೆ. ಇಲ್ಲಿ ಇಷ್ಟು ಜನರು ಪ್ರಶ್ನೆ ಕೇಳುವುದಕ್ಕೆ ಅವಕಾಶ ನೀಡುವುದಿಲ್ಲ ಎಂದಿದ್ದಾರೆ.
ಇದೆ ವೇಳೆ ಜೆಡಿಎಸ್ ಶಾಸಕರ ನಡವಳಿಕೆಯಿಂದಲೂ ಕೋಪಗೊಂಡಿದ್ದಾರೆ. ಗದ್ದಲ ಎಬ್ಬಿಸೋದಕ್ಕೆ ಇದು ಹುಚ್ಚಾಸ್ಪತ್ರೆಯಲ್ಲ. ಇದೇನು ಜಾತ್ರೆನಾ.. ಸಂತೇನಾ ಎಂದು ಪ್ರಶ್ನಿಸಿದ್ದಾರೆ. ಸದನ ನಡೆಸಬೇಕಾ..? ಬೇಡವಾ..? ಒಬ್ಬರು ನಿಂತು ಕೇಳಿ. ಕುಮಾರಸ್ವಾಮಿ ಅವರೇ ನಿಮ್ಮ ಶಾಸಕರಿಗೆ ಹೇಳಿ ಎಂದಿದ್ದಾರೆ.