Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಅಲಿಪುರದಲ್ಲಿ ಗೋಡೆ ಕುಸಿದು ಕನಿಷ್ಠ 4 ಸಾವು, 9 ಮಂದಿ ಗಂಭೀರ ಗಾಯ..!

Facebook
Twitter
Telegram
WhatsApp

ನವದೆಹಲಿ: ಶುಕ್ರವಾರ (ಜುಲೈ 15) ದೆಹಲಿಯ ಅಲಿಪುರ ಬಳಿಯ ಗೋಡೌನ್‌ನಲ್ಲಿ ಗೋಡೆ ಕುಸಿದು ಕನಿಷ್ಠ ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು ಒಂಬತ್ತು ಮಂದಿ ಗಾಯಗೊಂಡಿದ್ದಾರೆ. ದೆಹಲಿ ಅಗ್ನಿಶಾಮಕ ಇಲಾಖೆಯ ಪ್ರಕಾರ, ಗೋಡೆಯು ನಿರ್ಮಾಣ ಹಂತದಲ್ಲಿತ್ತು. ಜೊತೆಗೆ ಹಲವಾರು ಜನರು ಸಿಕ್ಕಿಬಿದ್ದಿರುವ ಅನುಮಾನವಿದೆ. ಮಧ್ಯಾಹ್ನ 12:42 ರ ಸುಮಾರಿಗೆ ಇದ್ದಕ್ಕಿದ್ದಂತೆ ಗೋಡೆ ಕುಸಿದಿದೆ.

ಗಾಯಗೊಂಡ ಒಂಬತ್ತು ಮಂದಿಯಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. “ಸ್ಥಳದಿಂದ ಅವಶೇಷಗಳನ್ನು ತೆರವುಗೊಳಿಸಲಾಗುತ್ತಿದೆ” ಎಂದು ದೆಹಲಿ ಪೊಲೀಸರನ್ನು ಉಲ್ಲೇಖಿಸಿ ಎಎನ್‌ಐ ಹೇಳಿದೆ. ನಾಲ್ಕು ಅಗ್ನಿಶಾಮಕ ಟೆಂಡರ್‌ಗಳು ಸ್ಥಳಕ್ಕೆ ಧಾವಿಸಿ, ಕಾರ್ಯಾಚರಣೆ ನಡೆಸುತ್ತಿವೆ.

ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಇನ್ನು ಹೆಚ್ಚಿನ ಜನರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪರಿಹಾರ ನೀಡುವುದರ ಮೇಲೆ ನಿಗಾ ಇರಿಸಿದ್ದಾರೆ ಮತ್ತು ಗೋಡೆ ಕುಸಿತದ ಸಾವಿನ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ.

“ಅಲಿಪುರದಲ್ಲಿ ಅತ್ಯಂತ ದುರಂತ ಘಟನೆ ನಡೆದಿದೆ. ಜಿಲ್ಲಾಡಳಿತವು ಪರಿಹಾರ ಮತ್ತು ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ನಾನು ಪರಿಹಾರ ಕಾರ್ಯವನ್ನು ಮೇಲ್ವಿಚಾರಣೆ ಮಾಡುತ್ತಿದ್ದೇನೆ. ಮೃತರ ಆತ್ಮಕ್ಕಾಗಿ ನಾನು ಪ್ರಾರ್ಥಿಸುತ್ತೇನೆ” ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹನುಮಾನ್ ಅವತಾರದಲ್ಲಿ ರಿಷಭ್ ಶೆಟ್ಟಿ : ಹೊಸ ಅವತಾರ ನೋಡಿ ಕರ್ನಾಟಕದ ಫ್ಯಾನ್ಸ್ ಶಾಕ್

ಕಾಂತಾರಾ ಸಿನಿಮಾ ಮಾಡಿ ಇಡೀ ದೇಶದಾದ್ಯಂತ ಹೆಸರುವಾಸಿಯಾದ ರಿಷಬ್ ಶೆಟ್ಟಿ ಹೊಸ ಅವತಾರವೆತ್ತಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ರಿಷಬ್ ಶೆಟ್ಟಿ ಈಗ ಜೈ ಹನುಮಾನ್ ಆಗಿ ಬರ್ತಿದ್ದಾರೆ. ನಟ ರಿಷಬ್ ಶೆಟ್ಟಿ ತಮ್ಮ ಸೋಷಿಯಲ್

ಏನು ಇಲ್ಲ ಎಂದವರಿಗೆ ಹನುಮಂತು ಎಂಥಾ ಆಟ ತೋರಿಸಿದ್ರು ನೋಡಿ : 2ನೇ ಸಲ ಕ್ಯಾಪ್ಟನ್.. ಮನೆ ಮಂದಿ ಶಾಕ್..!

ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಕುರಿಗಾರ್ ಹನುಮಂತು ಬಂದಿರೋದು ನಿಮ್ಗೆಲ್ಲಾ ಗೊತ್ತೆ‌ ಇದೆ. ಪಕ್ಕಾ ಉತ್ತರ ಕರ್ನಾಟದ ಗ್ರಾಮೀಣ ಭಾಗದ ಪ್ರತಿಭೆಯೇ ಸರಿ. ಬಿಗ್ ಬಾಸ್ ಮನೆಯಲ್ಲೂ ಸದಾ ಪಕ್ಕ

ಮಗನ ಆತ್ಮಕ್ಕೆ ಶಾಂತಿ ಸಿಗಲಿ : ರೇಣುಕಾಸ್ವಾಮಿ ತಂದೆ ಹೇಳಿದ್ದೇನು ?

ಚಿತ್ರದುರ್ಗ : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿಯಾಗಿದ್ದ ನಟ ದರ್ಶನ್ ಸದ್ಯ ಮಧ್ಯಂತರ ಜಾಮೀನಿನ ಮೇಲೆ ರಿಲೀಸ್ ಆಗಿದ್ದಾರೆ. ಬಳ್ಳಾರಿ ಜೈಲು ಸೇರಿದ ಮೇಲೆ ವಿಪರೀತ ಬೆನ್ನು ನೋವಿನಿಂದ ಬಳಲುತ್ತಿದ್ದರು. ಜೈಲು ಅಧಿಕಾರಿಗಳು ಮೆಡಿಕಲ್

error: Content is protected !!