ಚಿತ್ರದುರ್ಗ, (ಜು.14) : ಇದೇ ಜುಲೈ 16 ಹಾಗೂ 17ರಂದು ಅರ್ಬನ್ ಇಂಡಿಯಾದ ವತಿಯಿಂದ ನಗರದ ಕಾಟಮ್ಮ ಪಟೇಲ್ ವೀರನಾಗಪ್ಪ ಕಲ್ಯಾಣ ಮಂಟಪದಲ್ಲಿವಿವಿಧ ರಾಜ್ಯಗಳ ಸೀರೆಗಳು, ಕರಕುಶಲ ಹಾಗೂ ಅಲಂಕಾರಿಕ ವಸ್ತುಗಳು, ಬೆಳ್ಳಿ ಆಭರಣಗಳು ಮತ್ತು ಗ್ರಾಮೋದ್ಯೋಗ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮೇಳದ ಸಂಘಟಕಿ ನಿರಂಜನಿ ರವೀಂದ್ರ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅರ್ಬನ್ ಇಂಡಿಯಾ ವಿಶಿಷ್ಟ ಶಾಪಿಂಗ್ ಅನುಭವ ನೀಡುತ್ತದೆ. ಪ್ರಸಿದ್ಧ ಬ್ರಾಂಡ್‍ಗಳ ವಸ್ತುಗಳು ಇಲ್ಲಿ ದೊರೆಯಲಿವೆ. ವಾರಣಾಸಿಯಲ್ಲಿ ಕೈಮಗ್ಗದಿಂದ ನೇಯ್ದು ತರಲಾದ ಬನಾರಸ್ ಸಿಲ್ಕ್ ಹಾಗೂ ಕಾಟನ್ ಸೀರೆಗಳು, ಸಹ – ದಿ ಕ್ರಾಪ್ಟರ್ಸ್, ಬೆಂಗಳೂರು ಇವರಿಂದ ಡಿಸೈನರ್ಸ್ ಸ್ಯಾರಿ ಮತ್ತು ಬ್ರೌಸ್ಟ್‍ಗಳು, ಹೊಸಪೇಟೆಯ ಶ್ರೀದೇವಿ ಸಿನವರಿಂದ ಸಿಲ್ಕ್ ಸೀರೆಗಳು, ಅಕ್ಷಯ ಶುಭ್ರ ರವರಿಂದ ಶುದ್ಧ ಬೆಳ್ಳಿಯ ಆಭರಣಗಳು ಹಾಗೂ ವಿವಿಧ ಹರಳಿನ ಆಭರಣಗಳು, ಪೆಹಚಾನ್‍ನವರಿಂದ ಸಿಲ್ವರ್ ಇಮಿಟೇಷನ್ ಜ್ಯೂಯಲರಿಗಳು, ಬೆಂಗಳೂರಿನ ಟ್ರಡಿಷನಲ್ ಕುರ್ತಿಸ್ ಇವರಿಂದ ಕುರ್ತೀಸ್, ಕಾಟನ್ ಮತ್ತು ಸಿಲ್ಕ್ ಕುರ್ತೀಸ್, ಲಕ್ಷಾವಿ ಚಿಕನ್ನರಿ ಕುರ್ತಿಗಳು, ಸ್ವೀಟೂ ಹೋಮ್ ಫರ್ನಿಷಿಂಗ್ ನವರಿಂದ ಜೈಪುರ್ ಬ್ಲಾಕ್ ಪ್ರಿಂಟ್ ಬೆಡ್ ಸ್ಟೇಟ್ರ್ಸ್‍ಗಳು, ಇಸ್ತಾ ಹ್ಯಾಂಡ್‍ಮೇಡ್ ಇವರಿಂದ ಹ್ಯಾಂಡ್ ಮೇಡ್ ಸೋಪ್ ಮತ್ತು ಕಾಸ್ಟೇಟಿಕ್ಸ್‍ಗಳು, ಶಿವಮೊಗ್ಗದ ಅನಿತಾ ಜ್ಯೂಯಲರ್ಸ್ ರವರಿಂದ ಆಭರಣಗಳು, ಸ್ವಸ್ತಾ ಕುಕ್‍ವೇರ್‍ನವರಿಂದ ಕುಕ್‍ವೇರ್ ಸಾಮಾಗ್ರಿಗಳು ಕೂಡ ಇಲ್ಲಿ ದೊರೆಯಲಿದೆ ಎಂದು ಹೇಳಿದರು.
ಚಿತ್ರದುರ್ಗದಲ್ಲಿರುವ ಆಸಕ್ತ ಕಲಾವಿದರು, ಡಿಸೈನರ್ಸ್‍ಗಳು, ಉದ್ಯಮಿಗಳು ಮತ್ತು ಕುಶಲಕರ್ಮಿಗಳು ಕೂಡ ಈ ಮೇಳದಲ್ಲಿ ಭಾಗವಹಿಸಬಹುದಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀಮತಿ ಹೇಮಲತಾ ವಿರೇಂದ್ರ, ಶ್ರೀಮತಿ ಶ್ಯಾಮಲ ಶಿವಪ್ರಕಾಶ್, ಶ್ರೀಮತಿ ರಾಜೇಶ್ವರಿ ಹಾಜರಿದ್ದರು.