ವರದಿ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 7899864552
ಚಿತ್ರದುರ್ಗ, ಸುದ್ದಿಒನ್,: ಶ್ರೀ ರಾಘವೇಂದ್ರ ಗುರುಸಾರ್ವಭೌಮರ 351 ನೇ ಆರಾಧನಾ ಪಂಚರಾತ್ರೋತ್ಸವ ಆ.12 ರಿಂದ 14 ರವರೆಗೆ ಇಲ್ಲಿನ ಶ್ರೀ ರಾಘವೇಂದ್ರಸ್ವಾಮಿಗಳವರ ಬೃಂದಾವನ ಸನ್ನಿಧಾನದಲ್ಲಿ ನಡೆಯಲಿದೆ.
12 ರಂದು ಪೂರ್ವಾರಾಧನೆ ದಿಂಡಿನ ಅಲಂಕಾರ, 13 ರಂದು ಗುರುಸಾರ್ವಭೌಮ ಮಧ್ಯಾರಾದನೆ(ಹೂವಿನ ಅಲಂಕಾರ) 14 ರಂದು ಗುರುಸಾರ್ವಭೌಮ ಉತ್ತರಾರಾಧನೆ(ಹಣ್ಣಿನ ಅಲಂಕಾರ) 15 ರಂದು ಸುಜ್ಞಾನೇಂದ್ರ ತೀರ್ಥರ ಆರಾಧನೆ ನೆರವೇರಲಿದೆ.
ಬೆಳಿಗ್ಗೆ 5-30 ರಿಂದ ನಿರ್ಮಲ ಅಭಿಷೇಕ, ಎಂಟು ಗಂಟೆಗೆ ಅಷ್ಟೋತ್ತರ ಸಹಿತ ಫಲ ಪಂಚಾಮೃತ ಅಭಿಷೇಕ ನಂತರ 9 ಕ್ಕೆ ಪಾದಪೂಜೆ, ಕನಕಾಭಿಷೇಕ, ವಿವಿಧ ವಿದ್ವಾಂಸರುಗಳಿಂದ ಪ್ರವಚನ, 11-30 ಕ್ಕೆ ನೈವೇದ್ಯ ಬ್ರಾಹ್ಮಣರ ಅಲಂಕಾರ ಪಂಕ್ತಿ, ಹಸ್ತೋದಕ, ಮಹಾಮಂಗಳಾರತಿ ನಂತರ ತೀರ್ಥಪ್ರಸಾದ.
ಸಂಜೆ 4-30 ರಿಂದ ವಿವಿಧ ಭಜನಾ ಮಂಡಳಿಗಳಿಂದ ಭಜನೆ. 5-30 ರಿಂದ ಸಾಂಸ್ಕøತಿಕ ಕಾರ್ಯಕ್ರಮ. ಸಂಜೆ 7-30 ರಿಂದ ಪ್ರಾಕಾರದ ರಜತ ರಥೋತ್ಸವಾದಿಗಳು ನಾಲ್ಕು ದಿನಗಳ ಕಾಲ ಸಾಂಗ್ಯವಾಗಿ ಜರುಗಲಿದೆ.
14 ರಂದು ಬೆಳಿಗ್ಗೆ 11 ಕ್ಕೆ ಮಹಾರಥೋತ್ಸವ ಚಿತ್ರದುರ್ಗ ನಗರದ ರಾಜಬೀದಿಗಳಲ್ಲಿ ವಿಜೃಂಭಣೆಯಿಂದ ಸಾಗಲಿದೆ. ಮೂರು ದಿನಗಳ ಕಾಲ ಮಹಾ ಅನ್ನಸಂತರ್ಪಣೆಯಿರುತ್ತದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತನು, ಮನ, ಧನ, ಧಾನ್ಯ, ಕಾಣಿಕೆ ಮುಡುಪುಗಳನ್ನು ನೀಡಿ ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಕೃಪೆಗೆ ಪಾತ್ರರಾಗುವಂತೆ ಮಠದ ವ್ಯವಸ್ಥಾಪಕ ಉಡುಪಿ ಕೃಷ್ಣಾಚಾರ್ ವಿನಂತಿಸಿದ್ದಾರೆ.