Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಪರಿಸರ ರಕ್ಷಣೆ ಮಾಡುವುದು ನಮ್ಮೆಲ್ಲರ ಹೊಣೆ : ಶ್ರೀಅಹೋಬಲ ಟವಿಎಸ್ ಮಾಲೀಕ ಪಿ.ವಿ.ಅರುಣ್

Facebook
Twitter
Telegram
WhatsApp

ಚಿತ್ರದುರ್ಗ : ಪ್ರತಿಯೊಬ್ಬ ವ್ಯಕ್ತಿಯು ನಾಡಿಗೋಸ್ಕರ  75 ಗಿಡಗಳನ್ನು  ಹಾಕುವ ಕೆಲಸ ಮಾಡಬೇಕಿದೆ ಎಂದು ಸಾಲು ಮರದ ತಿಮ್ಮಕ್ಕ ಅವರ ಮೊಮ್ಮಗ ಉಮೇಶ್ ಹೇಳಿದರು.

ನಗರದ ವಿದ್ಯಾನಗರದಲ್ಲಿ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಶ್ರೀ ಅಹೋಬಲ ಟಿವಿಎಸ್ ಹಾಗೂ ವಿದ್ಯಾನಗರ ಕ್ಷೇಮಾಭಿವೃದ್ಧಿ ಸಂಘದ ಸಂಯುಕ್ತಾಶ್ರಯದಲ್ಲಿ ಭಾನುವಾರ  ಆಯೋಜಿಸಿದ್ದ  ಸಸಿ ನೆಡುವ ಕಾರ್ಯಕ್ರಮವನ್ನು ವೃಕ್ಷ ಮಾತೇ ನಾಡೋಜ ಡಾ.ಸಾಲು ಮರದ ತಿಮ್ಮಕ್ಕ ಉದ್ಘಾಟಿಸಿದರು.

ಪ್ರಕೃತಿ ಜನರು ಬದುಕಲು ಗಾಳಿಯನ್ನು ಕೊಟ್ಟಿದೆ. ಕೋವಿಡ್ ಸಂದರ್ಭದಲ್ಲಿ ಗಾಳಿಗೋಸ್ಕರ ಎಷ್ಟೋ ಜನರು ಸಾವು ನೋವು ಅನುಭವಿಸಿದರು. ಆದರೆ ಜನರು ಇಷ್ಟಾದರೂ ಸ್ವಾರ್ಥ ಬದುಕನ್ನು ನಡೆಸುತ್ತಿರುವ ನಮ್ಮನ್ನು ಚಿಂತೆಗೆ  ಎಡೆ ಮಾಡಿಕೊಟ್ಟಿದೆ. ನಮ್ಮ ಪರಿಸರನ್ನು ಶುದ್ದವಾಗಿಟ್ಟಕೊಳ್ಳದೆ ಆನರೋಗ್ಯಕ್ಕೆ ಸಾವಿರಾರು ಜನರು ಸಂಕಷ್ಟಕ್ಕೆ  ಸಿಲುಕಿದ್ದಾರೆ.ಗಿಡಮರಗಳು ಮನುಷ್ಯನ ಆಯಸ್ಸನ್ನು ವೃದ್ದಿಗೊಳಿಸುತ್ತವೆ. ಸಾಲು ಮರದ ತಿಮ್ಮಕ್ಕನವರು ಬಡತನದಲ್ಲಿ  ಬದುಕು ನಡೆಸಿದರು. ಗಂಡನು ಸಹ ಕೂಲಿಗೆ ಕೆಲಸ ಮಾಡುತ್ತಿದ್ದರು‌. ಮದುವೆಯಾಗಿ 25 ವರ್ಷಗಳು ಕಳೆದರು ಸಹ ಮಕ್ಕಳಾಗಲಿಲ್ಲ.ಆದರೆ ಗಿಡಗಳೇ ನಮ್ಮ ಮಕ್ಕಳು ಎಂಬ ತತ್ವವನ್ನು ಇಟ್ಟುಕೊಂಡು ರಸ್ತೆಯ ಪಕ್ಕದ ಗಿಡಗಳನ್ನು ನೆಟ್ಟು  ನೀರನ್ನು ಹೊತ್ತಯ್ದ ಕೀರ್ತಿ ಸಾಲು ಮರದ ತಿಮ್ಮಕ್ಕ ಅವರಿಗೆ ಸಲ್ಲುತ್ತದೆ. ಅವರ ಮಾರ್ಗದರ್ಶನದಲ್ಲಿ ಯುವ ಸಮೂಹ ಗಿಡಗಳನ್ನು ನೆಟ್ಟು ಈ ನಾಡನ್ನು ಕಾಪಡಬೇಕಿದೆ ಎಂದು ಮನವಿ ಮಾಡಿದರು.

ಶ್ರೀಅಹೋಬಲ ಟಿವಿಎಸ್ ಕಂಪನಿಯವರು 275 ಗಿಡಗಳನ್ನು  ಹಾಕುತ್ತಿರುವುದು ಉತ್ತಮ ಕಾರ್ಯವಾಗಿದೆ. ಇಂತಹ ಉತ್ತಮ ಸಾಮಾಜಿಕ ಕಾರ್ಯಗಳನ್ನು ಆಹೋಬಕ ಟಿವಿಎಸ್ ಮಾಡಲಿ ಎಂದು ಶುಭ ಹಾರೈಸಿದರು.

