Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕಾಂಗ್ರೆಸ್ ನಲ್ಲಿ ಸಿಎಂ ಖುರ್ಚಿಗೆ ಪೈಪೋಟಿ : ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಡಿಕೆ ಶಿವಕುಮಾರ್

Facebook
Twitter
Telegram
WhatsApp

ರಾಮನಗರ: ವಿಧಾನಸಭೆ ಚುನಾವಣೆಗೆ ಒಂಭತ್ತು ತಿಂಗಳು ಬಾಕಿ ಇದೆ. ಹೀಗಿರುವಾಗಲೇ ಎಲ್ಲಾ ಪಕ್ಷಗಳು ಗೆಲ್ಲುವ ಪಣತೊಟ್ಟಿದ್ದಾರೆ. ಅದಕ್ಕಾಗಿಯೇ ಈಗಿನಿಂದಲೇ ತಯಾರಿ ನಡೆಸುತ್ತಿವೆ. ಈ ಮಧ್ಯೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮುಂದಿನ ಸಿಎಂ ಆಗುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ.

ರಾಮನಗರದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ದೇವೇಗೌಡರು ಮತ್ತು ಕುಮಾರಣ್ಣಂಗೆ ಅವಕಾಶ ಕೊಟ್ಟಿದ್ದೀರಿ, ನನಗೂ ಒಂದು ಅವಕಾಶ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ನಿನ್ನೆ ಗುಂಡ್ಲುಪೇಟೆಯಲ್ಲೂ ಮಾತನಾಡಿದ್ದು, ನನಗೆ ಯಾರೂ ಅಭಿಮಾನಿ ಇಲ್ಲ. ನನಗೆ ಯಾವ ಬಣವೂ ಇಲ್ಲ. ನನ್ನದು ಒಂದೇ ಬಣ. ಅದು ಕಾಂಗ್ರೆಸ್ ಬಣ. ಸಿಎಂ ಆಗಬೇಕು ಎಂಬುದು ನನ್ನ ಆಸೆಯಲ್ಲ, ಕಾರ್ಯಕರ್ತರ ಆಸೆಯಾಗಿದೆ. ಅವರು ಇಷ್ಟಪಟ್ಟ ಕಾರ್ಯಕರ್ತರ ಹೆಸರನ್ನು ಕೂಗುತ್ತಾರೆ. ಅವರನ್ನು ತಡೆಯೋದಕ್ಕೆ ಆಗಲ್ಲ. ನಾನು ಸಾಕಷ್ಟು ಸಲ ಬೈದಿದ್ದೇನೆ ಎಂದಿದ್ದರು.

ಇದೀಗ ರಾಮನಗರದಲ್ಲಿ ಸಿಎಂ ಆಗುವ ಆಸೆಯನ್ನು ಮತ್ತಷ್ಟು ವ್ಯಕ್ತಪಡಿಸಿದ್ದು, ನಮ್ಮ ಪಕ್ಷದ ಅಭ್ಯರ್ಥಿಯನ್ನು ಇಲ್ಲಿಂದ ನಿಲ್ಲಿಸುತ್ತಿದ್ದೇವೆ. ಅವರನ್ನು ಗೆಲ್ಲಿಸಿ. ನನಗೆ ಹಾರ ಹಾಕುವುದು ಬೇಡ, ಅಭ್ಯರ್ಥಿಯನ್ನು ಗೆಲ್ಲಿಸಿ. ಚಾಮುಂಡಿ ನಮ್ಮ ನಾಡಿನ ದೇವತೆ. ನಿನ್ನೆ ಅಲ್ಲಿಯೂ ಬೇಡಿಕೊಂಡು ಬಂದಿದ್ದೇನೆ. ಈಗ ಇಲ್ಲಿಯೂ ಅದನ್ನೇ ಬೇಡಿಕೊಳ್ಳುತ್ತೇನೆ. ರಾಮನಗರದ ಜನತೆ ಎಲ್ಲರಿಗೂ ಅವಕಾಶ ಕೊಟ್ಟಿದ್ದೀರಿ. ನಮಗೂ ಅವಕಾಶ ಕೊಡಿ ಎಂದು ಕೇಳಿಕೊಂಡಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

Vastu Tips : ಮನೆಯಲ್ಲಿ ಗಡಿಯಾರವನ್ನು ಯಾವ ದಿಕ್ಕಿಗೆ ಇಟ್ಟರೆ ಒಳ್ಳೆಯದು ಗೊತ್ತಾ ?

ಸುದ್ದಿಒನ್ : ವಾಸ್ತು ಎಂದರೆ ಮನೆಗೆ ಮಾತ್ರವಲ್ಲದೇ ಮನೆಯಲ್ಲಿ ಇರುವ  ವಸ್ತುಗಳಿಗೂ ಕೂಡ ಅನ್ವಯಿಸುತ್ತದೆ.  ವಸ್ತುಗಳನ್ನು ಇರಿಸುವ ದಿಕ್ಕನ್ನು ಅವಲಂಬಿಸಿ, ಮನೆಗೆ ನಷ್ಟ ಮತ್ತು ಲಾಭವನ್ನು ಅಂದಾಜಿಸುತ್ತಾರೆ. ವಾಸ್ತು ಪ್ರಕಾರ, ಅನೇಕ ರೀತಿಯ ವಸ್ತುಗಳನ್ನು

ದಿನಕ್ಕೆ 2 ಬಾರಿ ಈ ಪಾನೀಯವನ್ನು ಕುಡಿದರೆ ಕೊಬ್ಬು ಬೆಣ್ಣೆಯಂತೆ ಕರಗುತ್ತದೆ…!

ಸುದ್ದಿಒನ್ : ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಅಧಿಕ ದೇಹದ ತೂಕದ ಬಗ್ಗೆ ಚಿಂತಿಸುತ್ತಿದ್ದಾರೆ. ತೂಕವು ನಿಯಂತ್ರಣದಲ್ಲಿದ್ದರೂ, ಜನರು ಸಾಮಾನ್ಯವಾಗಿ ಬೊಜ್ಜಿನ ಬಗ್ಗೆ ಚಿಂತಿಸುತ್ತಾರೆ. ಅಧಿಕ ತೂಕ ಅಥವಾ ಸ್ಥೂಲಕಾಯತೆಯು ಅಸಹ್ಯವಾಗಿ ಕಾಣುವುದಲ್ಲದೆ, ನಡೆಯಲು ಕಷ್ಟವಾಗುತ್ತದೆ.

ಈ ರಾಶಿಯವರಿಗೆ ಗುಡ್ ಲಕ್ ಗಳ ಸುರಿಮಳೆ….

ಈ ರಾಶಿಯವರಿಗೆ ಗುಡ್ ಲಕ್ ಗಳ ಸುರಿಮಳೆ….   ಬುಧವಾರ ರಾಶಿ ಭವಿಷ್ಯ -ಮೇ-8,2024 ಸೂರ್ಯೋದಯ: 05:50, ಸೂರ್ಯಾಸ್ತ : 06:34 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ ಸಂವತ್ಸರ , ಸಂವತ್2079, ಚೈತ್ರಮಾಸ,

error: Content is protected !!