ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರಾವಾಹಿ ವರ್ಷಗಳೇ ಉರುಳಿದರು ಆ ಧಾರಾವಾಹಿ ನೋಡುಗರ ಸಂಖ್ಯೆ ಇನ್ನು ಕಡಿಮೆಯಾಗಿಲ್ಲ. ಹಾಗೇ ಮನೆಯ ಹಿರಿಯ ಮಹಿಳೆಯರು ಅನು-ಆರ್ಯನ ಬಿಗ್ ಫ್ಯಾನ್ ಆಗಿದ್ದಾರೆ. ಈ ಧಾರಾವಾಹಿ ಹಲವು ಟ್ರೆಂಡ್ ಗಳನ್ನು ಕ್ರಿಯೇಟ್ ಮಾಡಿದೆ. ಒಮ್ಮೆ ಈ ಧಾರಾವಾಹಿಯಲ್ಲಿ ನಟನನ್ನು ಸಾಯಿಸಲಾಗುತ್ತದೆ ಎಂದಾಗ ನೋಡುಗರು ರೊಚ್ಚಿಗೆದ್ದಿದ್ದರು. ಹೀಗಾಗಿ ಧಾರಾವಾಹಿ ತಂಡ ಅಂದು ಕಥೆಯನ್ನು ಬದಲಾಯಿಸಿ, ಹೀರೋನನ್ನು ಉಳಿಸಿತ್ತು. ಆದರೆ ಇಂದು ಜಗಳದ ನಡುವೆ ಹೀರೋ ಪರ್ಮನೆಂಟಾಗಿ ಸತ್ತಿದ್ದಾನೆ.
ಇತ್ತಿಚೆಗೆ ಜೊತೆ ಜೊತೆಯಲಿ ಧಾರಾವಾಹಿ ನಿರ್ಮಾಪಕರಿಗೂ ಹಾಗೂ ಆರ್ಯನ ಪಾತ್ರಧಾರಿ ಅನಿರುದ್ಧ್ ಅವರಿಗೂ ಸಾಕಷ್ಟು ಮನಸ್ತಾಪಗಳಾಗಿ, ಸುದ್ದಿಗೋಷ್ಠಿ ನಡೆಸುವ ತನಕ ತಲುಪಿತ್ತು. ಅದರ ಜೊತೆಗೆ ಕಿರುತೆರೆ ನಿರ್ಮಾಪಕರೆಲ್ಲಾ ಸೇರಿ ಅನಿರುದ್ಧ್ ಜೊತೆ ಕೆಲಸ ಮಾಡುವುದಿಲ್ಲ ಎಂಬಂತೆ, ಕಿರುತೆರೆಯಿಂದ ಬ್ಯಾನ್ ಕೂಡ ಮಾಡಿದ್ದಾರೆ. ಇದೆಲ್ಲ ನಡೆದು ಹತ್ತಿರತ್ತಿರ ಎರಡು ವಾರಗಳಾಗುತ್ತಾ ಬರುತ್ತಿದೆ. ಆದರೂ ಇಲ್ಲಿಯ ತನಕ ಆರ್ಯನ ಪಾತ್ರ ಅನಿರುದ್ಧ್ ಮೂಲಕವೇ ಸಾಗುತ್ತಿತ್ತು. ಎಂದರೆ ಅಷ್ಟು ಬ್ಯಾಂಕಿಂಗ್ ಮಾಡಿಕೊಂಡಿದ್ದರು. ಆದರೆ ಇದೀಗ ಸೀರಿಯಸ್ ಆಗಿ ಅನಿರುದ್ಧ್ ಪಾತ್ರ ಮುಗಿದಿದೆ. ಆರ್ಯನಿಗೆ ಆಕ್ಸಿಡೆಂಟ್ ಆಗಿದೆ.
ಆರ್ಯನ ಪಾತ್ರಕ್ಕೆ ಹರೀಶ್ ರಾಜ್ ಬರುತ್ತಾರೆ ಎಂಬ ಮಾತಿತ್ತು. ಆದ್ರೆ ಹರೀಶ್ ರಾಜ್ ಧಾರವಾಹಿಗೆ ಎಂಟ್ರಿಯಾಗಿದ್ದಾರೆ. ಅದು ಆರ್ಯನ ಪಾತ್ರಕ್ಕಲ್ಲ, ಬದಲಿಗೆ ಅವನ ತಮ್ಮನಾಗಿ, ವಿಶ್ವಾಸ್ ದೇಸಾಯಿಯಾಗಿ. ಆರ್ಯನ ಹೆಸರು ಚಾಲ್ತಿಯಲ್ಲಿರಿಸಿಕೊಂಡೇ ಧಾರವಾಹಿಯ ಕಥೆಯನ್ನು ಬೇರೆ ರೀತಿ ಸಾಗಿಸಲು ನಿರ್ದೇಶಕರು, ನಿರ್ಮಾಪಕರು ನಿರ್ಧರಿಸಿದ್ದಾರೆ.