ಮಂಗಳೂರು: ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಜಿಲ್ಲೆಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಈ ವುಚಾರವಾಗಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್, ಕಾರ್ಯಕರ್ತನ ಹತ್ಯೆ ಖಂಡಿಸಲು ನಿನ್ನೆ ನನ್ನ ಬಳಿ ಪದಗಳಿರಲಿಲ್ಲ ಎಂದಿದ್ದಾರೆ.
ಮನೆ ಮಗನನ್ನು ಕಳೆದುಕೊಂಡಿದ್ದೇವೆ. ಒಂದಂತೂ ಹೇಳಲು ಬಯಸುತ್ತೇನೆ, ಇದರ ಹಿಂದಿರುವ ಶಕ್ತಿಗಳನ್ನು ಮಟ್ಟಹಾಕಲು ಸನ್ನದ್ಧರಾಗಿದ್ದೇವೆ. ನಾವೂ ಸುಮ್ಮನೆ ಇರುವ ಪ್ರಶ್ನೆಯೆ ಇಲ್ಲ. ಸಿಎಂ ಹಾಗೂ ಗೃಹ ಮಂತ್ರಿಗೆ ಈ ಬಗ್ಗೆ ಮನವಿ ಮಾಡಿದ್ದೇವೆ. ಮತಾಂಧ ಶಕ್ತಿಗಳನ್ನು ಹತ್ತಿಕ್ಕುವ ಕೆಲಸವನ್ನು ಮಾಡಿಯೇ ಮಾಡುತ್ತೇವೆ. ಕಾನೂನಿನ ಚೌಕಟ್ಟಿನಲ್ಲಿಯೇ ಸರ್ಕಾರ ಕೂಡ ತಕ್ಕ ಉತ್ತರ ನೀಡಲಿದೆ.
ಹಂತಕರಿಗೆ ಯಾವ ರೀತಿಯ ಶಿಕ್ಷೆ ಕೊಡಬೇಕೋ ಆ ರೀತಿಯ ಶಿಕ್ಷೆ ಕೊಡಲಿದೆ. ಪೊಲೀಸ್ ಇಲಾಖೆಗೂ ಮುಕ್ತ ಅವಕಾಶ ಕೊಡುತ್ತೇವೆ. ಸಿಎಂ ಹಾಗೂ ಗೃಹ ಸಚಿವರ ಜೊತೆಯಲ್ಲಿದ್ದುಕೊಂಡು ಮತಾಂಧರನ್ನು ಹುಡುಕಲು ಸಹಾಯ ಮಾಡುತ್ತೇವೆ. ದಕ್ಷಿಣ ಕನ್ನಡದಲ್ಲಿ ಕಳೆದ ಮೂರು ವರ್ಷದಿಂದ ಶಾಂತಿ ಕದಡುವ ಕೆಲಸವಾಗಿರಲಿಲ್ಲ. ಕೇರಳದಿಂದ ಬಂದವರು ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ ಎಂದಿದ್ದಾರೆ.