Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮಾನವೀಯ ನೆಲೆಗಟ್ಟಿನಲ್ಲಿ ಸೇವೆ ಸಲ್ಲಿಸಿದ ಮಹನೀಯ ಆತ್ಮೂರಿ ಲಕ್ಷ್ಮೀನರಸಿಂಹ ಸೋಮಯಾಜಿ :  ಪ್ರೊ. ಟಿ.ವಿ. ಸುರೇಶಗುಪ್ತ

Facebook
Twitter
Telegram
WhatsApp

ಚಿತ್ರದುರ್ಗ : (ಆ.20) : ಮದ್ಯಪಾನ ನಿಷೇಧ, ವಿಧವಾ ವಿವಾಹ ಮೊದಲಾದ ಸಾಮಾಜಿಕ ಪಿಡುಗುಗಳನ್ನು ನಿವಾರಿಸಲು ಶತಮಾನದಿಂದಾಚೆಯೇ ಯತ್ನಿಸಿ, ನೆರೆಹಾವಳಿ ಬಂದಾಗ ಮಾನವೀಯ ನೆಲೆಗಟ್ಟಿನಲ್ಲಿ ಕಂಕಣಬದ್ಧರಾಗಿ ಸೇವೆ ಸಲ್ಲಿಸಿದ, ನ್ಯಾಯ ನಿಷ್ಠುರತೆಗೆ ಹೆಸರಾದ ಮಹನೀಯರೆಂದರೆ ಆತ್ಮೂರಿ ಲಕ್ಷ್ಮೀನರಸಿಂಹ ಸೋಮಯಾಜಿಗಳವರು ಎಂದು ಪ್ರೊ. ಟಿ.ವಿ. ಸುರೇಶಗುಪ್ತ ಹೇಳಿದರು.

ನಗರದ ಶ್ರೀ ಕನ್ಯಕಾಪರಮೇಶ್ವರಿ ದೇವಾಲಯದಲ್ಲಿ ಆರ್ಯವೈಶ್ಯಸಂಘ ಹಾಗೂ ವಾಸವಿ ಯುವಜನ ಸಂಘದ ವತಿಯಿಂದ ಸೋಮಯಾಜಿಗಳವರ 178ನೇ ಜನ್ಮ ದಿನ ಕುರಿತು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು.

ಆತ್ಮಗೌರವ, ಸ್ವಾಭಿಮಾನ, ಧಾರ್ಮಿಕ ಸ್ವಾವಲಂಬನೆ ಎಂಬ ಮಂತ್ರಗಳ ಅನುಷ್ಠಾನವನ್ನು ಮಾಡಬೇಕೆಂದು ಕೆಲವೊಮ್ಮೆ ಚ್ಯುತಿ ಬಂದಾಗ ಪ್ರತಿಭಟನೆ ಮಾಡಲೂ ಪ್ರತಿಪಾದಿಸಿದ್ದ ಅವರು ಜಿಲ್ಲಾ ಮುನ್ಸೀಫರಾಗಿದ್ದ ಸೇವೆ ಸಲ್ಲಿಸುತ್ತಿದ್ದ ಅವಧಿಯಲ್ಲಿ ನ್ಯಾಯಪರತೆಗೆ ಹೆಸರಾಗಿದ್ದರು. ತಮ್ಮ ಕಕ್ಷೆದಾರರಲ್ಲಿರಬಹುದಾದ ಈ ಗುಣವನ್ನು ಅರಿತೇ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಹೆಸರಾಗಿದ್ದರು.

ಕುಲಾಭಿಮಾನಕ್ಕೆ ಧಕ್ಕೆ ಒದಗಿದಾಗ ದಿಟ್ಟ ಹೋರಾಟ ಮಾಡಿ ನ್ಯಾಯಾಲಯದಲ್ಲಿಯೂ ಮೊಕದ್ದಮೆ ಹೂಡಿ ಜಯಶೀಲರಾಗಿದ್ದ ಅನೇಕ ನಿದರ್ಶನಗಳನ್ನು ವಿವರಿಸಿದರು. ಜೊತೆಗೆ ಮೈಸೂರು ಅರಸರ ವಿದೇಶ ಯಾತ್ರೆಗೆ ಅಡ್ಡಗೋಡೆ ತಂದಿಟ್ಟ ಖೊಟ್ಟಿ ಸಂಪ್ರದಾಯವಾದಿಗಳಿಗೆ, ಶಾಸ್ತ್ರಾಧಾರದೊಂದಿಗೆ ತಿಳಿವಳಿಕೆ ನೀಡಿದುದಲ್ಲದೆ ಅರಸರ ವಿದೇಶಯಾತ್ರೆ ಸಮುದ್ರಯಾನದ ಮೂಲಕ ಸಾಂಗವಾಗಿ ನೆರವೇರುವಂತೆ ಪ್ರಯತ್ನಿಸಿದರು ಎಂದು ವಿವರಿಸಿ ಆ ಮಹಾನುಭಾವರ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿ ಧನ್ಯಭಾವ ಪಡೆದೆನೆಂದು ಹೇಳಿದರು.

