ಬೆಂಗಳೂರು: ಪಿಎಸ್ ಐ ನೇಮಕಾತಿ ಹಗರಣ ವಿಚಾರವಾಗಿ ರಾಮಲಿಂಗಾ ರೆಡ್ಡಿ ಮಾತನಾಡಿದ್ದು, ನಾವು ಅಧಿಕಾರ ಕಳೆದುಕೊಂಡು ೪ ವರ್ಷ ಆಯ್ತು. ಬಿಜೆಪಿ ಅಧಿಕಾರಕ್ಕೆ ಬಂದು ೩ ವರ್ಷ ಆಯ್ತು. ಆಗ ಅವರಿಗೆ ನಾಲಿಗೆಗೆ ಹಗ್ಗ ಕಟ್ಟಿದ್ವಾ? ಬಾಯಿಗೆ ಬೀಗ ಹಾಕಿದ್ವಾ? ಎಂದು ಪ್ರಶ್ನಿಸಿದ್ದಾರೆ.
ಆಗ ಯಾಕೆ ಸುಮ್ಮನಾಗಿದ್ರು. ಈಗ ಅವರ ಮೇಲೆ ಆರೋಪ ಬಂತಲ್ಲ. ಅದಕ್ಕೆ ನಮ್ಮ ಕಡೆ ತೋರಿಸ್ತಾರೆ. ಆಗ ಏನು ಕಡ್ಲೆಕಾಯಿ, ಕಡ್ಲೆಪುರಿ ತಿನ್ನುತ್ತಿದ್ರಾ?. ವಿರೋಧಪಕ್ಷದಲ್ಲಿ ಬಿಜೆಪಿಯವರು ಇದ್ರಲ್ಲಾ?. ಅವತ್ತು ಸದನದಲ್ಲಿ ಮಾತನಾಡಬಹುದಿತ್ತು. ಕೋರ್ಟ್ ಗೆ ಹೋಗಬಹುದಿತ್ತು. ಲೋಕಾಯುಕ್ತಕ್ಕೆ ದೂರು ಕೊಡಬೇಕಿತ್ತು. ಆಗ ಸುಮ್ಮನಿದ್ದು ಈಗ ಮಾತನಾಡ್ತೀರ. ಮಾಡಿ ತನಿಖೆಯನ್ನ ಮಾಡಿ ಯಾಕೆ ಮಾಡ್ತಿಲ್ಲ ಎಂದಿದ್ದಾರೆ.
ಇನ್ನು ಬೆಂಗಳೂರಿನ ವಾರ್ಡ್ ವಿಂಗಡನೆ ವಿಚಾರವಾಗಿಮಾತನಾಡಿ, ೩೫ ಸಾವಿರಕ್ಕೆ ಅನುಗುಣವಾಗಿ ಮಾಡಿದ್ದಾರೆ. ಕೆಲವು ಕಡೆ ೩೯ ಸಾವಿರ ಜನಸಂಖ್ಯೆಯಿದೆ. ಬಿಜೆಪಿ ಶಾಸಕರಿರುವ ಕಡೆ ೨೦ಕ್ಕೆ. ವಾರ್ಡ್ ಗಳಿಗೆ ಹೆಸರು ಬದಲಾವಣೆ ಮಾಡಿದ್ದಾರೆ. ಹೆಸರು ಬದಲಾಯಿಸುವುದು ಸರ್ಕಾರಕ್ಕಿದೆ. ಆದರೆ ವಾರ್ಡ್ ವಿಂಗಡಿಸಿದವರೆ ಹೆಸರು ಬದಲಾವಣೆ ಮಾಡಿದ್ದಾರೆ. ಬಿಜೆಪಿ ಅನ್ಯಾಯ, ದುರಾಚಾರ ಎಲ್ಲವೂ ಗೊತ್ತಿದೆ. ಜನರಿಗೆ ದುರಾಚಾರದ ಬಗ್ಗೆ ಗೊತ್ತಿದೆ. ನಗರೋತ್ಥಾನ ಯೋಜನೆ ಅನುದಾನ ಸರಿಪಡಿಸುವ ಕೆಲಸ. ೨೮ ಕ್ಷೇತ್ರ ಅಭಿವೃದ್ಧಿಯಾದರೆ ಬೆಂಗಳೂರು ಅಭಿವೃದ್ಧಿ. ಇವರು ಬಿಜೆಪಿ ಶಾಸಕರಿಗೆ ಮಾತ್ರ ಅನುದಾನ ಕೊಡ್ತಾರೆ. ಕಾಂಗ್ರೆಸ್,ಜೆಡಿಎಸ್ ಕ್ಷೇತ್ರಗಳಿಗೆ ಕೊಡಲ್ಲ. ನೀವು ನಮಗೆ ದುಡ್ಡು ಕೊಡೋದು ಬೇಡ ಬಿಡಿ. ಆದರೆ ಬೆಂಗಳೂರು ಅಭಿವೃದ್ಧಿ ಅಂತ ಹೇಳಬೇಡಿ. ಬಿಜೆಪಿ ಶಾಸಕರ ಅಭಿವೃದ್ಧಿ ಅಂತ ಹೇಳಿಕೊಳ್ಳಿ. ಬರಿ ೧೫ ಬಿಜೆಪಿ ಶಾಸಕ ಕ್ಷೇತ್ರ ಅಭಿವೃದ್ಧಿಯಾದರೆ ಆಗಲ್ಲ. ಬೆಂಗಳೂರಿನ ೨೮ ಕ್ಷೇತ್ರಗಳ ಅಭಿವೃದ್ಧಿಯಾಗಬೇಕು ಎಂದಿದ್ದಾರೆ.