ದ್ವಾರಕಾಪೀಠದ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರು 99 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರು ಲಘು ಹೃದಯಾಘಾತದಿಂದ ಭಾನುವಾರ ಮಧ್ಯಪ್ರದೇಶದ ನರಸಿಂಗ್‌ಪುರದಲ್ಲಿ ನಿಧನರಾದರು.
ಆಶ್ರಮದಲ್ಲಿ 3:50 ಕ್ಕೆ ಕೊನೆಯುಸಿರೆಳೆದರು. ಶಂಕರಾಚಾರ್ಯ ಅವರ ಅಂತ್ಯಕ್ರಿಯೆ ಸೋಮವಾರ ನಡೆಯಲಿದೆ. ಸ್ವರೂಪಾನಂದ ಸರಸ್ವತಿ ಅವರನ್ನು ಹಿಂದೂಗಳ ಶ್ರೇಷ್ಠ ಧಾರ್ಮಿಕ ನಾಯಕ ಎಂದು ಪರಿಗಣಿಸಲಾಗಿದೆ.
ಸ್ವಾಮಿ ಶಂಕರಾಚಾರ್ಯ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಬೆಂಗಳೂರಿನಲ್ಲೂ ಚಿಕಿತ್ಸೆ ಪಡೆದಿದ್ದರು. ಅದಾದ ಬಳಿಕ ಗುಣಮುಖರಾದ ನಂತರ ಆಶ್ರಮಕ್ಕೆ ತೆರಳಿದ್ದರು. ಸ್ವಾಮಿ ಶಂಕರಾಚಾರ್ಯರು ಕೂಡ ಸ್ವಾತಂತ್ರ್ಯ ಹೋರಾಟದಲ್ಲಿ ಜೈಲಿಗೆ ಹೋಗಿದ್ದರು. ಅದೇ ಸಮಯದಲ್ಲಿ, ಅವರು ರಾಮ ಮಂದಿರ ನಿರ್ಮಾಣಕ್ಕಾಗಿ ಸುದೀರ್ಘ ಕಾನೂನು ಹೋರಾಟವನ್ನೂ ನಡೆಸಿದರು.