ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ,ಸುದ್ದಿಒನ್, (ಆ.29): ನಗರದ ಆನೆಬಾಗಿಲು ಬಳಿಯಿರುವ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಪ್ರಸನ್ನ ಗಣಪತಿ ಸೇವಾ ಸಮಿತಿ ವತಿಯಿಂದ 65 ನೇ ವರ್ಷದ ಪ್ರಸನ್ನ ಗಣಪತಿಯನ್ನು ಆ.31 ರಂದು ಪ್ರತಿಷ್ಠಾಪಿಸಿ ಸೆ.10 ರವರೆಗೆ ಪ್ರತಿನಿತ್ಯವು ಪೂಜೆ ನೆರವೇರಿಸಲಾಗುವುದು.
ಶಿವಮೊಗ್ಗದ ಶಿಲ್ಪಿ ವಿ.ರಾಮಕೃಷ್ಣ, ವಿ.ಪಾಂಡುರಂಗ ಇವರುಗಳು ಸುಂದರವಾಗಿ ನಿರ್ಮಿಸಿರುವ ಸಿಂಹದ ಮೇಲೆ ವಿರಾಜಮಾನವಾಗಿರುವ ಗಣಪತಿಯನ್ನು ಚಿತ್ತಾಕರ್ಷಕ ಪೆಂಡಾಲ್‍ನಲ್ಲಿ ಕೂರಿಸಲಾಗುವುದು.
ಪ್ರತಿದಿನ ಬೆಳಿಗ್ಗೆ 11-30 ಕ್ಕೆ ಗಣಪತಿಯ ಪ್ರೀತ್ಯರ್ಥವಾಗಿ ನವಗ್ರಹ ಪೂಜೆ, ಸಹಸ್ರನಾಮ, ಕುಂಕುಮಾರ್ಚನೆ, ಮಹಾಮಂಗಳಾರತಿ ನಂತರ ತೀರ್ಥ ಪ್ರಸಾದ ವಿನಿಯೋಗವಿರುತ್ತದೆ. ಸಂಜೆ ಏಳು ಗಂಟೆಯಿಂದ ಸುಪ್ರಸಿದ್ದ ವಿದ್ವಾಂಸರುಗಳಿಂದ ಸಂಗೀತ, ವಾದ್ಯಗೋಷ್ಟಿ, ಭರತನಾಟ್ಯ ಪ್ರದರ್ಶನವಿರುತ್ತದೆ.
ಸೆ.1 ರಂದು ದಾವಣಗೆರೆಯ ನಾಟ್ಯ ಭಾರತಿ ಶಾಸ್ತ್ರೀಯ ನೃತ್ಯ ಮತ್ತು ಸಂಗೀತ ಕಲಾ ಕೇಂದ್ರದ ವಿದ್ಯಾರ್ಥಿಗಳಿಂದ ಭರತನಾಟ್ಯ ಹಾಗೂ ಕರ್ನಾಟಕ ಸಂಗೀತ.
2 ರಂದು ಚಿತ್ರದುರ್ಗದ ವಲ್ಲಭಾ ಕಲಾ ತಂಡದಿಂದ ಚಲನಚಿತ್ರಗೀತೆಗಳ ಗಾಯನ ಹಾಗೂ ಝಡ್-ಟಿವಿ ಕಲಾವಿದರಿಂದ ನೃತ್ಯ ಕಾರ್ಯಕ್ರಮ.
ಸೆ.3 ರಂದು ವಾಸವಿ ವಿದ್ಯಾಸಂಸ್ಥೆ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮವಿರುತ್ತದೆ.
ಸೆ.4 ರಂದು ಲಾಸಿಕಾ ಫೌಂಡೇಷನ್ ಚಿತ್ರದುರ್ಗದ ವಿಧುಷಿ ಶ್ವೇತ ಮಂಜುನಾಥ್ ಮತ್ತು ತಂಡದವರಿಂದ ನೃತ್ಯ ಸಂಭ್ರಮ.
ಸೆ.5 ರಂದು ಶಾರದಾ ಮೆಲೋಡಿಸ್ ಚಿತ್ರದುರ್ಗ ಇವರಿಂದ ಕನ್ನಡ, ಹಿಂದಿ, ತೆಲುಗು ಗೀತೆಗಳ ಗಾಯನ.
