ಬೆಂಗಳೂರು: ಕೊಡಗಿನಲ್ಲಿ ನಡೆದ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಸ್ಪಿ ನೆಪ ಅಷ್ಟೇ, ಸರ್ಕಾರಿ ಪ್ರಾಯೋಜಿನ ಪ್ರತಿಭಟನೆ ಅದು ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಒಂದು ಕಡೆ ಅಲ್ಲ ಎರಡು ಕಡೆ ಅಲ್ಲ ಕಪ್ಪು ಬಾವುಟವನ್ನು ಎಲ್ಲಾ ಕಡೆ ತೋರಿಸಿದ್ದಾರೆ ಎಂದರೆ ಏನು ಅರ್ಥ. ಹಾಗಾದ್ರೆ ಸರ್ಕಾರಕ್ಕೆ ಇಂಟೆಲಿಜೆನ್ಸ್ ನಿಂದ ಮಾಹಿತಿ ನೀಡಿರಲಿಲ್ಲವಾ..?. ಪಾರ್ಟಿಗೆ ಈ ಬಗ್ಗೆ ಗೊತ್ತಿರಲಿಲ್ಲ. ಹಾಗಾದ್ರೆ ಕಾರ್ಯಕರ್ತರಿಗೆ ಹೇಳದೇನೆ ಅವರೆ ಪ್ರತಿಭಟನೆ ನಡೆಸಿದರಾ..? ಎಂದು ಪ್ರಶ್ನಿಸಿದ್ದಾರೆ.
ಎಲ್ಲಾ ಕಡೆ ಕಾರ್ಯಕ್ರಮ ಮಾಡೋದಕ್ಕೆ ಹೊರಟಿದ್ದೀರಿ. ನಮ್ಮ ಕಾರ್ಯಕರ್ತರು ರೊಚ್ಚಿಗೆದ್ದರೆ ಏನಾಗುತ್ತೆ. ನಮ್ಮ ಕಾರ್ಯಕರ್ತರು ರೊಚ್ಚಿಗೆದ್ದರೆ ಪರಿಸ್ಥಿತಿ ಏನಾಗುತ್ತೆ ಗೊತ್ತಾ..? ಮಂತ್ರಿಗಳು ಹೋಗ್ತಾರೆ ಅಲ್ಲಿ ನಮ್ಮವರು ಪ್ರತಿಭಟಿಸಿದರೆ..? ಎಲ್ಲಾ ಕಡೆ 500 ಜನ ಹೋದರೆ ಏನಾಗುತ್ತೆ ಪರಿಸ್ಥಿತಿ. ರಾಜಕೀಯ ಪರ್ಮನೆಂಟ್ ಅಲ್ಲ. ಎಂಥವರೆ ಹೋದರು ಅಧಿಕಾರಿಗಳು ಇರ್ತಾರೆ ಟ್ರಾನ್ಸ್ಫರ್ ಆಗಿ ಹೋಗುತ್ತಾರೆ. ಚಕ್ರವರ್ತಿಗಳೇ ಕೆಳಗೆ ಬಿದ್ದಿದ್ದಾರೆ. ನಾವೂ ಬಯಸುವುದು ಇಡೀ ರಾಜ್ಯದಲ್ಲಿ ಶಾಂತಿ ನೆಲೆಸಲಿ ಎಂಬುದು. ಗಾಂಧಿ ಅವರ ತತ್ವ ಪಾಲಿಸುತ್ತೇವೆ ಎಂದಿದ್ದಾರೆ.