ಬೆಂಗಳೂರು: ನಟಿ ರಮ್ಯಾ ಇದೀಗ ರಾಜಕೀಯದಿಂದ ದೂರ ಸರಿದು ಮತ್ತೆ ಸಿನಿಮಾರಂಗಕ್ಕೆ ವಾಪಾಸ್ಸಾಗಿದ್ದಾರೆ. ಸಹಸ್ರಾರು ಮನಸ್ಸುಗಳಿಗೆ ಖುಷಿ ನೀಡಿದ್ದಾರೆ. ನಟಿಯಾಗದೆ ಹೋದರೂ ನಿರ್ಮಾಪಕಿಯಾಗಿ ಕಮ್ ಬ್ಯಾಕ್ ಆಗುತ್ತಿದ್ದಾರೆ. ಆಗಾಗ ಸಮಾಜದಲ್ಲಿ ನಡೆಯುವ ಘಟನೆಗಳಿಗೆ ಕ್ಲಾಸ್ ತೆಗೆದುಕೊಳ್ಳುವುದು ರಮ್ಯಾಗೆ ಗೊತ್ತು. ಇದೀಗ ಬೆಂಗಳೂರಿನಲ್ಲಿ ಮಳೆ ಅವಾಂತರ ಸೃಷ್ಟಿಯಾಗಿರುವ ವಿಚಾರದಲ್ಲಿ ಎಂಎಲ್ಎಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಮ್ಯಾ, ಎಲೆಕ್ಷನ್ ಗೆ ನಿಲ್ಲುವಾಗ ಇಂತಿಷ್ಟು ಲಿಮಿಟೇಷನ್ ಅನ್ನೋದು ಇರುತ್ತೆ. ಎಂಎಲ್ಎ ಚುನಾವಣೆಗೆ 40 ಲಕ್ಷ ಮಾತ್ರ ಖರ್ಚು ಮಾಡಬೇಕು ಎಂದು ಚುನಾವಣಾ ಆಯೋಗ ತಿಳಿಸುತ್ತೆ. ಆದರೆ ಸ್ಪರ್ಧೆ ಮಾಡುವವರು ಕೋಟಿ ಕೋಟಿ ಸುರಿಯುತ್ತಾರೆ. ಪಕ್ಷಗಳು ಅಷ್ಟೇ ಹಣವಿರುವ ಅದರಲ್ಲೂ ರಿಯಲ್ ಎಸ್ಟೇಟ್ ನಡೆಸುವವರಿಗೆ ಯಾಕೆ ಟಿಕೆಟ್ ನೀಡಬೇಕು ಎಂದು ಪ್ರಶ್ನಿಸಿದ್ದಾರೆ.
And btw these 26 MLA’s into real estate are ‘elected’- It was ‘the people’s choice’. No point cribbing. So please vote (firstly) & vote wisely. Most people don’t even vote especially urban & then when this happens there’s fury. We are all to be blamed for the state we are in.
— Ramya/Divya Spandana (@divyaspandana) September 6, 2022
ಇನ್ನು ಬೆಂಗಳೂರಿನಲ್ಲಿ 28 ಎಂಎಲ್ಎ ಗಳಿದ್ದಾರೆ. ಅದರಲ್ಲಿ 26 ಎಂಎಲ್ಎ ಗಳು ರಿಯಲ್ ಎಸ್ಟೇಟ್ ಮಾಡುತ್ತಿದ್ದಾರೆ. ಹೀಗಿರುವಾಗ ಇಂಥ ಸ್ಥಿತಿಯಲ್ಲಿರುವ ಬೆಂಗಳೂರನ್ನು ಕಾಪಾಡುವವರು ಯಾರು..? ಚುನಾವಣಾ ಸಮಯದಲ್ಲಿ ಜನ ಕೂಡ ಯೋಚಿಸಿ ಮತ ಹಾಕಬೇಕು. ನಗೆದಲ್ಲಿರುವವರೇ ಮತ ಹಾಕುವುದಿಲ್ಲ ಎಂದು ಗರಂ ಆಗಿದ್ದಾರೆ.