ಬೆಂಗಳೂರು: ಪಿಎಸ್ಐ ಅಕ್ರಮಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಾಕಷ್ಟು ಸಮಸ್ಯೆ ಉಂಟಾಗಿದೆ. ಹಲವರನ್ನು ಈ ಕೇಸ್ ಗೆ ಸಂಬಂಧಿಸಿದಂತೆ ಅರೆಸ್ಟ್ ಮಾಡಲಾಗಿದೆ. ಮರು ಪರೀಕ್ಷೆಗೆ ಸರ್ಕಾರ ಈಗಾಗಲೇ ಆದೇಶ ಹೊರಡಿಸಿದ್ದಾರೆ. ಈ ನಡುವೆ ಇದೀಗ ಮತ್ತೊಂದು ವಿಚಾರ ಬಯಲಿಗೆ ಬಂದಿದೆ.
ಶಾಸಕ ಬಸವರಾಜ್ ದಡೇಸಗೂರು ವಿರುದ್ಧ ಗಂಭಿರ ಆರೋಪ ಕೇಳಿಬಂದಿದೆ. ಪಿಎಸ್ಐ ಪ್ರಕರಣಕ್ಕೆ ಸಂಬಂಧಿಸಿದಂತೆ 15 ಲಕ್ಷ ಲಂಚದ ಆರೋಪ ಕೇಳಿ ಬಂದಿದೆ. ಇದಕ್ಕೆ ಸಂಬಂದಿಸಿದಂತೆ ನಿವೃತ್ತ ಕಾನ್ಸ್ಟೇಬಲ್ ಹಾಗೂ ಬಸವರಾಜ್ ದಡೇಸಗೂರು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಲೀಕ್ ಆಗಿದೆ. ಅದರಲ್ಲಿ 15 ಲಕ್ಷ ಹಣದ ವಿಚಾರವೂ ಪ್ರಸ್ತಾಪವಾಗಿದೆ.
ನಿವೃತ್ತ ಕಾನ್ಸ್ಟೇಬಲ್ ಪರಸಪ್ಪನ ಮಗನ ನೇಮಕಾತಿಗೆ ಸಂಬಂಧಿಸಿದಂತೆ 15 ಲಕ್ಷ ಲಂಚ ಪಡೆದ ಆರೋಪ ಇದಾಗಿದೆ. ಈ ಆಡಿಯೋ ಬಗ್ಗೆ ಸ್ಪಷ್ಟನೆ ನೀಡಿರುವ ದಡೇಸಗೂರು, ಆ ಆಡಿಯೋದಲ್ಲಿ ಮಾತನಾಡಿರುವುದು ನಾನಲ್ಲ. 15 ಲಕ್ಷ ಹಣ ಪಡೆದ ಆರೋಪ ಸಂಪೂರ್ಣ ಸುಳ್ಳು. ನನ್ನ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ಪಿಎಸ್ಐಗೆ ಸಂಬಂಧಿಸಿದಂತೆ ವಿಡಿಯೋ, ಆಡಿಯೋ ರಿಲೀಸ್ ಮಾಡುತ್ತಾರೆ ಎಂದಿದ್ದಾರೆ. ಪರಸಪ್ಪನ ಮಗ ಫಿಸಿಕಲ್ ನಲ್ಲಿಯೇ ಪಾಸ್ ಆಘಿಲ್ಲ. ಪಿಎಸ್ಐ ಎಲ್ಲಿಂದ ಆಗುತ್ತಾನೆ. ಇದೆಲ್ಲಾ ಅವರಿಗೆ ಗೊತ್ತಿಲ್ಲ. ಪ್ರಿಯಾಂಕ್ ಖರ್ಗೆ ನನ್ನ ಸ್ನೇಹಿತ ಪಾಪ ಹೇಳಲಿ ಎಂದಿದ್ದಾರೆ.