ಬೆಂಗಳೂರು: ಬಿಜೆಪಿ ಚಿಂತನ ಮಂಥನ ಸಭೆ, ನಂದಿಬೆಟ್ಟದಲ್ಲಿ ಆರಂಭವಾಗಿದೆ. ಈ ಸಭೆಯಲ್ಲಿ ಆರ್ಎಸ್ಎಸ್ ಪ್ರಮುಖರಾದ ಸುಧೀರ್, ಮುಕುಂದ್ ಭಾಗಿಯಾಗಿದ್ದಾರೆ. ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಸಿಎಂ ಬಸವರಾಜ ಬೊಮ್ಮಾಯಿ,ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್,ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ ಭಾಗಿಯಾಗಿದ್ದಾರೆ.
ಇನ್ನು ಆಯ್ದ ಕೆಲ ಸಚಿವರಿಗೆ ಅಹ್ವಾನ ನೀಡಲಾಗಿದೆ. ಕೋರ್ ಕಮಿಟಿ ಸದಸ್ಯರಿಗೂ ಅಹ್ವಾನ ನೀಡಲಾಗಿದೆ. 2023 ರ ಚುನಾವಣಾ ತಯಾರಿ ಸಭೆ ಇದಾಗಿದೆ ಎನ್ನಲಾಗಿದೆ. ಪಕ್ಷ ಸಂಘಟನೆ ಬಗ್ಗೆ ಗಂಭೀರ ಚರ್ಚೆ ನಡೆಸಲಾಗಿದೆ. ಕಾರ್ಯಕರ್ತರಿಗೆ ನಿಗಮ ಮಂಡಳಿ ಅಧಿಕಾರ ಕೊಡುವ ಬಗ್ಗೆ ಚರ್ಚೆ ನಡೆಯಲಿದೆ ಎನ್ನಲಾಗಿದೆ.
ಸರ್ಕಾರದ ವಿರುದ್ಧ ಕೇಳಿ ಬಂದಿರುವ ಆರೋಪಗಳು ಹಾಗೂ ಕಾಂಗ್ರೆಸ್ ಮಾಡ್ತಿರುವ ಆರೋಪಗಳಿಗೆ ತಿರುಗೇಟು ಕೊಡುವ ಪ್ರತಿತಂತ್ರದ ಬಗ್ಗೆ ಚರ್ಚೆ ನಡೆಸುತ್ತಾರೆ ಎನ್ನಲಾಗಿದೆ. ಸರ್ಕಾರಕ್ಕೆ ಡ್ಯಾಮೇಜ್ ಮಾಡ್ತಿರುವ ಸಚಿವರಿಗೆ ಎಚ್ಚರಿಕೆ ಕೊಡುವ ಸಾಧ್ಯತೆ ಇದೆ. ಭ್ರಷ್ಟಾಚಾರದ ಆರೋಪಗಳಿಂದ ಹೊರ ಬರುವುದರ ಬಗ್ಗೆ ತಂತ್ರಗಾರಿಕೆ ರೂಪಿಸಿ ಅನ್ನೋ ಸಲಹೆ, ನಿಗಮ ಮಂಡಳಿ ಪಟ್ಟಿ ಅಂತಿಮ ಪಡಿಸುವ ಬಗ್ಗೆ ಚರ್ಚೆ, 2023 ರ ಚುನಾವಣೆಗೆ ಬಳಸಬೇಕಾದ ಚುನಾವಣಾ ಅಸ್ತ್ರಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.