ಆರಂಭದಲ್ಲಿ ಪ್ರಾಸ್ತಾವಿಕವಾಗಿ ಕರ್ನಾಟಕ ಆರ್ಯವೈಶ್ಯ ಮಹಾಸಭಾ ನಿರ್ದೇಶಕರಾದ ಎಲ್.ಆರ್.ವೆಂಕಟೇಶ್‍ಕುಮಾರ್ ಅವರು ಮಾತನಾಡಿ ಸೋಮಯಾಜಿಗಳವರ ಜಯಂತಿ ಆಚರಣೆ ಕುರಿತು ಮಹತ್ವ ವಿವರಿಸಿದರು. ಸೋಮಯಾಜಿಗಳವರ ಭಾವಚಿತ್ರಕ್ಕೆ ಪುಷ್ಪ ನಮನದ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಆರ್ಯ ವೈಶ್ಯ ಸಂಘದ ಅಧ್ಯಕ್ಷರಾದ ಎಲ್.ಇ. ಶ್ರೀನಿವಾಸ ಬಾಬುರವು ಮಹಾಪುರುಷರ ಜಯಂತಿಯ ಆಚರಣೆ ಮೂಲಕ ಅವರ ಆದರ್ಶಗಳು, ಬದುಕಿನ ಪರಿಯು ಯುವ ಪೀಳಿಗೆಗೆ ಮಾರ್ಗದರ್ಶಕವಾಗಲಿ ಎಂದು ಆಶಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಾಸವಿ ಯುವಜನ ಸಂಘದ ಅಧ್ಯಕ್ಷ ಡಿ.ಪಿ. ವಿನಯ್ ವಹಿಸಿದ್ದು, ಆರ್ಯವೈಶ್ಯ ಸಂಘದ ಪ್ರಧಾನ ಕಾರ್ಯದರ್ಶಿ ಎಸ್. ನಾಗರಾಜ್ ಅವರು ಸರ್ವರನ್ನು ಸ್ವಾಗತಿಸಿದರು. ಎಲ್.ಎ. ಅವಿನಾಶ್ ವಂದಿಸಿದರು. ಸರ್ವದ ಸುರೇಶ್‍ಗುಪ್ತ ಅವರು ಪ್ರಾರ್ಥನೆ ಮಾಡಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

Cold Water Side Effects : ಬೇಸಿಗೆಯಲ್ಲಿ ಫ್ರಿಡ್ಜ್ ನಲ್ಲಿರುವ ತಣ್ಣೀರು ಕುಡಿದರೆ ಎಷ್ಟೆಲ್ಲಾ ಸಮಸ್ಯೆ ಗೊತ್ತಾ ?

  ಸುದ್ದಿಒನ್ : ಈ ಬೇಸಿಗೆಯ ತಾಪವನ್ನು ನಿವಾರಿಸಲು ತಣ್ಣೀರಿಗಿಂತ ಉತ್ತಮ ಪರ್ಯಾಯವಿಲ್ಲ. ಅದಕ್ಕಾಗಿಯೇ ನಮ್ಮಲ್ಲಿ ಹೆಚ್ಚಿನವರು ಬಿಸಿಲಿನಿಂದ ಮನೆಗೆ ಬಂದ ತಕ್ಷಣ ರೆಫ್ರಿಜರೇಟರ್‌ನಿಂದ ತಣ್ಣೀರು ಕುಡಿಯುವ ಅಭ್ಯಾಸವನ್ನು ಹೊಂದಿರುತ್ತಾರೆ. ಆದರೆ ಈ ರೀತಿ

ಈ ರಾಶಿಯ ಪದವಿ ಪಡೆದವರು ಉನ್ನತ ಶ್ರೇಣಿಯ ಉದ್ಯೋಗ ಪ್ರಾಪ್ತಿ

ಈ ರಾಶಿಯ ಜನಪ್ರತಿನಿಧಿಗಳಿಗೆ ಆತ್ಮೀಯರಿಂದ ಕಂಟಕ, ಈ ರಾಶಿಯ ಪದವಿ ಪಡೆದವರು ಉನ್ನತ ಶ್ರೇಣಿಯ ಉದ್ಯೋಗ ಪ್ರಾಪ್ತಿ, ಈ ರಾಶಿಯ ವಿವಾಹಿತ ಜೀವನವು ಸಂತೋಷವಾಗಿ ಕಾಣುತ್ತದೆ, ಶುಕ್ರವಾರ-ರಾಶಿ ಭವಿಷ್ಯ ಮೇ-3,2024 ಸೂರ್ಯೋದಯ: 05:52, ಸೂರ್ಯಾಸ್ತ

ಸಾಹಿತಿ ಬಿ.ಎಲ್.ವೇಣು ನಿವಾಸಕ್ಕೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭೇಟಿ

ಸುದ್ದಿಒನ್, ಚಿತ್ರದುರ್ಗ, ಮೇ. 02 :  ಖ್ಯಾತ ಸಾಹಿತಿ, ಚಿಂತಕ ಬಿ.ಎಲ್.ವೇಣು ಅವರ ನಿವಾಸಕ್ಕೆ ಸ್ಥಳೀಯ ಶಾಸಕ ಕೆ.ಸಿ.ವೀರೆಂದ್ರ ಪಪ್ಪಿ ಅವರು ಭೇಟಿ ಮಾಡಿ, ಆಶೀರ್ವಾದ ಪಡೆದು, ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಲಹೆಗಳನ್ನು ಪಡೆದರು.

error: Content is protected !!