ವಿದ್ಯಾನಗರ ಶ್ರೇಮಾಭಿವೃದ್ದಿ ಸಂಘದ ಅಧ್ಯಕ್ಷ ಪ್ರತಾಪ್ ರೆಡ್ಡಿ ಮಾತನಾಡಿ ನಾವು ಹುಡುಕಿಕೊಂಡು ಹೋದರು ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಸಿಗುವುದಿಲ್ಲ. ಆದರೆ ಅವರು ನಮ್ಮ ವಿದ್ಯಾನಗರಕ್ಕೆ ಬಂದಿರುವುದು ನಮ್ಮ ಸೌಭಾಗ್ಯ ಎಂದರು. ವಿದ್ಯಾನಗರದಲ್ಲಿ ಗಿಡವನ್ನು ನೆಡುವುದು ಅಷ್ಟೆ ಅಲ್ಲ ಪೋಷಿಸುವ ಕೆಲಸವನ್ನು ಎಲ್ಲಾರೂ ಮಾಡುತ್ತೇವೆ. ನಮ್ಮ ಸುತ್ತಮುತ್ತಲಿನ ಪರಿಸರ ಶುದ್ದವಾಗಿರಲು ಗಿಡ ಮರ ಅಗತ್ಯತೆ ಹೆಚ್ಚಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು‌.

ಶ್ರೀಅಹೋಬಲ ಟವಿಎಸ್ ಮಾಲೀಕ ಪಿ.ವಿ.ಅರುಣ್ ಮಾತನಾಡಿ ಪರಿಸರ ರಕ್ಷಣೆ ಮಾಡುವುದು ನಮ್ಮೆಲ್ಲರ ಹೊಣೆಯಾಗಿದೆ. ಗಿಡ ಮರಗಳನ್ನು ಕಾಪಡುವುದರಿಂದ ನಮ್ಮ ಆರೋಗ್ಯ ಚನ್ನಾಗಿರುತ್ತದೆ.ತಮ್ಮ ಮನೆಯ ಅಕ್ಕ-ಪಕ್ಕದಲ್ಲಿ ಗಿಡಮರಗಳನ್ನು ಬೆಳೆಸಿದರೆ ಉತ್ತಮ ಗಾಳಿಗೆ ಸಹಕಾರಿಯಗಾಲಿದೆ. ಗಿಡಮರಗಳು ನಗರದ  ಸೌಂದರ್ಯ ಹೆಚ್ಚಿಸುವ ಕೆಲಸವನ್ನು ಮಾಡುತ್ತದೆ. ಪ್ರತಿಯೊಬ್ಬರು ತಮ್ಮ ಕೈಲಾದಷ್ಟು ಗಿಡಗಳನ್ನು ನೆಡುವ ಕೆಲಸವನ್ನು ಮಾಡಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ವಿದ್ಯಾನಗರ ಸಂಘ ಕಾರ್ಯದರ್ಶಿ ಗಾಯಿತ್ರಿ ಶಿವರಾಂ  ,ನಗರಸಭೆ ಸದಸ್ಯ ಸುರೇಶ್, ಗ್ರಾಮ ಪಂಚಾಯತಿ ಸದಸ್ಯ ಆರ್‌.ನಿರಂಜನ್ , ರಮೇಶ್ ಮೋತ್ಕೂರ್, ಸುಲೋಚನ ಎಂ.ಸಿ.ಶಂಕರ್, ವನಜಾಕ್ಷಿ ಅನಂತ್ ರಾಜ್,  ಮತ್ತು ವಿದ್ಯಾನಗರ  ಸಾರ್ವಜನಿಕರು ಹಾಜರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಇಂದಿನಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭ : ವಕ್ಫ್-ಮಣಿಪುರ ಹಿಂಸಾಚಾರ ಸೇರಿದಂತೆ ಹಲವು ವಿಚಾರಗಳ ಚರ್ಚೆ…!

  ಸುದ್ದಿಒನ್ | ಸಂಸತ್ತಿನ ಚಳಿಗಾಲದ ಅಧಿವೇಶನ ಇಂದಿನಿಂದ (ಸೋಮವಾರ, ನವೆಂಬರ್ 25) ಆರಂಭವಾಗಲಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಹಾ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಮರಳಿರುವುದು ಮತ್ತು ಜಾರ್ಖಂಡ್‌ನಲ್ಲಿ ಇಂಡಿಯಾ ಮೈತ್ರಿಕೂಟದ ಪಕ್ಷದ ಗೆಲುವು

ರಾಶಿಯವರ ಹಣಕಾಸಿನ ಸಮಸ್ಯೆಯಿಂದಾಗಿ ನೆಮ್ಮದಿಗೆ ಭಂಗ

ರಾಶಿಯವರ ಹಣಕಾಸಿನ ಸಮಸ್ಯೆಯಿಂದಾಗಿ ನೆಮ್ಮದಿಗೆ ಭಂಗ : ಈ ರಾಶಿಯವರ ಕುಟುಂಬದಲ್ಲಿ ಒಬ್ಬರಿಂದ ಅಶಾಂತಿಯ ವಾತಾವರಣ: ಸೋಮವಾರ ರಾಶಿ ಭವಿಷ್ಯ -ನವೆಂಬರ್-25,2024 ಸೂರ್ಯೋದಯ: 06:30, ಸೂರ್ಯಾಸ್ತ : 05:35 ಶಾಲಿವಾಹನ ಶಕೆ -1946 ಸಂವತ್-2080

ಚಿತ್ರದುರ್ಗ | ಬಾಪೂಜಿ ವಿದ್ಯಾಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ : ವಕೀಲರಿಗೆ ಸನ್ಮಾನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 24 : ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ, ಬಾಪೂಜಿ ಸಮೂಹ ಸಂಸ್ಥೆಗಳು, ರಂಗಸೌರಭ ಕಲಾ ಸಂಘ ಹಾಗೂ ಶ್ರೀ ಶಿವಕುಮಾರ ಕಲಾ ಸಂಘ ಇವರ ಸಂಯುಕ್ತ

error: Content is protected !!