ಬೆಂಗಳೂರು: ಕೊರೊನಾ ಸೋಂಕಿನಿಂದ ಕಳೆದ ಎರಡು ವರ್ಷದಿಂದ ಗಣೇಶ ಹಬ್ಬ ಆಚರಿಸಲು ಆಗಿರಲಿಲ್ಲ. ಹಬ್ಬ ಹತ್ತಿರವಾದಂತೆ ಎಲ್ಲರಲ್ಲೂ ಸಂಭ್ರಮ ಮನೆ ಮಾಡಿದೆ. ಆದರೆ ಈ ನಡುವೆ ಗಣೇಶ ಹಬ್ಬದ ರೂಲ್ಸ್ ನಿಂದಾಗಿ ರೇಣುಕಾಚಾರ್ಯ ಗುಡುಗಿದ್ದಾರೆ. ತಮ್ಮದೆ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಈ ಬಾರಿ ನಗರದಲ್ಲಿ ಚಾಮರಾಜಪೇಟೆಯಲ್ಲಿರು ಈದ್ಗಾ ಮೈದಾನ ಎಂದೇ ಖ್ಯಾತವಾಗಿರುವ ಗ್ರೌಂಡ್ ನಲ್ಲಿ ಗಣೇಶ ಹಬ್ಬವನ್ನು ಮಾಡಬೇಕೆಂದು ಫ್ಲ್ಯಾನ್ ನಡೆದಿದೆ. ಇದೆ ವಿಚಾರವಾವಿ ರೇಣುಕಾಚಾರ್ಯ ಮಾತನಾಡಿದ್ದು, ನಾವೇನು ಪಾಕಿಸ್ತಾನಕ್ಕೆ ಹೋಗಿ ಹಬ್ಬ ಮಾಡುತ್ತಿಲ್ಲ ಎಂದಿದ್ದಾರೆ.
ಗಣೇಶ ಹಬ್ಬಕ್ಕೆ ಕಂದಾಯ ಇಲಾಖೆ ಅನಗತ್ಯ ರೂಲ್ಸ್ ಹಾಕಿದೆ. ಇದು ಸರಿಯಲ್ಲ. ಸಿಎಂ ಹಾಗೂ ಕಂದಾಯ ಸಚಿವರ ಜೊತೆಗೆ ನಾನು ಮಾತನಾಡುತ್ತೇನೆ. ಬಾಲಗಮನಗಾಧರನಾಥರು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ತಂದ ಆಚರಣೆ ಇದಾಗಿದೆ. ಬ್ರಿಟಿಷ್ ಕಾಲದಿಂದಲೂ ಆಚರಣೆಯಾಗುತ್ತಿದೆ. ಈಗ ಯಾಕೆ ಮಾಡಬಾರದು. ಚಾಮರಾಜಪೇಟೆ ಜಮೀನು ಜಮೀರ್ ಅವರ ಅಪ್ಪನದ್ದಲ್ಲ. ಕಂದಾಯ ಇಲಾಖೆಯದ್ದು ಗಣೇಶೋತ್ಸವ ಮಾಡಲು ಯಾಕೆ ನೀಡಲ್ಲ. ಪಾಕಿಸ್ತಾನಕ್ಕೆ ಹೋಗಿ ನಾವೂ ಹಬ್ಬ ಮಾಡ್ತಿಲ್ಲ. ಇಲ್ಲಿ ಮಾಡುತ್ತಾ ಇರೋದು ಎಂದು ಗರಂ ಆಗಿದ್ದಾರೆ.