ಸೆ. 6 ರಂದು ತೀರ್ಥಹಳ್ಳಿಯ ಸುಬ್ರಮಣ್ಯ ದೂರದರ್ಶನ ಹಾಗೂ ನಿಶ್ಚಲ್ ದೂರದರ್ಶನ ಕಲಾವಿದರಿಂದ ಸ್ಯಾಕ್ಸೋಫೋನ್ ವಾದನ ಮತ್ತು ಮಾತನಾಡುವ ಗೊಂಬೆ ಮಿಮಿಕ್ರಿ ಹಾಗೂ ಜಾದೂ ಕಾರ್ಯಕ್ರಮ ಪ್ರದರ್ಶನಗೊಳ್ಳಲಿದೆ.
ಸೆ. 7 ರಂದು ಕುಂದಾಪುರದ ರೂಪಕಲಾ(ಕುಳ್ಳಪ್ಪು) ಸತೀಶ್‍ಪೈ ನಿರ್ದೇಶನದ ಅಂತರಾಷ್ಟ್ರೀಯ ಖ್ಯಾತಿಯ ಮೂರು ಮುತ್ತು ಕನ್ನಡ ಹಾಸ್ಯಮಯ ನಾಟಕ 2200 ನೇ ಪ್ರದರ್ಶನ.
ಸೆ. 8 ರಂದು ಚಿತ್ರದುರ್ಗದ ಅಂತರಾಷ್ಟ್ರೀಯ ಪ್ರಖ್ಯಾತಿ ಕಿತ್ತೂರುರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ಪುರಸ್ಕøತರು ಶ್ರೀಮತಿ ನಂದಿನಿ ಶಿವಪ್ರಕಾಶ್ ಮತ್ತು ತಂಡ ಅಂಜನಾ ನೃತ್ಯ ಕಲಾ ಕೇಂದ್ರದಿಂದ ಭರತನಾಟ್ಯ ನೃತ್ಯ ವೈವಿದ್ಯಮಯ.
ಸೆ. 9 ರಂದು ಸಂಜೆ 6-30 ಕ್ಕೆ ಮಹಾಮಂಗಳಾರತಿ ನಂತರ ಶ್ರೀ ಶಾರದಾ ಬ್ರಾಸ್ ಬ್ಯಾಂಡ್ ವಾದ್ಯಗೋಷ್ಟಿಯೊಂದಿಗೆ ಪ್ರಸನ್ನ ಗಣಪತಿಯ ಉತ್ಸವ ನಗರದ ಪ್ರಮುಖ ಬೀದಿಗಳಲ್ಲಿ ಸಾಗಲಿದೆ.
ಸೆ. 10 ರಂದು ಮಧ್ಯಾಹ್ನ 12 ಗಂಟೆಗೆ ಚಂದ್ರವಳ್ಳಿಯಲ್ಲಿ ಪ್ರಸನ್ನ ಗಣಪತಿಯನ್ನು ವಿಸರ್ಜಿಸಲಾಗುವುದು.
ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರಸನ್ನ ಗಣಪತಿಯ ಕೃಪೆಗೆ ಪಾತ್ರರಾಗುವಂತೆ ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿಯ ಅಧ್ಯಕ್ಷ ಗೋಪಾಲ್‍ರಾವ್ ಜಾದವ್, ಉಪಾಧ್ಯಕ್ಷರುಗಳಾದ ಎಲ್.ಎನ್.ರಾಜ್‍ಕುಮಾರ್, ನಾಗರಾಜ್‍ಬೇದ್ರೆ, ಕಾರ್ಯದರ್ಶಿಗಳಾದ ಶಿವಕುಮಾರ್, ನಾರಾಯಣರಾವ್, ಖಜಾಂಚಿ ಆನಂದ್, ವೆಂಕಟೇಶ್ ಕೆ.ಎಸ್. ಶ್ಯಾಂ, ಗಜೇಂದ್ರ, ಸಿದ್ದೇಶ್, ಶಂಭು ಇವರುಗಳು ಮನವಿ ಮಾಡಿದ್ದಾರೆ.