ಚಿತ್ರದುರ್ಗ : ನಗರದ ಎಸ್.ಆರ್.ಎಸ್ ಹೆರಿಟೇಜ್ ಶಾಲೆಯಲ್ಲಿ ಶಾಲಾತಂಡಗಳ ಪದಗ್ರಹಣ ಕಾರ್ಯಕ್ರಮ (2022-2023) ನಡೆಯಿತು.
ಶಾಲಾ ತಂಡಗಳ ಉದ್ಘಾಟನಾ ಸಮಾರಂಭ ಶಾಂತಿಯ ಮತ್ತು ಸ್ವಾತಂತ್ರ್ಯದ ಸಂಕೇತವಾದ ಪಾರಿವಾಳಗಳನ್ನು ಬಾನಿನತ್ತ ಹಾರಿಸುವುದರ ಮೂಲಕ ಕಾರ್ಯಕ್ರಮ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ,ಕೆ ಪರಶುರಾಮ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು, ಭಾಗವಹಿಸಿ ಮಾತನಾಡಿದರು. ಪದಗ್ರಹಣ ಸಮಾರಂಭವು ಶಾಲಾ ಹಂತದಲ್ಲಿಯೇ ಭವಿಷ್ಯದ ನಾಯಕರನ್ನು ರೂಪಿಸುವ ಪ್ರಕ್ರಿಯೆಯಾಗಿದ್ದು, ಪ್ರಜಾಪ್ರಭುತ್ವ ಮಾದರಿಯಲ್ಲಿ ಆಯ್ಕೆಯಾದ ಪದಾಧಿಕಾರಿಗಳು ತಮ್ಮ ಅಧಿಕಾರಗಳೊಂದಿಗೆ, ಜವಾಬ್ದಾರಿಯನ್ನು ನಿರ್ವಹಿಸುವ ಸಲುವಾಗಿ ಅಧಿಕೃತವಾಗಿ ಎಲ್ಲಾ ಗಣ್ಯಮಹಾನೀಯರ ಸಮ್ಮುಖದಲ್ಲಿ ತಮಗೆ ವಹಿಸಿರುವ ಜವಾಬ್ದಾರಿಯನ್ನು ಪ್ರಜ್ಞಾಪೂರ್ವಕವಾಗಿ ಪ್ರತಿಜ್ಞೆಗೈದಿದ್ದಾರೆ.
ಈ ಸಮಾರಂಭದಲ್ಲಿ ಭಾಗವಹಿಸಿ ಮಕ್ಕಳಿಗೆ ಮುಂದಿನ ನಾಯಕರಾಗುವ ಬಗ್ಗೆ ಹಾಗೂ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಯಾವ ರೀತಿ ಕಾರ್ಯ ಪ್ರವೃತರಾಗಬೇಕು ಎಂದು ಸೂಕ್ತ ರೀತಿಯಲ್ಲಿ ಮಾರ್ಗದರ್ಶನ ಮಾಡಿದ ಶ್ರೀಯುತ ಜಿ ಎಮ್ ತಿಪ್ಪೆಸ್ವಾಮಿ, ಜಿಲ್ಲಾ ಸಹಾಯಕ ಪೋಲಿಸ್ ವರಿಷ್ಠಾಧಿಕಾರಿಗಳು, ಚಿತ್ರದುರ್ಗ ಮಕ್ಕಳನ್ನು ಕುರಿತು ಪ್ರಶಂಶಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿ.ಎ. ಲಿಂಗಾರೆಡ್ಡಿ, ಭವಿಷ್ಯತ್ತಿನ ನಾಯಕರ ಕರ್ತವ್ಯಗಳನ್ನು ಮಕ್ಕಳಿಗೆ ತಿಳಿಸುವುದರ ಜೊತೆ ಶಾಲಾತಂಡಗಳ ಪಥಸಂಚಲನ ಹಾಗೂ ಪದಾಧಿಕಾರಿಗಳ ಕರ್ತವ್ಯ ಮತ್ತು ಜವಬ್ದಾರಿ ಕುರಿತು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ರವಿಕುಮಾರ್, ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರು ಮಾತನಾಡಿ ಶಾಲೆಯ ಉತ್ತಮ ಗುಣಮಟ್ಟದ ಶಿಕ್ಷಣ ಪಡೆದ ಮಕ್ಕಳು ದೇಶ ಮತ್ತು ವಿದೇಶಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಮತ್ತು ಸಂಸ್ಥೆಯು ಸುಸಜ್ಜಿತ ಶಾಲಾ ಕಟ್ಟಡ ಸುಂದರ ಪರಿಸರ ವಿದ್ಯಾರ್ಥಿಯ ಜೀವನದ ಗುರಿ ಮತ್ತು ಉದ್ದೇಶಗಳನ್ನು ಕುರಿತು ಮುಂದಿನ ದಿನಗಳಲ್ಲಿ ಹೆಚ್ಚಿನ ಸಾಧನೆಯ ಪಥದಲ್ಲಿ ಸಾಗಬೇಕು ಎಂದು ನೆರೆದ ಮಕ್ಕಳಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ|| ರವಿ ಟಿ ಆಡಳಿತಾಧಿಕಾರಿಗಳು, ಎಸ್‍ಆರ್‍ಎಸ್ ಶಿಕ್ಷಣ ಸಮೂಹ ಸಂಸ್ಥೆಗಳು, ಶಾಲೆಯ ಪ್ರಾಂಶುಪಾಲರಾದ ಪ್ರಭಾಕರ್ ಎಮ್‍ಎಸ್ ಮತ್ತು ಕೋ-ಆರ್ಡಿನೇಟರ್‍ಗಳಾದ ಜಗದೀಶ್, ವಿನೋದ್ ಅಲ್ಮೆಡಾ, ರಾಕೇಶ್, ಶಾಲೆಯ ಬೋಧಕ ಮತ್ತು ಬೋಧಕೇತರ ವರ್ಗ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.